‘ಬ್ಯಾಟ್​​​​ಗಳು ಪಕ್ಕದ್​​ಮನೆ ಹೆಂಡತಿ ಇದ್ದಂತೆ’ -ಕಾಮೆಂಟರಿ ವೇಳೆ ದಿನೇಶ್​ ಕಾರ್ತಿಕ್ ಕೌಂಟರ್​

‘ಬ್ಯಾಟ್​​​​ಗಳು ಪಕ್ಕದ್​​ಮನೆ ಹೆಂಡತಿ ಇದ್ದಂತೆ’ -ಕಾಮೆಂಟರಿ ವೇಳೆ ದಿನೇಶ್​ ಕಾರ್ತಿಕ್ ಕೌಂಟರ್​

ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡುವ ಮೊದಲೇ ಟೀಂ ಇಂಡಿಯಾ ಅನುಭವಿ ಆಟಗಾರ ದಿನೇಶ್​ ಕಾರ್ತಿಕ್​ ತಮ್ಮದೇ ಸ್ಟೈಲ್​ ಕಾಮೆಂಟರಿ ಮೂಲಕ ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆದರೆ ಇಂಗ್ಲೆಂಡ್​, ಶ್ರೀಲಂಕಾ ನಡುವೆ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ ಮಾಡಿರುವ ಒಂದು ಕಾಮೆಂಟ್​ ಸದ್ಯ ವಿವಾದಕ್ಕೆ ಕಾರಣವಾಗಿದೆ.

ಡಬ್ಲ್ಯೂಟಿಸಿ ಫೈನಲ್​ ಕಾಮೆಂಟರಿ ಹೇಳಲು ಇಂಗ್ಲೆಂಡ್​ಗೆ ತೆರಳಿರುವ ದಿನೇಶ್ ಕಾರ್ತಿಕ್​ ಅಲ್ಲಿಯೇ ಇಂಗ್ಲೆಂಡ್​, ಶ್ರೀಲಂಕಾ ನಡುವೆ ನಡೆಯುತ್ತಿರುವ ಏಕದಿನ ಮತ್ತು ಟಿ20 ಪಂದ್ಯಗಳಿಗೂ ವೀಕ್ಷಕ ವಿವರಣೆ ನೀಡುತ್ತಿದ್ದಾರೆ.

ಇನ್ನು ಸರಣಿಯಲ್ಲಿ ಎರಡೂ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಸುಲಭವಾಗಿ ಗೆಲುವು ಪಡೆದುಕೊಂಡಿದೆ. ಇತ್ತ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ಹಾಗೂ ಏಕದಿನ ಪಂದ್ಯಗಳ ನಾಯಕ ಇಯಾನ್ ಮಾರ್ಗನ್​ ಕ್ರಿಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಮಾಡಿದ ಕಾಮೆಂಟ್​ ವೈರಲ್ ಆಗಿದೆ.

ಬ್ಯಾಟ್​​ಗಳು ಯಾವಾಗಲೂ ಪಕ್ಕದ ಮನೆಯ ಹೆಂಡತಿಯರಂತೆ. ಯಾವಾಗಲೂ ಪಕ್ಕದಲ್ಲಿರುವವನಿದೇ ಚೆನ್ನಾಗಿದೆ ಅನ್ಸುತ್ತೆ.. ಎಂದು ಕಾರ್ತಿಕ್​ ಹೇಳಿದ್ದಾರೆ. ಸದ್ಯ ಈ ಕುರಿತು ಅಸಮಾಧಾನ ಹೊರ ಹಾಕಿರುವ ಕೆಲ ಮಹಿಳಾ ಸಂಘಟನೆಗಳು, ಪತ್ನಿಯರಿಗೂ ವ್ಯಕ್ತಿತ್ವ ಇರುತ್ತದೆ ಎಂದು ಮರೆತು ಪತ್ನಿಯನ್ನು ಬ್ಯಾಟ್​​ಗೆ ಹೋಲಿಕೆ ಮಾಡುವುದು ಎಷ್ಟು ಸರಿಯಲ್ಲ. ಕೂಡಲೇ ದಿನೇಶ್ ಕಾರ್ತಿಕ್​ ಕ್ಷಮೆ ಕೋರಬೇಕು ಎಂದು ಆಗ್ರಹಿಸಿವೆ.

The post ‘ಬ್ಯಾಟ್​​​​ಗಳು ಪಕ್ಕದ್​​ಮನೆ ಹೆಂಡತಿ ಇದ್ದಂತೆ’ -ಕಾಮೆಂಟರಿ ವೇಳೆ ದಿನೇಶ್​ ಕಾರ್ತಿಕ್ ಕೌಂಟರ್​ appeared first on News First Kannada.

Source: newsfirstlive.com

Source link