ಆವಾಗ ಖಾಲಿ ಪಲಾವ್..​​ ಈಗ ಚಿಕನ್​ ಬಿರಿಯಾನಿ..

ಆವಾಗ ಖಾಲಿ ಪಲಾವ್..​​ ಈಗ ಚಿಕನ್​ ಬಿರಿಯಾನಿ..

ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ತರ್ಕಗಳೇ ಉಲ್ಟಾ ಹೊಡೆಯುತ್ತಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ ಸೈಲೆಂಟ್​ ಆಗಿದ್ದವರೆಲ್ಲಾ, ಈಗ ಕಿಲಾಡಿಗಳಾಗಿದ್ದಾರೆ. ಸರ್​ಪ್ರೈಸ್​ ಮೇಲೆ ಸರ್​ಪ್ರೈಸ್ ಕೊಡ್ತಿದ್ದಾರೆ.

ಇದ್ರಲ್ಲಿ ಆಶ್ಚರ್ಯಕರ ರೀತಿಯಲ್ಲಿ ​ ಸೆಕೆಂಡ್​ ಇನ್ನಿಂಗ್ಸ್​ನ ಮೊದಲ ವಾರ ರಘುಗೆ ಅತ್ಯುತ್ತಮ ಆಟಗಾರ ಎಂಬ ಪಟ್ಟ ದೊರೆತಿದ್ದು. ಇದು 43 ದಿನಗಳ ಎಫೆಕ್ಟ್​ ಎನಿಸುತ್ತದೆ. ಆಟ ಬದಲಾಗಿದೆ. ನಾನು ಫುಲ್​ ಸಿದ್ಧವಾಗಿದ್ದೀನಿ ಎಂದು ರಘು ಸೆಕೆಂಡ್​ ಇನ್ನಿಂಗ್ಸ್​ನ ಓಪನಿಂಗ್​​ನಲ್ಲಿ ಸುದೀಪ್​ ಅವರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು. ಈ ಬದಲಾವಣೆಯ ಎಫೆಕ್ಟ್​ ಖಂಡಿತ ವರ್ಕೌಟ್​ ಆದಂತೆ ಕಾಣುತ್ತದೆ.

blank

ನಿನ್ನೆ ನಡೆದ ಟಾಸ್ಕ್​​ನ ನಂತರ ಈ ವಾರದ ಅತ್ಯುತ್ತಮ ಯಾರಿಗೆ ನೀಡುತ್ತೀರಿ ಎಂದಿದ್ದೇ ತಡ ಹೆಚ್ಚು ಕಡಿಮೆ ಎಲ್ಲರೂ ರಘು ಹೆಸರನ್ನು ತಗೋತಾರೆ. ಇಲ್ಲಿ ಟಾಸ್ಕ್​ನ ವಿಚಾರ ಅಷ್ಟೇ ಕೌಂಟ್​ ಆಗಲ್ಲ. ಅವರವರ ಬಾಂಡಿಂಗ್​, ಅವರು ಕ್ರಿಯೇಟ್​ ಮಾಡಿದ ಇಮೇಜ್​ ಎಲ್ಲವೂ ಗಣನೆಗೆ ತೆಗೆದುಕೊಂಡು ವೋಟ್​ ಮಾಡ್ತಾರೆ. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಆ ಗುಂಪು ಈ ಗಂಪು ಎಂದು ಉಳಿದಿಲ್ಲ. ಇಲ್ಲಿ ಎಲ್ಲರ ನಡುವೆ ಸಣ್ಣದೊಂದು ಗ್ಯಾಪ್​ ಇದ್ದೇ ಇದೆ. ಆದ್ರೆ ರಘು ಮಾತ್ರ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

72 ದಿನಗಳ ಅಭಿಪ್ರಾಯಗಳನ್ನು ಒಂದೇ ವಾರದಲ್ಲಿ ಚೇಂಜ್​ ಮಾಡೋದು ಅಂದ್ರೆ ನಿಜಕ್ಕೂ ಪ್ರಶಂಸಿಸಬೇಕಾದ ವಿಷಯ. ಎಲ್ಲರ ಅಭಿಪ್ರಾಯ ರಘು ಮೊದಲಿಗಿಂತ ಈಗ ತುಂಬಾ ಬದಲಾಗಿದ್ದಾರೆ. ಯಾರಿಗೂ ಸ್ಟಿಕ್​ ಆನ್​ ಆಗದೇ ಎಲ್ಲರ ಜೊತೆ ಒಂದೇ ರೀತಿಯ ಸಂಬಂಧ ಕಾಯ್ದುಕೊಂಡಿದ್ದು ಅವರಿಗೆ ಇಲ್ಲಿ ಪ್ಲಸ್​ ಪಾಯಿಂಟ್​ ಆಗಿದೆ. ರಘು ಅವರ ಗ್ರಾಫ್​ ಹೀಗೇ ಮುಂದುವರೆಯಲಿ ಎಂದು ಎಲ್ಲರೂ ವಿಶ್​ ಮಾಡ್ತಿದ್ದಾರೆ.

The post ಆವಾಗ ಖಾಲಿ ಪಲಾವ್..​​ ಈಗ ಚಿಕನ್​ ಬಿರಿಯಾನಿ.. appeared first on News First Kannada.

Source: newsfirstlive.com

Source link