ಸಿದ್ದರಾಮಯ್ಯಗೆ ಮತ್ತೆ ಲಕ್ ತಂದುಕೊಡುತ್ತಂತೆ ಜುಲೈ ತಿಂಗಳು.. ಏನಿದು ಲೆಕ್ಕಾಚಾರ..?

ಸಿದ್ದರಾಮಯ್ಯಗೆ ಮತ್ತೆ ಲಕ್ ತಂದುಕೊಡುತ್ತಂತೆ ಜುಲೈ ತಿಂಗಳು.. ಏನಿದು ಲೆಕ್ಕಾಚಾರ..?

ಬೆಂಗಳೂರು: ಸಿದ್ದರಾಮಯ್ಯರ ಪಾಲಿಗೆ ಜುಲೈ ತಿಂಗಳು ಮಹತ್ವದ ತಿಂಗಳಂತೆ..ಹೀಗಂತ ರಾಜಕೀಯ ವಲಯದಲ್ಲಿ ಲೆಕ್ಕಾಚಾರಗಳು ಶುರುವಾಗಿವೆ.. ಅಷ್ಟಕ್ಕೂ ಸಿದ್ಧರಾಮಯ್ಯರಿಗೆ ಜುಲೈ ತಿಂಗಳು ಅಂದ್ರೆ ಲಕ್ ಕುಲಾಯಿಸುವ ತಿಂಗಳು ಅಂತ ಭಾಸವಾಗುವುದೇಕೆ? ಸಿದ್ದರಾಮಯ್ಯರಿಗೂ ಜುಲೈ ತಿಂಗಳಿಗೂ ಇರುವ ನಂಟಿನ ಇಂಚಿಂಚೂ ಮಾಹಿತಿ ಇಲ್ಲಿದೆ.

ಹಾಗೆ ನೋಡಿದ್ರೆ ವಿಪಕ್ಷ ನಾಯಕ ಸಿದ್ದರಾಮಯ್ಯನ ರಾಜಕೀಯ ಭವಿಷ್ಯ ಬದಲಾಗಿದ್ದೇ ಜುಲೈ ತಿಂಗಳಲ್ಲಿ. ಈಗಾಗಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಗೊಂದಲದ ವಿಚಾರ ಮುಂದುವರೆದಿದ್ದು..ಈ ನಿಟ್ಟಿನಲ್ಲಿ, ಇದೇ ತಿಂಗಳಲ್ಲಿ ಮತ್ತೆ ಸಿದ್ದರಾಮಯ್ಯ ಭವಿಷ್ಯ ಬದಲಾದರೂ ಅಚ್ಚರಿ ಇಲ್ಲ ಎನ್ನಲಾಗ್ತಿದೆ.

ಇನ್ನು ಈಗಾಗಲೇ ಮುಂದಿನ ಸಿಎಂ ವಿಚಾರದಲ್ಲಿ ಹೆಚ್ಚಿನ ಕೈ ನಾಯಕರು ಸಿದ್ಧರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಆದ್ರೆ ಈ ವಿಚಾರದಲ್ಲಿ ಸೈಲೆಂಟ್ ಆಗಿರುವ ಹೈಕಮಾಂಡ್ ಏನಾದರೂ ಜುಲೈ ತಿಂಗಳಲ್ಲೇ ಗೊಂದಲಕ್ಕೆ ಬ್ರೇಕ್ ಹಾಕುತ್ತಾರಾ..? ಇದೇ ಜುಲೈ ತಿಂಗಳಲ್ಲಿ ಹೈಕಮಾಂಡ್ ಕೊಡುವ ಸಂದೇಶದಲ್ಲಿದೆ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನಿರ್ಧಾರ ಎಂದು ಹೇಳಲಾಗಿದೆ.

ಅಷ್ಟಕ್ಕೂ ಏನಿದು ಸಿದ್ದರಾಮಯ್ಯರ ಜುಲೈ 22 ರಾಜಕೀಯ ಭವಿಷ್ಯ ಅಂತ ನೋಡುವುದಾದ್ರೆ..
1. ಸಿದ್ದರಾಮಯ್ಯ ಜೆಡಿಎಸ್‌ನಿಂದ ಕಾಂಗ್ರೆಸ್ ಬಂದಿದ್ದು 2006 ಜುಲೈ 22 ರಂದು.
2. ಅಲ್ಲಿಗೆ ಸಿದ್ದರಾಮಯ್ಯ ಕಾಂಗ್ರೆಸ್ ಬಂದು ಈ ಜುಲೈ 22 ಕ್ಕೆ, ಹದಿನೈದು ವರ್ಷ ಆಗುತ್ತದೆ.
3. ಇನ್ನು ಬಳ್ಳಾರಿ ಚಲೋ ಪಾದಯಾತ್ರೆ ಪ್ಲಾನ್ ಶುರುವಾಗಿದ್ದೇ 2010 ಜುಲೈ 22ರಂದು. ಆದರೆ ಪಾದಯಾತ್ರೆ ಆರಂಭವಾಗಿದ್ದು ಅದೇ ಜುಲೈ 25 ರಿಂದ.
4. ಅಲ್ಲಿಗೆ ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬಂದು ನಾಲ್ಕು ವರ್ಷದ ಬಳಿಕ ಪಾದಯಾತ್ರೆ ಆರಂಭ.

ಹಾಗಾದರೆ ಜುಲೈ ತಿಂಗಳಲ್ಲೇ ಹೈಕಮಾಂಡ್‌ನಿಂದ ಸಿದ್ದರಾಮಯ್ಯಗೆ ಸಿಗಬಹುದಾ ಗುಡ್ ನ್ಯೂಸ್?
1. 2010ರಲ್ಲಿ “ಬಳ್ಳಾರಿ ಚಲೋ” ಪಾದಯಾತ್ರೆ ಮಾಡಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದೇ ಸಿದ್ದರಾಮಯ್ಯ ಎಂಬ ಹೆಗ್ಗಳಿಕೆ ಕಾಂಗ್ರೆಸ್‌ನಲ್ಲಿದೆ.
2. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರೆಂಬುವುದು‌ ಘೋಷಣೆ ಮಾಡುವುದು ಅಸಾಧ್ಯ.
3. ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯಾಗಬೇಕಿದೆ ಹಾಗೂ ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕದಲ್ಲೂ ಹೈಕಮಾಂಡ್ ತೀರ್ಪು ಸಿದ್ದರಾಮಯ್ಯ ಕಡೆ ಎಂಬುವುದು ಸಾಬೀತಾಗಿದೆ.
4. ಹೀಗಾಗಿ ಜುಲೈ ತಿಂಗಳಲ್ಲೇ ಸಿದ್ದರಾಮಯ್ಯರನ್ನು ಮುಂದಿನ ಸಿಎಂ ಆಗಿ ಘೋಷಣೆ ಮಾಡದಿದ್ದರೂ, ಚುನಾವಣೆ ಸಾರಥಿಯಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
5. ಇನ್ನೂ ಸಿದ್ದರಾಮಯ್ಯ ಪ್ಲಾನ್​ನಂತೆ ಕಾಂಗ್ರೆಸ್‌ನಲ್ಲಿ ಕಗ್ಗಂಟಾಗಿರುವ ಅಹಿಂದ ಸಮಾವೇಶಕ್ಕೆ ಗ್ರೀನ್ ಸಿಗ್ನಲ್ ಸಿಗಬಹುದು.
ಹೀಗೆ, ಜುಲೈ ತಿಂಗಳಿಗೂ ಸಿದ್ಧರಾಮಯ್ಯರಿಗೂ ಅವಿನಾಭಾವ ಸಂಬಂಧವಿದ್ದು, ಮತ್ತೆ ಜುಲೈ ತಿಂಗಳು ಸಿದ್ಧರಾಮಯ್ಯರಿಗೆ ಲಕ್ ಕುಲಾಯಿಸುತ್ತಾ? ಕುತೂಹಲ ಕೆರಳಿಸಿದೆ.

The post ಸಿದ್ದರಾಮಯ್ಯಗೆ ಮತ್ತೆ ಲಕ್ ತಂದುಕೊಡುತ್ತಂತೆ ಜುಲೈ ತಿಂಗಳು.. ಏನಿದು ಲೆಕ್ಕಾಚಾರ..? appeared first on News First Kannada.

Source: newsfirstlive.com

Source link