ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಕ್ಯಾಬ್ ಚಾಲಕ.. ಡಿಕ್ಕಿಯಲ್ಲಿ ಅವಿತಿದ್ದವನೊಂದಿಗೆ ಸೇರಿ ದರೋಡೆ ಯತ್ನ

ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಕ್ಯಾಬ್ ಚಾಲಕ.. ಡಿಕ್ಕಿಯಲ್ಲಿ ಅವಿತಿದ್ದವನೊಂದಿಗೆ ಸೇರಿ ದರೋಡೆ ಯತ್ನ

ಬೆಂಗಳೂರು : ಕಾರಿನ ಡಿಕ್ಕಿಯಲ್ಲಿ ಕುಳಿತು ದರೋಡೆಗೆ ಯತ್ನಿಸಿದ ಗ್ಯಾಂಗ್​ ಪೊಲೀಸರ ಬಲೆಗೆ ಬಿದ್ದ ಘಟನೆ ಬೆಂಗಳೂರಿನ ಬಾಗಲೂರು ಬಳಿ ನಡೆದಿದೆ.

ನಿನ್ನೆ ಬೆಳಿಗ್ಗೆ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಕರ್ನಲ್​​ ಯಾದವ್ ಎಂಬವರು, ನಗರದ ಏರ್​ಪೋರ್ಟ್​ನಿಂದ ಓಲಾದಲ್ಲಿ ಹೊರಟಿದ್ದರು. ನಿರ್ಜನ ಪ್ರದೇಶದತ್ತ ಕಾರು ಚಲಾಯಿಸಿಕೊಂಡು ಹೋದ ಓಲಾ ಚಾಲಕ, ಡಿಕ್ಕಿಯಲ್ಲಿ ಶಬ್ದ ಬರುತ್ತಿದೆ ಎಂದು ಕಾರಿಂದ ಕೆಳಗಿಳಿಯಲು ಹೇಳಿದ್ದಾನೆ. ಇದೇ ವೇಳೆ ಡಿಕ್ಕಿಯಲ್ಲಿ ಅವಿತಿದ್ದ ಕಳ್ಳರ ಗ್ಯಾಂಗ್​ ಏಕಾಏಕಿ ಕರ್ನಲ್​ರ ಮೇಲೆ ಅಟ್ಯಾಕ್​ ಮಾಡಿತು ಎನ್ನಲಾಗಿದೆ.

ದರೋಡೆಕೋರರನ್ನು ತಳ್ಳಿ ಪರಾರಿಯಾಗಲು ಯತ್ನಸಿದ ಕರ್ನಲ್​, ಅದೇ ದಾರಿಯಲ್ಲಿ ಸಿಕ್ಕ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪಿಐ ಪ್ರಶಾಂತ್​​ ನೇತೃತ್ವದ ತಂಡ

blank
ಯಾದವ್

ಗ್ಯಾಂಗ್​ನ ಬೆನ್ನತ್ತಿದ್ದು ಒಬ್ಬನನ್ನು ಬಂಧಿಸಿದ್ದಾರೆ. ಇನ್ನೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.

The post ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಕ್ಯಾಬ್ ಚಾಲಕ.. ಡಿಕ್ಕಿಯಲ್ಲಿ ಅವಿತಿದ್ದವನೊಂದಿಗೆ ಸೇರಿ ದರೋಡೆ ಯತ್ನ appeared first on News First Kannada.

Source: newsfirstlive.com

Source link