ಭವಿಷ್ಯದ ಡ್ರೋಣ್ ದಾಳಿ ತಡೆ​​ಗೆ ಪ್ಲಾನಿಂಗ್;​ ಕೇರಳದಲ್ಲಿ ಸ್ಥಾಪನೆಯಾಗ್ತಿದೆ ಡ್ರೋಣ್ ರಿಸರ್ಚ್ ಲ್ಯಾಬ್

ಭವಿಷ್ಯದ ಡ್ರೋಣ್ ದಾಳಿ ತಡೆ​​ಗೆ ಪ್ಲಾನಿಂಗ್;​ ಕೇರಳದಲ್ಲಿ ಸ್ಥಾಪನೆಯಾಗ್ತಿದೆ ಡ್ರೋಣ್ ರಿಸರ್ಚ್ ಲ್ಯಾಬ್

ತಿರುವನಂತಪುರಂ: ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಡ್ರೋನ್ ದಾಳಿ ದೇಶದಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಇದು ಭಾರತದಲ್ಲಿ ನಡೆದ ಮೊದಲ ಡ್ರೋನ್ ದಾಳಿಯಾಗಿದ್ದು, ಮುಂದೆ ಇಂಥ ದಾಳಿಗಳು ನಡೆಯದಂತೆ ತಡೆಯಲು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆ ಮುಂದೆ ಡ್ರೋನ್ ದಾಳಿಗಳನ್ನ ತಡೆಯಲು ಕೇರಳದಲ್ಲಿ ಡ್ರೋನ್ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಕೇರಳ ಪೊಲೀಸ್ ಮುಖ್ಯಸ್ಥ, ಡಿಜಿಪಿ ಅನಿಲ್ ಕಾಂತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಈಗಿನ ದಿನಗಳಲ್ಲಿ ಡ್ರೋನ್‌ಗಳು ಸುಲಭವಾಗಿ ಲಭ್ಯವಾಗುತ್ತಿವೆ. ಇದರಿಂದ ದೇಶದ ಭದ್ರತೆಗೆ ಹೆಚ್ಚಿನ ಸವಾಲು ಎದುರಾಗುತ್ತಿರುವ ಬಗ್ಗೆ ಸೇನಾ ಮುಖ್ಯಸ್ಥ ಎಂ.ಎಂ ನರಾವಣೆ ಮಾತನಾಡಿದ್ದರು. ಅದರ ಮರುದಿನವೇ ಕೇರಳದಲ್ಲಿ ಡ್ರೋನ್ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸುವ ಬಗ್ಗೆ ಘೋಷಿಸಲಾಗಿದೆ. ಡ್ರೋನ್‌ಗಳಿಂದ ಎದುರಿಸುವ ಸುರಕ್ಷತಾ ಸಮಸ್ಯೆಗಳನ್ನ ಪರಿಹರಿಸಲು ಸಂಶೋಧನಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಹಯೋಗ ಮಾಡಿಕೊಳ್ಳುವ ಬಗ್ಗೆಯೂ ನಾವು ಪರಿಗಣಿಸಿದ್ದೇವೆ ಎಂದು ಅನಿಲ್ ಕಾಂತ್ ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಮೊದಲ ಬಾರಿ ನಡೆಯಿತು ಡ್ರೋನ್‌ ದಾಳಿ.. ಇದರ ತಡೆಗೆ ಭಾರತಕ್ಕೆ ಬೇಕೇಬೇಕು ಈ ಸಾಧನ

ಸೆಕ್ಯೂರಿಟಿಗೆ ಸಂಬಂಧಿಸಿದ ಸಮಸ್ಯೆಗಳನ್ನ ಪರಿಹರಿಸಲು ನಾವು ಡ್ರೋನ್ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸುತ್ತೇವೆ. ಕೇರಳ ಪೊಲೀಸರ ಸೈಬರ್​​ಡೋಮ್ ಸಹಾಯದಿಂದ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸಂಶೋಧನಾ ವಲಯದಲ್ಲಿ ಕೇಂದ್ರ ಸರ್ಕಾರದೊಂದಿಗೂ ಸಹಯೋಗ ಮಾಡಿಕೊಳ್ಳಲು ಯೋಚಿಸಿದ್ದೇವೆ ಎಂದು ಕಾಂತ್ ಮಾಧ್ಯಮಕ್ಕೆ ತಿಳಿಸಿದರು. ಅಂದ್ಹಾಗೆ ಸೈಬರ್​ಡೋಮ್ ಅನ್ನೋದು ಕೇರಳ ಪೊಲೀಸ್ ಇಲಾಖೆಯ ತಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ.

 

The post ಭವಿಷ್ಯದ ಡ್ರೋಣ್ ದಾಳಿ ತಡೆ​​ಗೆ ಪ್ಲಾನಿಂಗ್;​ ಕೇರಳದಲ್ಲಿ ಸ್ಥಾಪನೆಯಾಗ್ತಿದೆ ಡ್ರೋಣ್ ರಿಸರ್ಚ್ ಲ್ಯಾಬ್ appeared first on News First Kannada.

Source: newsfirstlive.com

Source link