ತಮಿಳುನಾಡಿನಲ್ಲಿ ‘ಆಟೋ ಆ್ಯಂಬುಲೆನ್ಸ್​’ ಸೇವೆಗೆ ಚಾಲನೆ -ಇದರ ಅನುಕೂಲ ಏನು ಗೊತ್ತಾ?

ತಮಿಳುನಾಡಿನಲ್ಲಿ ‘ಆಟೋ ಆ್ಯಂಬುಲೆನ್ಸ್​’ ಸೇವೆಗೆ ಚಾಲನೆ -ಇದರ ಅನುಕೂಲ ಏನು ಗೊತ್ತಾ?

ಚೆನ್ನೈ: ತಮಿಳುನಾಡು ಸರ್ಕಾರ ಹೊಸ ಕಲ್ಪನೆಯಲ್ಲಿ ಇಂದು ಆಟೋ ಆ್ಯಂಬುಲೆನ್ಸ್​ ಸೇವೆಗೆ ಚಾಲನೆ ನೀಡಿದೆ. ಕೊರೊನಾ ಸೋಂಕಿತರಿಗೆ ಅನುಕೂಲ ಆಗುವ ಉದ್ದೇಶದಿಂದ ಅರಣ್ಯ ಸಚಿವ ಕೆ.ರಾಮಚಂದ್ರನ್​​ ಅವರು ಇಂದು ನಿಲ್ಗಿರಿಸ್ ಜಿಲ್ಲೆಯಲ್ಲಿ 6 ಆಟೋ ಆ್ಯಂಬುಲೆನ್ಸ್​ಗೆ ಹಸಿರು ನಿಶಾನೆ ತೋರಿದ್ದಾರೆ.

ಗುಡ್ಡಗಾಡಿನಿಂದ ಕೂಡಿರುವ ಜಿಲ್ಲೆ ಇದಾಗಿದೆ. ಜಿಲ್ಲೆಯಲ್ಲಿರುವ ಹಳ್ಳಿಗಳಿಗೆ ಹೋಗಬೇಕು ಅಂದರೆ ತುಂಬಾ ತ್ರಾಸದಾಯಕ. ರಸ್ತೆಗಳು ತುಂಬಾ ಸಂಕೀರ್ಣವಾಗಿವೆ, ದೊಡ್ಡ ದೊಡ್ಡ ಆ್ಯಂಬುಲೆನ್ಸ್​ ಓಡಾಡೋದು ಕಷ್ಟ. ಹೀಗಾಗಿ ಇಲ್ಲಿಯ ಜನರ ಅನುಕೂಲಕ್ಕಾಗಿ ಆಟೋ ಆ್ಯಂಬುಲೆನ್ಸ್​ ಪರಿಚಯ ಮಾಡಿಕೊಂಡಿದ್ದೇವೆ ಅಂತಾ ಕೆ.ರಾಮಚಂದ್ರನ್ ಹೇಳಿದ್ದಾರೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪರಿಶ್ರಮದಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದೆ. ಆದರೆ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ನಿಭಾಯಿಸಲು ಎಲ್ಲಾ ರೀತಿಯ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ ಅಂತಾ ಅವರು ಇದೇ ವೇಳೆ ಮಾಹಿತಿ ನೀಡಿದರು.

The post ತಮಿಳುನಾಡಿನಲ್ಲಿ ‘ಆಟೋ ಆ್ಯಂಬುಲೆನ್ಸ್​’ ಸೇವೆಗೆ ಚಾಲನೆ -ಇದರ ಅನುಕೂಲ ಏನು ಗೊತ್ತಾ? appeared first on News First Kannada.

Source: newsfirstlive.com

Source link