ನಮ್ಮ ಲೀಡರ್​ಶಿಪ್​ ಬಗ್ಗೆ ಒಪ್ಪಿಗೆ ಇರುವವರೆಲ್ಲ ಪಕ್ಷಕ್ಕೆ ಬರಬಹುದು- ಡಿ.ಕೆ. ಶಿವಕುಮಾರ್

ನಮ್ಮ ಲೀಡರ್​ಶಿಪ್​ ಬಗ್ಗೆ ಒಪ್ಪಿಗೆ ಇರುವವರೆಲ್ಲ ಪಕ್ಷಕ್ಕೆ ಬರಬಹುದು- ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾದವರನ್ನ​​ ಪಕ್ಷಕ್ಕೆ ಮತ್ತೆ ವಾಪಸ್​ ಕರೆತರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.. ಯಾರಿಗೆ ನಮ್ಮ ಲೀಡರ್​ಶಿಪ್​ ಬಗ್ಗೆ ಒಪ್ಪಿಗೆ ಇದೆಯೋ ಅವರೆಲ್ಲ ಪಕ್ಷಕ್ಕೆ ಬರಬಹುದು.. ಕಾಂಗ್ರೆಸ್‌ ಸಿದ್ಧಾಂತದ ಬಗ್ಗೆ ನಂಬಿಕೆ ಇದ್ದವರು ಬರ್ಲಿ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು, ನಾನು ಕೇವಲ 17 ಜನರ ಬಗ್ಗೆ ಮಾತ್ರ ಹೇಳುತ್ತಿಲ್ಲ, ನೀವು ಕೂಡ ಬನ್ನಿ ಎಂದು ಹೇಳಿದ್ದಾರೆ.

ನಮ್ಮಲ್ಲಿ ಒಂದು ಸಮಿತಿ ಇದೆ ಆ ಸಮಿತಿ ಸ್ಕ್ರೂಟನಿ ಮಾಡತ್ತೆ, ಆಮೇಲೆ ಬ್ಲಾಕ್ ಕಾರ್ಯರ್ತರು ಜಿಲ್ಲಾ ಕಾರ್ಯಕರ್ತರ ಅಭಿಪ್ರಾಯ ಕೇಳ್ತೀವಿ. ಮೊದಲು ಅರ್ಜಿ ಹಾಕ್ಲಿ ಅಮೇಲೆ ನೋಡೋಣ ಎಂದಿದ್ದಾರೆ. ಹಾಗಾದರೆ ಯಾರ್ ಯಾರು ಅರ್ಜಿ ಹಾಕಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈಗ ಡಿಸ್ ಕ್ಲೋಸ್ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

The post ನಮ್ಮ ಲೀಡರ್​ಶಿಪ್​ ಬಗ್ಗೆ ಒಪ್ಪಿಗೆ ಇರುವವರೆಲ್ಲ ಪಕ್ಷಕ್ಕೆ ಬರಬಹುದು- ಡಿ.ಕೆ. ಶಿವಕುಮಾರ್ appeared first on News First Kannada.

Source: newsfirstlive.com

Source link