‘ಖರ್ಗೆ ಸೀನಿಯರ್ ಮೋಸ್ಟ್ ದಲಿತ ಲೀಡರ್.. ಅವ್ರು CM ಆಗುವುದರಲ್ಲಿ ತಪ್ಪೇನಿಲ್ಲ’

‘ಖರ್ಗೆ ಸೀನಿಯರ್ ಮೋಸ್ಟ್ ದಲಿತ ಲೀಡರ್.. ಅವ್ರು CM ಆಗುವುದರಲ್ಲಿ ತಪ್ಪೇನಿಲ್ಲ’

ಬೆಂಗಳೂರು: ದಲಿತರಲ್ಲಿ ನಮ್ಮವರೊಬ್ಬರು ಸಿಎಂ ಆಗಲಿಲ್ಲ ಎಂಬ ಕೊರಗು ಇರೋದು ನಿಜ. ದಲಿತರಲ್ಲಿ ಅರ್ಹತೆ, ಸೀನಿಯಾರಿಟಿ ಎಲ್ಲಾ ಮುಖ್ಯ. ನನಗೆ ತಿಳಿದಂತೆ ನಮ್ಮ ಸಮುದಾಯದಲ್ಲಿ ಮಲ್ಲಿಕಾರ್ಜುನ ಖರ್ಗೆ ದೊಡ್ಡಮಟ್ಟದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಸಹಜವಾಗಿ ಒಬ್ಬ ಸೀನಿಯರ್ ಮೋಸ್ಟ್ ಸಿಎಂ ಆಗುವುದರಲ್ಲಿ ತಪ್ಪೇನಿಲ್ಲ. ಅವರು ಸಾಕಷ್ಟು ಬಾರಿ ಸಿಎಂ ಆಗಬೇಕಿತ್ತು, ಆಗ ಬಹುಮತ ಬರಲಿಲ್ಲ. ಹಿರಿತನದಲ್ಲಿ ನಾವೆಲ್ಲ ಬಹಳ ಜೂನಿಯರ್ ಇದ್ದೀವಿ‌. ನಾವೆಲ್ಲ ಸಿಎಂ ಹುದ್ದೆಗೆ ಆಸೆ ಪಟ್ಟವರಲ್ಲ. ಪಕ್ಷದಲ್ಲಿ ಕಾರ್ಯಾಧ್ಯಕ್ಷರಂತೆ ದೊಡ್ಡ ಹುದ್ದೆ ಸಿಗುತ್ತೆ ಅಂತ ಅಂದ್ಕೊಂಡಿರಲಿಲ್ಲ. ದಲಿತ ಮುಖ್ಯಮಂತ್ರಿ ಕೂಗು ಅಪ್ರಸ್ತುತ. ಕಾಂಗ್ರೆಸ್ ದಲಿತರಿಗೆ ಕೊಟ್ಟಷ್ಟು ಯಾವ ಪಕ್ಷವೂ ಕೊಟ್ಟಿಲ್ಲ ಎಂದರು.

blank

ಸಮಯ ಬಂದಾಗ ಅವಕಾಶ ಸಿಗುತ್ತದೆ..
ಕೇಂದ್ರದಲ್ಲಿ ಸಂಪುಟ ಪುನರ್‌‌ರಚನೆ ಆಗ್ತಿದೆ. ಐದು ಮಂದಿ ದಲಿತ ಸಂಸದರಿದ್ದಾರೆ.. ಬಿಜೆಪಿ ಯಾಕೆ ಸಚಿವರನ್ನಾಗಿ ಮಾಡ್ತಿಲ್ಲ? ಕಾಂಗ್ರೆಸ್ ಖರ್ಗೆ ಪರಾಜಿತರಾದರೂ ರಾಜ್ಯಸಭೆ ಶಾಸಕಾಂಗ ನಾಯಕರನ್ನಾಗಿ ಮಾಡಿದೆ. ಮುನಿಯಪ್ಪಗೆ ಸಚಿವ ಸ್ಥಾನ ಕೊಟ್ಡಿದೆ. ಪರಮೇಶ್ವರ್ ರಾಜ್ಯದಲ್ಲಿ ಡಿಸಿಎಂ ಆದ್ರು‌. ಹಿಂದೆ ಸಿಎಂ ಆಗುವ ಅವಕಾಶ ದಲಿತರಿಗೆ ಇತ್ತು. 2008ರಲ್ಲಿ ಬಹುಮತ ಬಂದಿದ್ರೆ ಖರ್ಗೆ ಸಿಎಂ ಆಗ್ತಿದ್ರು. 2013ರಲ್ಲಿ ಪರಮೇಶ್ವರ್‌ ಗೆದ್ದಿದ್ರೆ, ಪರಮೇಶ್ವರ್ ಸಿದ್ದರಾಮಯ್ಯ ಇಬ್ಬರಿಗೂ ಅಧಿಕಾರ ಹಂಚಿಕೆ ಆಗ್ತಿತ್ತು. ಕಾಂಗ್ರೆಸ್ ಯಾವತ್ತೂ ದಲಿತರಿಗೆ ಅನ್ಯಾಯ ಮಾಡಿಲ್ಲ. ದಲಿತರಲ್ಲಿ ನಮ್ಮವರೊಬ್ಬರು ಸಿಎಂ ಆಗಲಿಲ್ಲ ಎಂಬ ಕೊರಗು ಇದೆ, ಅದಂತೂ ನಿಜ ಅಂತಾ ಪುನರುಚ್ಚರಿಸಿದರು.

ಸಮಯ ಸಂದರ್ಭ ಬಂದಾಗ ಅವಕಾಶ ಸಿಗುತ್ತದೆ. ಸಾಮಾಜಿಕ ನ್ಯಾಯ ಕೊಟ್ಟಿರೋದೇ ಕಾಂಗ್ರೆಸ್. ಎಲ್ಲಾ ಸಮಾಜದವರಿಗೂ ಅವಕಾಶ ಸಿಕ್ಕಿದೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ತೀರ್ಮಾನಿಸಿಲ್ಲ. ನಾನು ಲೋಕಸಭೆ ಚುನಾವಣೆಯಲ್ಲಿ ಕೇವಲ 1,800 ಮತಗಳ ಅಂತರದಿಂದ ಸೋತಿದ್ದೇನೆ. ಮುಂದಿನ ಗುರಿ ಲೋಕಸಭಾ ಚುನಾವಣೆಗೆ. ಆಕಾಂಕ್ಷಿ ಅಷ್ಟೇ ಅಭ್ಯರ್ಥಿಯೂ ನಾನೇ ಅಲ್ಲ ಎಂದರು.

The post ‘ಖರ್ಗೆ ಸೀನಿಯರ್ ಮೋಸ್ಟ್ ದಲಿತ ಲೀಡರ್.. ಅವ್ರು CM ಆಗುವುದರಲ್ಲಿ ತಪ್ಪೇನಿಲ್ಲ’ appeared first on News First Kannada.

Source: newsfirstlive.com

Source link