18 ಸಾವಿರ ಲಂಚ ಪಡೆಯುವಾಗ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಪಾಲಿಕೆ ಸಿಬ್ಬಂದಿ

18 ಸಾವಿರ ಲಂಚ ಪಡೆಯುವಾಗ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಪಾಲಿಕೆ ಸಿಬ್ಬಂದಿ

ಹುಬ್ಬಳ್ಳಿ: 18 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಾಲಿಕೆಯ ಇಬ್ಬರು ಭ್ರಷ್ಟ ನೌಕರರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಪಾಲಿಕೆಯ ಹೆಲ್ತ್ಇನ್ಸ್​ಪೆಕ್ಟರ್​ ನೂರಂದಪ್ಪಾ ಭಜಂತ್ರಿ ಮತ್ತು ವಾರ್ಡ್ ಕ್ಲೀನಿಂಗ್​ ಇನ್ಸ್​ಪೆಕ್ಟರ್ ತಂಜಮಿಲ್​ ಶಿರಸಿ ಇವರು HDMC ವಾರ್ಡ್ ಕ್ಲಿನಿಂಗ್ ಕಾಂಟ್ರ್ಯಾಕ್ಟರ್ ಅಲ್ಲಾಭಕ್ಷಿ ಅವರಿಂದ 18 ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.

ಈ ಹಿನ್ನೆಲೆ ಎಸಿಬಿಗೆ ದೂರು ನೀಡಿದ್ದ ಕಾಂಟ್ರ್ಯಾಕ್ಟರ್​ ಅಲ್ಲಾಭಕ್ಷಿ, ಎಸಿಬಿ ಮಾಹಿತಿ ಮೇರೆಗೆ ಹಣ ಕೊಡಲು ಒಪ್ಪಿದ್ದಾನೆ.. ಅದೇ ಪ್ರಕಾರವಾಗಿ ಪಾಲಿಕೆ ನೌಕರರು, ಗಣೇಶ ನಗರದ ಶ್ರೀ ಕೃಷ್ಣ ಹೋಟೆಲ್​ನಲ್ಲಿ ಲಂಚ ಪಡೆಯುತ್ತಿರುವ ವೇಳೆ ಆರೋಪಿಗಳು ಎಸಿಬಿ ಖೆಡ್ಡಾಕೆ ಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಅಧಿಕಾರಿಗಳು ಹೆಚ್ಚಿನ ವಿಚಾರಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

The post 18 ಸಾವಿರ ಲಂಚ ಪಡೆಯುವಾಗ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಪಾಲಿಕೆ ಸಿಬ್ಬಂದಿ appeared first on News First Kannada.

Source: newsfirstlive.com

Source link