ಆಡಿಯೋ ಹಕ್ಕು ಮಾರಾಟದಲ್ಲಿ ಬಾಹುಬಲಿಯನ್ನ ಹಿಂದಿಕ್ಕಿದ ಕೆಜಿಎಫ್-2

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್-2 ಆಡಿಯೋ ಹಕ್ಕು ಭಾರೀ ಮೊತ್ತದಲ್ಲಿ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ.

ಇಡೀ ಭಾರತೀಯ ಚಿತ್ರರಂಗವೇ ಕಾದು ಎದುರು ನೋಡುತ್ತಿರುವ ಕೆಜಿಎಫ್-2 ಸಿನಿಮಾದ ಆಡಿಯೋ ಹಕ್ಕು ಮಾರಾಟವನ್ನು ಪ್ರತಿಷ್ಠಿತ ಲಹರಿ ಆಡಿಯೋ ಸಂಸ್ಥೆ ಕೋಟಿ-ಕೋಟಿ ಹಣ ನೀಡಿ ಕೊಂಡುಕೊಂಡಿದೆ. ಈ ಹಿಂದೆ ಕೆಜಿಎಫ್ ಚಾಪ್ಟರ್-1 ಸಿನಿಮಾದ ಆಡಿಯೋ ಹಕ್ಕನ್ನು 3.60 ಕೋಟಿ ರೂ. ನೀಡಿ ಲಹರಿ ಆಡಿಯೋ ಸಂಸ್ಥೆ ಖರೀದಿಸಿತ್ತು. ನಂತರ ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದ ಆಡಿಯೋ ಹಕ್ಕನ್ನು 5.40 ಕೋಟಿ ಹಣ ನೀಡಿ ಕೊಂಡುಕೊಂಡಿದ್ದ ಲಹರಿ ಆಡಿಯೋ ಸಂಸ್ಥೆ, ಇದೀಗ ಕೆಜಿಎಫ್-2 ಸಿನಿಮಾದ ಆಡಿಯೋ ಹಕ್ಕನ್ನು 7.20 ಕೋಟಿ ಹಣ ನೀಡಿ ಖರೀದಿಸುವ ಮೂಲಕ ಬಾಹುಬಲಿ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ.

ಕೆಜಿಎಫ್-2 ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, 5 ಭಾಷೆಗಳ ಆಡಿಯೋ ಹಕ್ಕನ್ನು ಕೂಡ ಲಹರಿ ಸಂಸ್ಥೆಯೇ ಖರೀದಿಸಿದ್ದು, ಚಿತ್ರದ ಹಾಡುಗಳ ಪ್ರಚಾರ ನಡೆಸಲು ಪ್ಲಾನ್ ಹೊಂದಿರುವುದಾಗಿ ಲಹರಿ ವೇಲುರವರು ತಿಳಿಸಿದ್ದಾರೆ.

blank

ಈ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಜಿಎಫ್ ಚಾಪ್ಟರ್-1 ಗಿಂತಲೂ, ಕೆಜಿಎಫ್-2 ಸಿನಿಮಾದ ಹಾಡು ಬಹಳ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಎರಡು ಬಿಟ್‍ಗಳಿವೆ. ಸಂಗೀತಾ ನಿರ್ದೇಶಕ ರವಿಬಸ್ರೂರು ಅದ್ಭುತವಾಗಿ ಹಾಡನ್ನು ಸಂಯೋಜಿಸಿದ್ದಾರೆ. ಇನ್ನೂ ಚಿತ್ರವನ್ನು ನಿರ್ದೇಶಕ ಪ್ರಶಂತ್ ನೀಲ್ ಅಷ್ಟೇ ಚೆನ್ನಾಗಿ ಚಿತ್ರಿಸಿದ್ದಾರೆ. ಕೆಜಿಎಫ್-2 ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತದಲ್ಲಿ ಮಾರಾಟವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಇಡೀ ದಕ್ಷಿಣ ಭಾರತದಲ್ಲಿಯೇ ಅತೀ ದೊಡ್ಡ ಮೊತ್ತದಲ್ಲಿ ಆಡಿಯೋ ಮಾರಾಟವಾದ ಸಿನಿಮಾ ಎಂದರೆ ಅದು ಕೆಜಿಎಫ್-2. ನಮ್ಮ 45 ವರ್ಷದ ಅನುಭವದಲ್ಲಿ ಈ ರೀತಿ ಆಗಿದ್ದು, ಇದೇ ಮೊದಲು. ಕನ್ನಡ ಮಾರುಕಟ್ಟೆಯಲ್ಲಿ ಇಷ್ಟು ಎತ್ತರಕ್ಕೆ ಬೆಳದಿರುವುದು ಸಂತೋಷದ ವಿಚಾರವಾಗಿದೆ. ಇದನ್ನೂ ಓದಿ : ‘ಅ’ ಕಾರಕ್ಕೂ, ‘ಹ’ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ: ಅನಿತಾ ಭಟ್

The post ಆಡಿಯೋ ಹಕ್ಕು ಮಾರಾಟದಲ್ಲಿ ಬಾಹುಬಲಿಯನ್ನ ಹಿಂದಿಕ್ಕಿದ ಕೆಜಿಎಫ್-2 appeared first on Public TV.

Source: publictv.in

Source link