ಬರ್ತ್​​ಡೇ ಪಾರ್ಟಿ ಮುಗಿಸಿ ಈಜಿಗಿಳಿದ ಇಬ್ಬರು ಯುವಕರು ನೀರು ಪಾಲು

ಬರ್ತ್​​ಡೇ ಪಾರ್ಟಿ ಮುಗಿಸಿ ಈಜಿಗಿಳಿದ ಇಬ್ಬರು ಯುವಕರು ನೀರು ಪಾಲು

ಮೈಸೂರು: ಕಪಿಲಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಟಿ. ನರಸೀಪುರ ತಾಲೂಕಿನ ತಡಿ ಮಾಲಂಗಿ ಗ್ರಾಮದ ಬಳಿ ಈ ದುರಂತ ಸಂಭವಿಸಿದ್ದು ಅಭಿಷೇಕ್ (21), ಅಂಕೇಶ್ (21) ಎಂಬುವರು ಸಾವನ್ನಪ್ಪಿದ್ದಾರೆ.

ಚಾಮರಾಜನಗರದ ಯಳಂದೂರು ತಾಲೂಕಿನ ಗ್ರಾಮದ ನಿವಾಸಿಗಳಾದ ಅಭಿಷೇಕ್​​ ಮತ್ತು ಅಂಕೇಶ್​​ ಇಂಜಿನಿಯರಿಂಗ್​​ ಓದುತ್ತಿದ್ದರು. ಚಾಮರಾಜನಗರದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇವರು ಸ್ನೇಹಿತನ ಬರ್ತ್​ಡೇಗಾಗಿ ತಡಿ ಮಾಲಂಗಿ ಗ್ರಾಮಕ್ಕೆ ತೆರಳಿದ್ದರು.

ಬರ್ತ್​​ಡೇ ಪಾರ್ಟಿ ಬಳಿಕ ಕಪಿಲಾ ನದಿಯಲ್ಲಿ ಈಜಲು ಹೋದಾಗ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ವಿದ್ಯಾರ್ಥಿಗಳ ಮೃತ ದೇಹಕ್ಕಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಬರ್ತ್​​ಡೇ ಪಾರ್ಟಿ ಮುಗಿಸಿ ಈಜಿಗಿಳಿದ ಇಬ್ಬರು ಯುವಕರು ನೀರು ಪಾಲು appeared first on News First Kannada.

Source: newsfirstlive.com

Source link