ಸಿನಿ ರಸಿಕರಿಗೆ ನಿರಾಸೆ.. ಮಾಲ್​​ಗಳ ತೆರೆಯಲು ಸರ್ಕಾರ ಅನುಮತಿ

ಸಿನಿ ರಸಿಕರಿಗೆ ನಿರಾಸೆ.. ಮಾಲ್​​ಗಳ ತೆರೆಯಲು ಸರ್ಕಾರ ಅನುಮತಿ

ಬೆಂಗಳೂರು: ಈ ಬಾರಿಯ ಲಾಕ್​ಡೌನ್​ ಸಡಿಲಿಕೆಯಲ್ಲಿದ್ರೂ ಥಿಯೇಟರ್​​ಗಳನ್ನ ಓಪನ್ ಮಾಡಲು ಸರ್ಕಾರ ಅವಕಾಶ ಮಾಡಿಕೊಡುತ್ತಾ ಎಂದು ಕಾದು ಕುಳಿತಿದ್ದ ಸಿನಿಮಾ ಇಂಡಸ್ಟ್ರಿ ಹಾಗೂ ಸಿನಿ ರಸಿಕರಿಗೆ ನಿರಾಸೆಯಾಗಿದೆ.

ಲಾಕ್​ಡೌನ್ ಸಡಿಲಿಕೆ ಸಂಬಂಧ ಸರ್ಕಾರ ಇಂದು ಮಹತ್ವದ ಸಭೆ ನಡೆಸಿತು. ಸಭೆ ಬಳಿಕ ಸಿಎಂ ಬಿ.ಎಸ್​. ಯಡಿಯೂರಪ್ಪ, ಲಾಕ್​ಡೌನ್​ ಸಡಿಲಿಕೆಗೆ ತೆಗೆದುಕೊಂಡಿರುವ ನಿರ್ಧಾರಗಳನ್ನ ಮಾಧ್ಯಮಗಳ ಎದುರು ಪ್ರಕಟಿಸಿದರು.

ಈ ವೇಳೆ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲು ಯಾವುದೇ ಅವಕಾಶ ನೀಡಲ್ಲ ಅಂತಾ ತಿಳಿಸಿದ್ದಾರೆ. ಇನ್ನು ಮಾಲ್​​ಗಳನ್ನ ತೆರೆಯಲು ಅನುಮತಿ ನೀಡಲಾಗಿದೆ. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ ಎಂದರು.

ಇದನ್ನೂ ಓದಿ: ಬಾರ್, ಮಾಲ್​​, ದೇವಸ್ಥಾನಗಳಿಗೆ ರಿಲೀಫ್​.. ಇನ್ಮುಂದೆ ವೀಕೆಂಡ್​ ಕರ್ಫ್ಯೂ ಇರಲ್ಲ-ಸಿಎಂ ಘೋಷಣೆ

The post ಸಿನಿ ರಸಿಕರಿಗೆ ನಿರಾಸೆ.. ಮಾಲ್​​ಗಳ ತೆರೆಯಲು ಸರ್ಕಾರ ಅನುಮತಿ appeared first on News First Kannada.

Source: newsfirstlive.com

Source link