ಬರ್ತ್​ ಡೇಗೆ ಫ್ಯಾನ್ಸ್​ಗಳಿಗೇ ಗಿಫ್ಟ್ಸ್ ನೀಡಿದ ಹೀರೋ.. ಹೊಸ ಟ್ರೆಂಡ್ ಸೃಷ್ಟಿಸಿದ ಕಿರಣ್​ ರಾಜ್

ಬರ್ತ್​ ಡೇಗೆ ಫ್ಯಾನ್ಸ್​ಗಳಿಗೇ ಗಿಫ್ಟ್ಸ್ ನೀಡಿದ ಹೀರೋ.. ಹೊಸ ಟ್ರೆಂಡ್ ಸೃಷ್ಟಿಸಿದ ಕಿರಣ್​ ರಾಜ್

ಬರ್ತ್​ ಡೇಗೆ ಫ್ಯಾನ್ಸ್​ಗಳಿಂದ ಗಿಫ್ಟ್ಸ್​ ಬರೋದು ವಾಡಿಕೆ. ಆದ್ರೆ, ಇಲ್ಲಿ ಹೀರೋನೇ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬಕ್ಕೆ ರಿಟರ್ನ್​ ಗಿಫ್ಟ್ಸ್​ ನೀಡಿದ್ದಾರೆ.

ಜನಪ್ರೀಯ ಸೀರಿಯಲ್ ಕನ್ನಡತಿಯ ನಾಯಕ ಕಿರಣ್​ ರಾಜ್​ ಜುಲೈ 5 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಸ್ಪೆಷಲ್​ ಡೇಗೆ ಫ್ಯಾನ್ಸ್​ಗಳಿಗೆ ಕೆಆರ್​ ಬ್ರಾಂಡ್​ ಕಡೆಯಿಂದ ಕಿಟ್​ ನೀಡಿದ್ದಾರೆ. ಏನಿದೆ ಈ ಕಿಟ್​ಲ್ಲಿ ಅಂತಿರಾ..? ಒಂದು ಬ್ಯೂಟಿಫುಲ್​ ಟೀ ಶರ್ಟ್​, ಕ್ಯಾಪ್​, ಬ್ಯಾಗ್.. ಹೀಗೆ ಒಟ್ಟು ಪ್ಯಾಕೇಜ್​ ಮಾಡಿ ಹೊಸ ಟ್ರೆಂಡ್​ ಕ್ರಿಯೇಟ್ ಮಾಡಿದ್ದಾರೆ.

ಇಷ್ಟೇ ಅಲ್ಲ, ಇಲ್ಲಿ ಇನ್ನೊಂದು ವಿಶೇಷತೆ ಇದೆ. ಕಿರಣ್​ ಸದಾ ಒಂದಲ್ಲಾ ಒಂದು ಸಾಮಾಜಿಕ ಕೆಲಸಗಳಲ್ಲಿ ತೊಡಗಿರೋದು ಗೊತ್ತೇ ಇದೆ. ಈಗ ಮತ್ತೆ ಸಾಮಾಜಿಕ ಕಾಳಜಿಯೊಂದಿಗೆ ಹೊಸ ಪ್ಲಾನ್​ ಒಂದನ್ನು ಮಾಡಿದ್ದಾರೆ. ಹೊಸ ಪ್ಲಾಟ್​ ಫಾರಂ ಸೃಷ್ಟಿಸಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಕಿಂಗ್ಸ್​ ಱಂಪೇಜ್‌​ ಅನ್ನೋ ಆನ್‌ಲೈನ್‌ ವೇದಿಕೆ ಸೃಷ್ಟಿಸಿದ್ದಾರೆ. ಈ ಮೂಲಕ ಉದ್ಯೋಗ ಸೃಷ್ಟಿಗೂ ಮುಂದಾಗಿದ್ದಾರೆ. ಜೊತೆಗೆ ಈ ಪ್ಲಾನ್ ಹಿಂದೆ ಒಂದು ಚಾರಿಟಿಯೂ ಇದೆ. ಈ ಬಗ್ಗೆ ಕಿರಣ್‌ರಾಜ್ ನ್ಯೂಸ್‌ ಫಸ್ಟ್ ಜೊತೆ ಮಾತನಾಡಿದ್ದಾರೆ. ಆ ಸಂದರ್ಶನ ಇಲ್ಲಿದೆ ನೋಡಿ..

The post ಬರ್ತ್​ ಡೇಗೆ ಫ್ಯಾನ್ಸ್​ಗಳಿಗೇ ಗಿಫ್ಟ್ಸ್ ನೀಡಿದ ಹೀರೋ.. ಹೊಸ ಟ್ರೆಂಡ್ ಸೃಷ್ಟಿಸಿದ ಕಿರಣ್​ ರಾಜ್ appeared first on News First Kannada.

Source: newsfirstlive.com

Source link