ನಾಯಕತ್ವ ಉಳಿಸಿಕೊಳ್ಳಲು ಕೊಹ್ಲಿಗೆ ಇದೇ ಕೊನೆಯ ಅವಕಾಶ

ನಾಯಕತ್ವ ಉಳಿಸಿಕೊಳ್ಳಲು ಕೊಹ್ಲಿಗೆ ಇದೇ ಕೊನೆಯ ಅವಕಾಶ

ಕೊಹ್ಲಿ ನಾಯಕತ್ವ ಭವಿಷ್ಯ ನಿರ್ಧಾರಕ್ಕೆ ಕೇವಲ ಮೂರು ತಿಂಗಳು ಮಾತ್ರ ಬಾಕಿ. ಇಂಗ್ಲೆಂಡ್​​ನಲ್ಲಿ ಬೀಡು ಬಿಟ್ಟಿರುವ ಕೊಹ್ಲಿ, ಈಗ ತಾನೇ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಮುಗಿಸಿ ಇಂಗ್ಲೆಂಡ್​ ವಿರುದ್ಧದ ಸರಣಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಅದಲ್ಲದೇ ಮಹತ್ವದ ಚುಟುಕು ವಿಶ್ವಕಪ್​ ಟೂರ್ನಿಗೂ ಮಹೂರ್ತ ನಿಗದಿಯಾಗಿದೆ. ಇಂತಹ ಸಂರ್ದರ್ಭದಲ್ಲಿ ಕೊಹ್ಲಿ ನಾಯಕತ್ವದ ನಿರ್ಧಾರ ಭವಿಷ್ಯದ ಚರ್ಚೆ ಯಾಕೆ..? ​

ಕೊರೊನಾ ಕಾರಣದಿಂದಾಗಿ ತೂಗೂಯ್ಯಾಲೆಯಲ್ಲಿದ್ದ ಟಿ20 ವಿಶ್ವಕಪ್​ ಟೂರ್ನಿಯ ಭವಿಷ್ಯ ಕೊನೆಗೂ ನಿರ್ಧಾರವಾಗಿದೆ. ಮುಂಬರುವ ಅಕ್ಟೋಬರ್​​ನಲ್ಲಿ ಟಿ-20 ವಿಶ್ವಕಪ್​ ಟೂರ್ನಿಯನ್ನ ಯುಎಇನಲ್ಲಿ ಆಯೋಜಿಸಲು ಬಿಸಿಸಿಐಗೆ ಅನುಮತಿಯನ್ನ ನೀಡಿದೆ. ಟೂರ್ನಿ ಆಯೋಜನೆಯ ಉತ್ಸಾಹದೊಂದಿಗೆ ಈ ಮಹತ್ವದ ಟೂರ್ನಿಯ ಗೆಲುವಿನ ಮೇಲೂ ಬಿಸಿಸಿಐನ ಚಿತ್ತ ನೆಟ್ಟಿದೆ.

blank

ಹಲವು ತಿಂಗಳ ಹಿಂದಿನಿಂದಲೇ ಚುಟುಕು ಸಮರಕ್ಕೆ ಸಿದ್ಧತೆ ನಡೆಸಿರುವ ಟೀಮ್​ ಇಂಡಿಯಾ ಈಗಾಗಲೇ ರೂಪುರೇಷೆಗಳನ್ನ ಸಿದ್ಧಪಡಿಸಿಕೊಂಡಿದೆ. ಗೇಮ್​​ಪ್ಲಾನ್​, ಸ್ಟಾರ್ಟಜಿಗಳು ಎಲ್ಲವೂ ಸಿದ್ಧವಾಗಿವೆ. ಹಾಗಿದ್ರೂ ನಾಯಕ ವಿರಾಟ್​ ಕೊಹ್ಲಿ ಮಾತ್ರ ಟೆನ್ಷನ್​ ಮೂಡ್​​ನಲ್ಲಿದ್ದಾರೆ. ಯಾಕಂದ್ರೆ ಈ ಮಹತ್ವದ ಟೂರ್ನಿಯ ಗೆಲುವು-ಸೋಲಿನ ಮೇಲೆ ಕೊಹ್ಲಿಯ ನಾಯಕತ್ವ ನಿಂತಿದೆ.

ನಾಯಕತ್ವದ ಭವಿಷ್ಯ ನಿರ್ಧಾರಕ್ಕೆ 3 ತಿಂಗಳು ಮಾತ್ರ ಬಾಕಿ!
ವಿಶ್ವಕಪ್​ ಸೋಲು-ಗೆಲುವಿನ ಮೇಲೆ ನಿಂತಿದೆ ಕ್ಯಾಪ್ಟೆನ್ಸಿ ಭವಿಷ್ಯ!

ಟೀಮ್​ ಇಂಡಿಯಾದ ಮೋಸ್ಟ್​​ ಸಕ್ಸಸ್​ಫುಲ್​ ಟೆಸ್ಟ್​ ಕ್ಯಾಪ್ಟನ್​. ಮುನ್ನಡೆಸಿದ 63 ಪಂದ್ಯಗಳಲ್ಲಿ 36 ಗೆಲುವು, 10 ಡ್ರಾ, 15 ಪಂದ್ಯದಲ್ಲಿ ಮಾತ್ರ ಸೋಲು. ಏಕದಿನ ಮಾದರಿಯಲ್ಲಿ ನಾಯಕನಾಗಿ ಗೆಲುವಿನ ಸರಾಸರಿ ಶೇ.70, ಟಿ-20ಯಲ್ಲಿ ಶೇ.65ಕ್ಕಿಂತ ಹೆಚ್ಚು. ಇವು ಕೊಹ್ಲಿ ಟೀಮ್​ ಇಂಡಿಯಾದ ಸಕ್ಸಸ್​ಫುಲ್​ ನಾಯಕ ಅನ್ನೋದಕ್ಕೆ ಸಾಕ್ಷಿಯಾಗಿರೋ ಅಂಕಿ-ಅಂಶಗಳು. ಹಾಗಿದ್ದೂ ವಿರಾಟ್​​ ಸಾರಥ್ಯದ ಮೇಲೆ ತೂಗುಗತ್ತಿ ನೇತಾಡ್ತಿದೆ. ಇದಕ್ಕೆ ಕಾರಣ ಮೂರು ಸೋಲುಗಳು.

2017ರ ಚಾಂಪಿಯನ್ಸ್ ಟ್ರೋಫಿ, 2019 ಏಕದಿನ ವಿಶ್ವಕಪ್​. ಇತ್ತೀಚಿಗೆ ಮುಕ್ತಾಯವಾದ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​. ಈ ಮೂರು ಪ್ರಮುಖ ಐಸಿಸಿ ಟ್ರೋಫಿಗಳಲ್ಲಿ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್​ ಇಂಡಿಯಾ ಕಪ್​ ಇಲ್ಲದೇ ಹಿಂದಿರುಗಿದೆ. ಈ ಮೂರೂ ಟೂರ್ನಿಯಲ್ಲಿ ಭಾರತ ಎಡವಿರೋದು ಮಹತ್ವದ ಘಟ್ಟದಲ್ಲಿ. ಟೆಸ್ಟ್​​ ಚಾಂಪಿಯನ್​ ಶಿಪ್​, ಚಾಂಪಿಯನ್ಸ್​ ಟ್ರೋಫಿಯಲ್ಲಿ ಫೈನಲ್​ ಪಂದ್ಯದಲ್ಲಾದ್ರೆ, ವಿಶ್ವಕಪ್​ನಲ್ಲಿ ಎಡವಿದ್ದು ಸೆಮಿಸ್​​ನಲ್ಲಿ. ಈ ಕಾರಣದಿಂದಲೇ ಮಿನಿ ವಿಶ್ವ ಸಮರ ಕೊಹ್ಲಿ ಪಾಲಿಗೆ ನಿರ್ಣಾಯಕವಾಗಿರೋದು.

blank

‘ಕೊಹ್ಲಿ ಪಾಲಿಗೆ ನಿರ್ಣಾಯಕ’
‘ಈ ವರ್ಷಾಂತ್ಯದಲ್ಲಿ ಆಡುವ ಟಿ20 ವಿಶ್ವಕಪ್​ ಟೂರ್ನಿ ವಿರಾಟ್​​ ಕೊಹ್ಲಿ ನಾಯಕತ್ವದ ಕರಿಯರ್​​ಗೆ ನಿರ್ಣಾಯಕವಾಗಲಿದೆ. ಐಸಿಸಿ ಟ್ರೊಫಿ ಗೆಲ್ಲದ ವಿಚಾರ ಕೊಹ್ಲಿ ಮೇಲೆ ಹೆಚ್ಚಿನ ಒತ್ತಡವನ್ನ ಹಾಕಿದೆ. ಅದು ಅವರಿಗೂ ತಿಳಿದಿದೆ. ಹೀಗಾಗಿ ವಿಶ್ವಕಪ್​ ಗೆಲ್ಲೋದು ಕೊಹ್ಲಿಯ ಗುರಿಯಾಗಿದೆ. ಭಾರತ ಗೆದ್ದರೆ ಮಾತ್ರ ಕೊಹ್ಲಿ ನಿರಾಳರಾಗಲಿದ್ದಾರೆ. ಆ ಬಳಿಕ ಕೊಹ್ಲಿಯೂ ತಮ್ಮ ನಾಯಕನಾಗಿ ಮುಂದುವರಿಯ ಬೇಕಾ..? ಬೇಡ್ವಾ ಎಂಬ ಬಗ್ಗೆ ನಿರ್ಧರಿಸಲಿದ್ದಾರೆ’.

ಸಬಾ ಕರೀಮ್​, ಮಾಜಿ ಕ್ರಿಕೆಟಿಗ

ಹೌದು.. ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಮ್​ ಅನಿಸಿಕೆಯಂತೆ, ವಿಶ್ವಕಪ್​ನ ಫಲಿತಾಂಶ ಕೊಹ್ಲಿಯ ನಾಯಕತ್ವದ ಭವಿಷ್ಯವನ್ನ ನಿರ್ಧರಿಸಲಿದೆ. ಇದಕ್ಕೆ ಐಸಿಸಿ ಟ್ರೋಫಿ ಗೆಲುವು ಸೋಲು ಮಾತ್ರ ಕಾರಣವಲ್ಲ. ಈಗಾಗಲೇ ಎದ್ದಿರುವ SPLIT ಕ್ಯಾಪ್ಟೆನ್ಸಿ ಚರ್ಚೆಗಳೂ ಇದಕ್ಕೆ ಕಾರಣವಾಗಿದೆ. ಅದಲ್ಲದೇ ವಿಶ್ವಕಪ್​ ಟೂರ್ನಿಯ ಅಂತ್ಯದ ವೇಳೆಗೆ ಕೊಹ್ಲಿಯ ವಯಸ್ಸೂ 33ರ ಗಡಿದಾಟಲಿದೆ. ಹೀಗಾಗಿ ಯುವ ಆಟಗಾರರಿಗೆ ನಾಯಕನ ಪಟ್ಟ ಕಟ್ಟಬೇಕು ಅನ್ನೋದು ವಾದವೂ ಎದ್ದಿದೆ.

blank

ಟಿ-20 ಕ್ರಿಕೆಟ್​​ನಲ್ಲಿ ರೋಹಿತ್​ ಶರ್ಮಾ, ಟೆಸ್ಟ್​​ನಲ್ಲಿ ಅಜಿಂಕ್ಯಾ ರಹಾನೆ ನಾಯಕರಾಗಿ ಸಾಧಿಸಿರುವ ಯಶಸ್ಸು ಕೂಡ ಕೊಹ್ಲಿ ಮೇಲೆ ಐಸಿಸಿ ಟ್ರೋಫಿಯನ್ನ ಗೆಲ್ಲಲೇಬೇಕಾದ ಒತ್ತಡವನ್ನ ಹೆಚ್ಚಿಸಿದೆ. ಒಂದು ವೇಳೆ ನಾಯಕತ್ವಕ್ಕೆ ವಿರಾಟ್​​ ರಾಜೀನಾಮೆ ನೀಡಿದ್ರೂ ಕನ್ನಡಿಗ ಕೆಎಲ್​ ರಾಹುಲ್ ಸೇರಿದಂತೆ ಹಲ ಆಟಗಾರರು ಆ ಜವಾಬ್ದಾರಿ ಹೊರಲು ಸಿದ್ಧರಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಸೋತಿದ್ದೇ ಆದರೆ ನಾಯಕತ್ವಕ್ಕೆ ವಿರಾಟ್​ ಗುಡ್​ ಬೈ ಹೇಳಲಿದ್ದಾರೆ ಎಂದೇ ಹೇಳಲಾಗ್ತಿದೆ.

ಈ ಚರ್ಚೆಗಳು ಏನೇ ಇದ್ರೂ ಕೊಹ್ಲಿ ಟೀಮ್​ ಇಂಡಿಯಾದ ಸಕ್ಸಸ್ ​ಫುಲ್​ ನಾಯಕರಲ್ಲಿ ಒಬ್ಬರು ಅನ್ನೋದನ್ನ ಅಲ್ಲಗಳೆಯುವಂತಿಲ್ಲ. ಹಾಗೆಂದ ಮಾತ್ರಕ್ಕೆ ಐಸಿಸಿ ಟ್ರೋಫಿ ಗೆಲ್ಲದ ಒತ್ತಡ ವಿರಾಟ್​ ಮೇಲಿಲ್ಲ ಎಂದೂ ಹೇಳೋಕೆ ಆಗಲ್ಲ. ಹೀಗಾಗಿ ಟಿ20 ವಿಶ್ವಕಪ್​ ಟೂರ್ನಿಯ ಬಳಿಕ ಟೀಮ್​ ಇಂಡಿಯಾ ನಾಯಕತ್ವದಲ್ಲಿ ಏನಾಗುತ್ತೆ ಅನ್ನೋದು ಕುತೂಹಲ ಮೂಡಿಸಿರೋದಂತೂ ಸುಳ್ಳಲ್ಲ.

The post ನಾಯಕತ್ವ ಉಳಿಸಿಕೊಳ್ಳಲು ಕೊಹ್ಲಿಗೆ ಇದೇ ಕೊನೆಯ ಅವಕಾಶ appeared first on News First Kannada.

Source: newsfirstlive.com

Source link