ಅರ್ಜುನ್ ಸರ್ಜಾಗೆ ‘ಕಲಿಯುಗ ಬ್ರಹ್ಮ’, ಧ್ರುವ ಸರ್ಜಾಗೆ ‘ಹನುಮನ ಮೂರ್ತಿ’ ಗಿಫ್ಟ್ ಮಾಡಿದ ವಿನಯ್ ಗುರೂಜಿ

ಅರ್ಜುನ್ ಸರ್ಜಾಗೆ ‘ಕಲಿಯುಗ ಬ್ರಹ್ಮ’, ಧ್ರುವ ಸರ್ಜಾಗೆ ‘ಹನುಮನ ಮೂರ್ತಿ’ ಗಿಫ್ಟ್ ಮಾಡಿದ ವಿನಯ್ ಗುರೂಜಿ

ಎರಡು ದಿನದ ಹಿಂದೆ ಅರ್ಜುನ್ ಸರ್ಜಾ ನಿರ್ಮಿಸಿದ ಆಂಜನೇಯ ಸ್ವಾಮಿ ದೇವಸ್ಥಾನ ಚೆನ್ನೈನಲ್ಲಿ ಲೋಕಾರ್ಪಣೆಯಾಗಿದೆ.. ಸರ್ಜಾ ಕಟ್ಟಿಸಿರುವ ದೇವಾಲಯಕ್ಕೆ ಅವಧೂತ ವಿನಯ್ ಗುರೂಜಿ ಮುಖ್ಯ ಅತಿಥಿಯಾಗಿ ಭೇಟಿ ಕೊಟ್ಟಿದ್ದಾರೆ.

ಇದು ಅರ್ಜುನ್​ ಸರ್ಜಾ ಮತ್ತು ವಿನಯ್​ ಗುರೂಜಿಯವರ ಪ್ರಪ್ರಥಮ ಭೇಟಿಯಾಗಿದೆ. ಇದೇ ಸಂದರ್ಭದಲ್ಲಿ ಬೃಹತ್ ಗಾತ್ರದ ರುದ್ರಾಕ್ಷಿ ಮಾಲೆಯನ್ನು ಮತ್ತು ಕಲಾವಿದ ಕೋಟೆ ಗದ್ದೆ ರವಿ ಬಿಡಿಸಿರುವ ಕಲಿಯುಗ ಬ್ರಹ್ಮ ಪೇಟಿಂಗ್​​​ನ್ನು ಉಡುಗೊರೆಯಾಗಿ ನೀಡಿ ಸರ್ಜಾ ಕುಟುಂಬಕ್ಕೆ ಆಶೀರ್ವದಿಸಿದ್ದಾರೆ. ಭವ್ಯ ವಿಗ್ರಹ ಮತ್ತು ದೇವಾಲಯವನ್ನು ಕಂಡು ಸಂತಸರಾದ ವಿನಯ್​ ಗುರೂಜಿ ಮುಂದಿನ ಹನುಮ ಜಯಂತಿಯನ್ನು ಇಲ್ಲೇ ವಿಜೃಂಭಣೆಯಿಂದ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

blank

ಇನ್ನು ನಟ ಧೃವ ಸರ್ಜಾರನ್ನ ಕೂಡ ಮೊದಲ ಬಾರಿಗೆ ಭೇಟಿಯಾಗಿರುವ ವಿನಯ್ ಗುರೂಜಿ ಮೊದಲ ಭೇಟಿಯಲ್ಲೇ ಹನುಮನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದಾರೆ.

The post ಅರ್ಜುನ್ ಸರ್ಜಾಗೆ ‘ಕಲಿಯುಗ ಬ್ರಹ್ಮ’, ಧ್ರುವ ಸರ್ಜಾಗೆ ‘ಹನುಮನ ಮೂರ್ತಿ’ ಗಿಫ್ಟ್ ಮಾಡಿದ ವಿನಯ್ ಗುರೂಜಿ appeared first on News First Kannada.

Source: newsfirstlive.com

Source link