ಧವನ್​​ಗೆ ಕೊಹ್ಲಿಯೇ ಕಾಂಪಿಟೇಟರ್​​- ಟಿ20 ವಿಶ್ವಕಪ್​ ಟೂರ್ನಿಯಿಂದ ಗಬ್ಬರ್ ಔಟ್​?

ಧವನ್​​ಗೆ ಕೊಹ್ಲಿಯೇ ಕಾಂಪಿಟೇಟರ್​​- ಟಿ20 ವಿಶ್ವಕಪ್​ ಟೂರ್ನಿಯಿಂದ ಗಬ್ಬರ್ ಔಟ್​?

ಶಿಖರ್​​ ಧವನ್​ ನೇತೃತ್ವದಲ್ಲಿ ಟೀಮ್​ ಇಂಡಿಯಾ ಕೈಗೊಂಡಿರುವ ಶ್ರೀಲಂಕಾ ಪ್ರವಾಸ, ಟಿ20 ವಿಶ್ವಕಪ್​ ಟೂರ್ನಿಯ ಆಯ್ಕೆಗೆ ಮುನ್ನಡಿ ಎಂದೇ ಹೇಳಲಾಗ್ತಿದೆ. ಇಲ್ಲಿ ನೀಡುವ ಪ್ರದರ್ಶನ ಆಯ್ಕೆಯ ಮಾನದಂಡವಾಗಿರೋದ್ರಿಂದ, ಸಾಲಿಡ್​​ ಪರ್ಫಾಮೆನ್ಸ್​ ನೀಡಬೇಕಾದ ಒತ್ತಡ ಎಲ್ಲಾ ಆಟಗಾರರ ಮೇಲಿದೆ. ಇದರಿಂದ ಶಿಖರ್​ ಧವನ್​ ಕೂಡ ಹೊರತಾಗಿಲ್ಲ.

ಭಾರತ- ಶ್ರೀಲಂಕಾ ನಡುವಿನ ಸೀಮಿತ ಓವರ್​ಗಳ ಸರಣಿಯ ಕುತೂಹಲ, ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​​ ಕೌನ್ಸಿಲ್​ ಅಕ್ಟೋಬರ್​​ನಲ್ಲಿ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ ದಿನಾಂಕವನ್ನ, ನಿಗದಿ ಮಾಡಿದ ಮೇಲಂತೂ ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಚುಟುಕು ವಿಶ್ವ ಸಮರದ ಆಯ್ಕೆ ಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ನೀಡೋ ಪ್ರದರ್ಶನ ನಿರ್ಣಾಯಕ ಎಂದು ಹೇಳಲಾಗ್ತಿರೋದೇ ಇದಕ್ಕೆ ಕಾರಣವಾಗಿದೆ.

blank

ಲಂಕಾ ಎದುರಿನ ಸರಣಿಗೆ ಆಯ್ಕೆ ಮಾಡಲಾಗಿರುವ ತಂಡದಲ್ಲಿ ಪ್ರತಿಯೊಂದು ಸ್ಲಾಟ್​​ಗೂ ಆಟಗಾರರ ನಡುವೆ ಈಗಾಗಲೇ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಆರಂಭಿಕನ ಒಂದು ಸ್ಥಾನಕ್ಕೆ ಶಿಖರ್​ ಧವನ್​ ಫಿಕ್ಸ್​ ಆದ ಹಿನ್ನೆಲೆಯಲ್ಲಿ ಉಳಿದ ಒಂದು ಸ್ಥಾನಕ್ಕೆ 5 ಜನರ ನಡುವೆ ಪೈಪೋಟಿ ಏರ್ಪಟ್ಟಿದೆ. ಆದ್ರೆ, ಮುಂಬರುವ ಚುಟುಕು ವಿಶ್ವಕಪ್​ ಟೂರ್ನಿಯ ವಿಚಾರಕ್ಕೆ ಬಂದ್ರೆ ಧವನ್​​​​ ಸ್ಥಾನವೇ ತೂಗೂಯ್ಯಾಲೆಯಲ್ಲಿದೆ.

ಲಂಕಾ ಸರಣಿಯ ನಾಯಕನಿಗಿಲ್ಲ ವಿಶ್ವಕಪ್​ ಟಿಕೆಟ್!
ಟಿ20 ವಿಶ್ವಕಪ್​ ಟೂರ್ನಿಯಿಂದ ಶಿಖರ್​​ ಧವನ್​ ಔಟ್​​!

ಮುಂದೂಡಿಕೆ ಆಗುತ್ತಲೇ ಬಂದಿದ್ದ ಮಹತ್ವದ ಟಿ-20 ವಿಶ್ವಕಪ್​ ಟೂರ್ನಿಗೆ ಕೇವಲ 2 ತಿಂಗಳುಗಳು ಮಾತ್ರ ಬಾಕಿ. ಇದಕ್ಕಾಗಿ ಹಲವು ಹಂತದಲ್ಲಿ ಸಿದ್ಧತೆಗಳನ್ನ ನಡೆಸುತ್ತಲೇ ಬಂದಿದ್ದ ಟೀಮ್​ ಇಂಡಿಯಾ ಇದೀಗ ಅದಕ್ಕೆ ಅಂತಿಮ ಹಂತದ ಟಚ್​ ನೀಡೋಕೆ ಸಿದ್ಧತೆ ನಡೆಸ್ತಿದೆ. ಈಗಾಗಲೇ ಸಿದ್ಧವಾಗಿರುವ ರೂಪುರೇಶೆಗಳ ಪ್ರಕಾರ ಶಿಖರ್​ ಧವನ್​ ಮಹತ್ವದ ಟೂರ್ನಿಯ ಭಾಗವಾಗಿ ಉಳಿದೇ ಇಲ್ಲ. ಇಷ್ಟುದಿನ ತಂಡದ ಖಾಯಂ ಆರಂಭಿಕನಾಗಿದ್ದ ಆಟಗಾರನಿಗೆ ಕೊಕ್​ ಕೊಡೋ ಬ್ಲೂ ಪ್ರಿಂಟ್​​ ರೆಡಿಯಾಗಿದೆ. ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ಕೂಡ ಇದೇ ಮಾತುಗಳನ್ನಾಡಿದ್ದಾರೆ.

blank

‘ಧವನ್​ರನ್ನ ಗಣನೆಗೆ ತೆಗೆದುಕೊಂಡಿಲ್ಲ’..!
‘ನನಗೆ ಅನ್ನಿಸುತ್ತಿರುವಂತೆ ಇಡೀ ತಂಡ ಶಿಖರ್​​ ಧವನ್​ರನ್ನ ಗಣನೆಗೆ ತೆಗೆದುಕೊಳ್ಳುತ್ತಲೇ ಇಲ್ಲ. ಇದು ನನ್ನ ಅಭಿಪ್ರಾಯ. ಕಳೆದ ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯನ್ನೇ ಗಮನಿಸಿದ್ರೆ, ಆತ ಆಡಿದ್ದು ಕೇವಲ ಒಂದು ಪಂದ್ಯ ಮಾತ್ರ. ಉಳಿದ 4 ಪಂದ್ಯಗಳಿಂದ ಕೊಕ್​ ನೀಡಲಾಗಿತ್ತು’
ಆಕಾಶ್ ಚೋಪ್ರಾ, ಕ್ರಿಕೆಟ್ ವಿಶ್ಲೇಷಕ

ಭಾರತ ಶಿಖರ್​ ಧವನ್​ರನ್ನ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಅನ್ನೋದಕ್ಕೆ ಇಂಗ್ಲೆಂಡ್​ ವಿರುದ್ಧದ ಸರಣಿಯೇ ಸಾಕ್ಷಿಯಾಗಿದೆ. ಹಲವು ಪ್ರಯೋಗಗಳಿಗೆ ಸಾಕ್ಷಿಯಾಗಿದ್ದ ಪಂದ್ಯದಲ್ಲಿ ಓಪನಿಂಗ್​ ಸ್ಲಾಟ್​​ಗೆ ಹೆಚ್ಚು ಪರೀಕ್ಷೆಗಳನ್ನ ಮಾಡಲಾಗಿತ್ತು. ಈ ಪ್ರಯೋಗದಲ್ಲಿ ಅವಕಾಶಗಿಟ್ಟಿಸಿಕೊಂಡ ಧವನ್​, ಆಡಿದ್ದು ಕೇವಲ ಒಂದು ಪಂದ್ಯ ಮಾತ್ರ. ಸಿಕ್ಕ ಆ ಚಾನ್ಸ್ ಅನ್ನೂ​​ ಕೈ ಚೆಲ್ಲಿದ ಗಬ್ಬರ್,​ ಉಳಿದ 4 ಪಂದ್ಯಗಳಲ್ಲಿ ಬೆಂಚ್​​ಗೆ ಸೀಮಿತವಾದ್ರು.

ಧವನ್​ರನ್ನ ಟಿ20 ವಿಶ್ವಕಪ್​ ತಂಡದ ಆಯ್ಕೆಯ ವಿಚಾರದಲ್ಲಿ​ ಪರಿಗಣಿಸಿಲ್ಲ ಅನ್ನೋದಕ್ಕೆ ಇಂಗ್ಲೆಂಡ್​ ವಿರುದ್ಧದ ಸರಣಿಯ ಪ್ರಯೋಗ ಮಾತ್ರ ಕಾರಣವಲ್ಲ. ಆ ಸ್ಥಾನದಲ್ಲಿ ಕಣಕ್ಕಿಳಿದು ಕೊಹ್ಲಿ ಯಶಸ್ಸು ಕಂಡಿದ್ದು ಕೂಡ ಬದಲಾವಣೆಯ ಗಾಳಿ ಬೀಸಲು ಕಾರಣವಾಗಿದೆ. ಧವನ್​ ಮೊದಲ ಪಂದ್ಯದ ವಿಫಲತೆಯ ಬಳಿಕ ಅವಕಾಶಗಿಟ್ಟಿಸಿಕೊಂಡ ರಾಹುಲ್​, ಆಡಿದ 2 ಪಂದ್ಯಗಳಲ್ಲೂ ಡಕೌಟ್​ ಆಗಿ ನಿರ್ಗಮಿಸಿದ್ರು. ಹೀಗಾಗಿ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದ ಕೊಹ್ಲಿ ಅಜೇಯ 80 ರನ್​ ಸಿಡಿಸಿದ್ರು.

blank

ಇಷ್ಟೇ ಅಲ್ಲ.. ಪಂದ್ಯದ ಬಳಿಕ ವಿಶ್ವಕಪ್​ ದೃಷ್ಟಿಯಿಂದ ನಾನು ಐಪಿಎಲ್​ನಲ್ಲೂ ಆರಂಭಿಕನಾಗಿಯೇ ಕಣಕ್ಕಿಳಿಯುತ್ತೇನೆ ಎಂದು ಹೇಳಿದ್ರು. ಅರ್ಧಕ್ಕೆ ನಿಂತಿರುವ 14ನೇ ಆವೃತ್ತಿಯ ಐಪಿಎಲ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ, ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆಡಿದ 7 ಪಂದ್ಯಗಳಲ್ಲಿ 121.47ರ ಸ್ಟ್ರೈಕ್​ ರೇಟ್​​ನಲ್ಲಿ ಬ್ಯಾಟ್​ ಬೀಸಿದ್ದಾರೆ. ಇದನ್ನ ಕೂಡ ಧವನ್​ಗೆ ಗೇಟ್​​ಪಾಸ್​​​ ಸಿಗೋ ಸೂಚನೆ ಎಂದೇ ಹೇಳಲಾಗ್ತಿದೆ.

ಇದೆಲ್ಲದರ ನಡುವೆಯೂ ಶ್ರೀಲಂಕಾ ಎದುರಿನ ಸರಣಿ ಹಾಗೂ ಆ ಬಳಿಕ ನಡೆಯೋ ಐಪಿಎಲ್​​ನಲ್ಲೀ ಮಿಂಚಿದ್ದೇ ಆದ್ರೆ, ಆರಂಭಿಕನ ಸ್ಥಾನದಿಂದ ಧವನ್​ರನ್ನ ಕೈಬಿಡೋದು ಸುಲಭದ ಮಾತಲ್ಲ. ಯಾಕಂದ್ರೆ, ಇಂಗ್ಲೆಂಡ್​ ಎದುರಿನ ಸರಣಿಯ ಬಳಿಕ ಆಡಿದ ಐಪಿಎಲ್​ನಲ್ಲಿ 54.28ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಒಂದು ವೇಳೆ ಲಂಕಾ ಎದುರು ಹಾಗೂ 2ನೇ ಹಂತದ ಐಪಿಎಲ್​ನಲ್ಲಿ ಗಬ್ಬರ್​ ಅಬ್ಬರಿಸಿದ್ದೇ ಆದ್ರೆ, ಆರಂಭಿಕ ಸ್ಲಾಟ್​ನ ಪೈಪೋಟಿ ಇನ್ನಷ್ಟು ಹೆಚ್ಚೊದ್ರಲ್ಲಿ ಅನುಮಾನವೇ ಇಲ್ಲ..!

ಟಿ-20 ವಿಶ್ವಕಪ್​ ಆರಂಭಿಕ ಸ್ಥಾನಕ್ಕೆ ಪೈಪೋಟಿ

  • ರೋಹಿತ್​ ಶರ್ಮಾ -ಶಿಖರ್​​ ಧವನ್​
  • ವಿರಾಟ್​ ಕೊಹ್ಲಿ -ಕೆಎಲ್​ ರಾಹುಲ್​
  • ಪೃಥ್ವಿ ಷಾ -ಮಯಾಂಕ್​ ಅಗರ್​ವಾಲ್​
  • ಇಶಾನ್​ ಕಿಶನ್​ -ಶುಭ್​ಮನ್​ ಗಿಲ್​
  • ದೇವದತ್ತ್​ ಪಡಿಕ್ಕಲ್​ -ಋತುರಾಜ್​ ಗಾಯಕ್ವಾಡ್​

blank

ತಂಡದಲ್ಲಿರುವ 2 ಓಪನಿಂಗ್​ ಸ್ಥಾನಕ್ಕೆ ಪೈಪೋಟಿ ಇರೋದು 10 ಆಟಗಾರರ ನಡುವೆ. ರೋಹಿತ್​ ಶರ್ಮಾ, ಶಿಖರ್​ ಧವನ್​, ವಿರಾಟ್​ ಕೊಹ್ಲಿ ಜೊತೆಗೆ ಕೆಎಲ್​ ರಾಹುಲ್, ಪೃಥ್ವಿ ಶಾ, ಮಯಾಂಕ್​ ಅಗರ್​​ವಾಲ್​ ಕೂಡ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಇನ್ನುಳಿದಂತೆ ಇಶಾನ್​ ಕಿಶನ್​, ಶುಭ್​ಮನ್​ಗಿಲ್​, ದೇವದತ್ತ್​​ ಪಡಿಕ್ಕಲ್​ ಹಾಗೂ ಋತುರಾಜ್​ ಗಾಯಕ್ವಾಡ್​​ ರೇಸ್​ನಲ್ಲಿರುವ ಯುವ ಆಟಗಾರರಾಗಿದ್ದಾರೆ.

ಅದೇನೆ ಇದ್ರೂ, ತಂಡಕ್ಕೆ ಸ್ಫೋಟಕ ಆರಂಭ ಒದಗಿಸೋ ಸಾಮರ್ಥ್ಯ ಶಿಖರ್​​ ಧವನ್​ಗಿದೆ ಅನ್ನೋದನ್ನ ಅಲ್ಲಗಳೆಯುವಂತಿಲ್ಲ. ಲಂಕಾ ವಿರುದ್ಧದ ಸರಣಿ ಹಾಗೂ ಐಪಿಎಲ್​ನ ಉಳಿದ ಪಂದ್ಯಗಳಲ್ಲಿ ಧವನ್​ ಮಿಂಚಿದ್ರೆ ಸ್ಥಾನ ಪಡೆಯೂ ಅವಕಾಶವೂ ಇದೆ. ಆದರೆ ಸ್ವತಃ ಕೊಹ್ಲಿಯೇ ರೇಸ್​​ಗಿಳಿದಿರೋದು ಪೈಪೋಟಿಯ ತೀವ್ರತೆಯನ್ನ ಹೆಚ್ಚಿಸಿದೆಯಷ್ಟೇ.

The post ಧವನ್​​ಗೆ ಕೊಹ್ಲಿಯೇ ಕಾಂಪಿಟೇಟರ್​​- ಟಿ20 ವಿಶ್ವಕಪ್​ ಟೂರ್ನಿಯಿಂದ ಗಬ್ಬರ್ ಔಟ್​? appeared first on News First Kannada.

Source: newsfirstlive.com

Source link