ಹೊಸ ಚಿತ್ರದ ತಯಾರಿಯಲ್ಲಿರೋ ರಿಷಬ್​​ ಶೆಟ್ಟಿಗೆ ಕೊರಗಜ್ಜನ ಆಶೀರ್ವಾದ

ಹೊಸ ಚಿತ್ರದ ತಯಾರಿಯಲ್ಲಿರೋ ರಿಷಬ್​​ ಶೆಟ್ಟಿಗೆ ಕೊರಗಜ್ಜನ ಆಶೀರ್ವಾದ

ಉಡುಪಿ: ಕನ್ನಡದ ಖ್ಯಾತ ನಟ‌, ನಿರ್ದೇಶಕ ರಿಷಬ್ ಶೆಟ್ಟಿ ಉಡುಪಿಯ ಬೈಲೂರಿನ ಬಬ್ಬು ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೆ‌ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

blank

ತಮ್ಮ ಹೊಸ ಚಿತ್ರದ ತಯಾರಿಗಾಗಿ ಉಡುಪಿಗೆ ಆಗಮಿಸಿದ ರಿಷಭ್ ಶೆಟ್ಟಿ, ಕೊರಗಜ್ಜನ ದರ್ಶನ ಪಡೆದರು. ಈ ಹಿಂದೆಯೂ ಖ್ಯಾತ ನಟ ರಕ್ಷಿತ್ ಶೆಟ್ಟಿ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ಕ್ಷೇತ್ರಕ್ಕೆ ಆಗಮಿಸಿ ಹರಕೆ ಸಲ್ಲಿಸಿದ್ದಾರೆ.

blank

ಇಲ್ಲಿರುವ ಕೊರಗಜ್ಜನ ಸನ್ನಿಧಿಗೆ ಬಂದು ಹರಕೆ ಹೇಳಿದ್ರೆ ಯಶಸ್ಸು ಸಿಗುತ್ತೆ ಅನ್ನುವ ನಂಬಿಕೆ ಭಕ್ತರದ್ದು. ಹಾಗಾಗಿ ಇಂದು ರಿಷಬ್ ಕೂಡ ಭೇಟಿ ನೀಡಿದ್ರು.

The post ಹೊಸ ಚಿತ್ರದ ತಯಾರಿಯಲ್ಲಿರೋ ರಿಷಬ್​​ ಶೆಟ್ಟಿಗೆ ಕೊರಗಜ್ಜನ ಆಶೀರ್ವಾದ appeared first on News First Kannada.

Source: newsfirstlive.com

Source link