ನಟಿಗೆ ಲೈಂಗಿಕ ಕಿರುಕುಳ- ನಟ ಪ್ರಚೀನ್ ಅರೆಸ್ಟ್

ಮುಂಬೈ: ಮಹಿಳೆಗೆ ಕಿರುಕುಳ ನೀಡಿದ ಕಿರುತೆರೆ ನಟ ಪ್ರಚೀನ್ ಚೌಹಾಣ್‍ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ರ ಅಡಿಯಲ್ಲಿ ಚೌಹಾನ್ ನ್ನು ಬಂಧಿಸಲಾಗಿದೆ. ಚೌಹಾಣ್ ಮಹಿಳೆಯ ಮೇಲೆ ಹಲ್ಲೆ ಮಾಡಿ ಕಿರುಕುಳ ಮಾಡಿದ್ದಾರೆ. ಹಲ್ಲೆಗೊಳಗಾದ ಮಹಿಳೆ ನಮಗೆ ದೂರು ನೀಡಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಚೀನ್ ಚೌಹಾಣ್ ಏಕ್ತಾ ಕಪೂರ್ ನಿರ್ಮಾಣದ ಧಾರಾವಾಹಿ ‘ಕಸೌತಿ ಜಿಂದಗಿ ಕ್ಯಾ’ ಸೀರಿಯಲ್ ನಿಂದ ಖ್ಯಾತಿ ಗಳಿಸಿದ್ದಾರೆ. ಇದರಲ್ಲಿ ಅವರು ಸುಬ್ರೋಟೊ ಬಸು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಪೊಲೀಸರು ಶನಿವಾರ ನಟನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

The post ನಟಿಗೆ ಲೈಂಗಿಕ ಕಿರುಕುಳ- ನಟ ಪ್ರಚೀನ್ ಅರೆಸ್ಟ್ appeared first on Public TV.

Source: publictv.in

Source link