ಕೋಲಾರ ಬೆಸ್ಕಾಂ ಸ್ಟೇಷನ್​​ನಲ್ಲಿ ಭಾರೀ ಅಗ್ನಿ ಅವಘಡ

ಕೋಲಾರ ಬೆಸ್ಕಾಂ ಸ್ಟೇಷನ್​​ನಲ್ಲಿ ಭಾರೀ ಅಗ್ನಿ ಅವಘಡ

ಕೋಲಾರ: ನಗರದ ಮಹಾಲಕ್ಷ್ಮಿ ಬಡಾವಣೆ ಬಳಿ ಇರುವ ಬೆಸ್ಕಾಂ ಸಬ್ ಸ್ಟೇಷನ್​​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಆಕಸ್ಮಿಕವಾಗಿ ಬೆಂಕಿ ಸಂಭವಿಸಿ ದಗದಗನೆ ಹೊತ್ತಿ ಉರಿದಿದ್ದು, ಆಕಾಶದೆತ್ತರಕ್ಕೆ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಟ್ರಾನ್ಸ್​ಫಾರ್ಮರ್​​ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಬೆಂಕಿಗಾಹುತಿಯಾಗಿವೆ.

ಅಕ್ಕ ಪಕ್ಕದ ಏರಿಯಾಗಳಿಗೂ ದಟ್ಟವಾದ ಹೊಗೆ ಆವರಿಸಿರೋದ್ರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಅಗ್ನಿಶಾಮ ಸಿಬ್ಬಂದಿಗೆ ಮಾಹಿತಿಯನ್ನ ನೀಡಲಾಗಿದ್ದು, ಬೆಂಕಿ ನಂದಿಸುವ ಕಾರ್ಯ ಶುರುವಾಗಿದೆ.

The post ಕೋಲಾರ ಬೆಸ್ಕಾಂ ಸ್ಟೇಷನ್​​ನಲ್ಲಿ ಭಾರೀ ಅಗ್ನಿ ಅವಘಡ appeared first on News First Kannada.

Source: newsfirstlive.com

Source link