ಮಾಜಿ ಸೈನಿಕನ ಮಗ ಪುಷ್ಕರ್ ಸಿಂಗ್ ಧಾಮಿ.. ಉತ್ತರಾಖಂಡ್​​ನ ನೂತನ CM ಹಿನ್ನೆಲೆ ಏನು?

ಮಾಜಿ ಸೈನಿಕನ ಮಗ ಪುಷ್ಕರ್ ಸಿಂಗ್ ಧಾಮಿ.. ಉತ್ತರಾಖಂಡ್​​ನ ನೂತನ CM ಹಿನ್ನೆಲೆ ಏನು?

ಡೆಹ್ರಾಡೂನ್: ಉತ್ತರಾಖಂಡ್ ಬಿಜೆಪಿಯಲ್ಲಿನ ಬಿಕ್ಕಟ್ಟು ಅಂತ್ಯವಾಗುತ್ತಿದ್ದು, ತೀರಥ್ ಸಿಂಗ್ ರಾವತ್ ರಾಜೀನಾಮೆ ಬಳಿಕ ಇದೀಗ ಪಕ್ಷ ನೂತನ ಸಿಎಂ ಸ್ಥಾನಕ್ಕೆ ಪುಷ್ಕರ್ ಸಿಂಗ್ ಧಾಮಿಯನ್ನ ಆಯ್ಕೆ ಮಾಡಿದೆ.

ತೀರಥ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಶಾಸಕಾಂಗ ಸಭೆ ಕರೆದಿತ್ತು. ಈ ಸಭೆಯಲ್ಲಿ ಖಟಿಮಾ ಕ್ಷೇತ್ರದ ಶಾಸಕರಾಗಿರುವ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ್​ನ ನೂತನ ಸಿಎಂ ಎಂದು ಬಿಜೆಪಿ 57 ಶಾಸಕರು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಈ ಮೂಲಕ ಉತ್ತರಾಖಂಡ್​​ನ 11ನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ನಾಳೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಪುಷ್ಕರ್ ಸಿಂಗ್ ಧಾಮಿ ಅವರು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ಆಪ್ತರಾಗಿದ್ದಾರೆ. 45 ವರ್ಷದ ಇವರು ಉಧಮ್ ಸಿಂಗ್ ಜಿಲ್ಲೆಯ ಖಟಿಮಾ ವಿಧಾನಸಭಾ ಕ್ಷೇತ್ರವನ್ನ 2  ಬಾರಿ ಪ್ರತಿನಿಧಿಸಿ ಗೆದ್ದಿದ್ದಾರೆ. ಈ ಹಿಂದೆ ಭಗತ್ ಸಿಂಗ್ ಕೋಶ್ಯರಿ ಸಿಎಂ ಆಗಿದ್ದ ವೇಳೆ ಧಾಮಿ ಅವರು ವಿಶೇಷ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

ಸಿಎಂ ಆಗಿ ಆಯ್ಕೆ ಆಗುತ್ತಿದ್ದಂತೆ ಧಾಮಿ ಅವರು ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ರಾಜಭವನಕ್ಕೆ ತೆರಳಿರುವ ಧಾಮಿ, ಇಂದೇ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ನಾನೊಬ್ಬ ಮಾಜಿ ಸೈನಿಕನ ಮಗ. ಸಾಮಾನ್ಯ ಕಾರ್ಯಕರ್ತನನ್ನ ಇಂದು ಸಿಎಂ ಸ್ಥಾನಕ್ಕೆ ಪಕ್ಷ ಆಯ್ಕೆ ಮಾಡಿದೆ. ಜನರ ಒಳಿತಾಗಿ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ನಮಗೆ ಇರುವ ಕಡಿಮೆ ಅವಧಿಯಲ್ಲಿ ನಾವು ಜನರ ಸೇವೆಯನ್ನ ಸವಾಲ್​ ಆಗಿ ಸ್ವೀಕರಿಸಿ ಕೆಲಸ ಮಾಡಬೇಕಿದೆ ಅಂತಾ ಧಾಮಿ ಹೇಳಿದ್ದಾರೆ.

The post ಮಾಜಿ ಸೈನಿಕನ ಮಗ ಪುಷ್ಕರ್ ಸಿಂಗ್ ಧಾಮಿ.. ಉತ್ತರಾಖಂಡ್​​ನ ನೂತನ CM ಹಿನ್ನೆಲೆ ಏನು? appeared first on News First Kannada.

Source: newsfirstlive.com

Source link