ರಾಜ ರಾಣಿ ಶೋಗೆ ಸ್ಟ್ಯಾಂಡ್‌ಅಪ್ ಕಾಮಿಡಿಯನ್​ ಎಂಟ್ರಿ

ರಾಜ ರಾಣಿ ಶೋಗೆ ಸ್ಟ್ಯಾಂಡ್‌ಅಪ್ ಕಾಮಿಡಿಯನ್​ ಎಂಟ್ರಿ

ಟೈಮ್ ಇದ್ದಾಗ ನೀವು ಸ್ಟ್ಯಾಂಡ್‌ಅಪ್ ಕಾಮಿಡಿಗಳನ್ನ ನೋಡೋಣ ಅಂತಾ ಡಿಸೈಡ್ ಮಾಡಿದ್ರೆ, ಖಂಡಿತವಾಗಿ ಇವ್ರನ್ನ ನೋಡಿರ್ತಿರಾ. ಇವ್ರು ಪಂಚಿಂಗ್ ಡೈಲಾಗ್ಸ್ ಕೇಳಿ ನಕ್ಕು ನಕ್ಕು ಸುಸ್ತಾಗಿರ್ತೀರಾ. ಅವ್ರೇ ಪವನ್ ವೇಣುಗೋಪಾಲ್‌. ಸೋಷಿಯಲ್ ಮೀಡಿಯಾ ಮೂಲಕ ನಗಿಸೋರ ಪೈಕಿ ಪವನ್‌ಗೆ ಖಾಯಂ ಸ್ಥಾನ. ಯಾಕಂದ್ರೆ, ಪವನ್‌ ಕಾಮಿಡಿಗಳು ಜನರಿಗೆ ಇಷ್ಟ ಆಗಿದೆ.

ಪವನ್‌ ಬಗ್ಗೆ ಯಾಕೆ ಇಷ್ಟೊಂದು ಹೇಳ್ತಿದ್ದೀವಿ ಅಂದ್ರೆ.. ಪವನ್‌ ಫಾರ್‌ ದಿ ಫಸ್ಟ್‌ ಟೈಮ್‌ ಟಿವಿ ಶೋನಲ್ಲಿ ಕಂಟೆಸ್ಟೆಂಟ್‌ ಆಗಿದ್ದಾರೆ. ರಾಜ ರಾಣಿ ಶೋ ಮೂಲಕ ಜನರನ್ನು ರಂಜಿಸಲಿದ್ದಾರೆ. 12 ಜೋಡಿಗಳ ಗೇಮಿಂಗ್ ರಿಯಾಲಿಟಿ ಶೋ ರಾಜ ರಾಣಿ ಸಖತ್ ಸದ್ದು ಮಾಡ್ತಿದೆ. ನಾವು ಕೂಡ ಈ ಶೋ ಬಗ್ಗೆ ಸಾಕಷ್ಟು ಅಪ್ಡೇಟ್ಸ್‌ ನೀಡ್ತಾನೆ ಬಂದಿದ್ದೇವೆ. ಹಲವು ಜೋಡಿಗಳ ಬಗ್ಗೆ ನಿಮ್ಗೆ ಈಗಾಗ್ಲೇ ಮಾಹಿತಿ ನೀಡಿದ್ದೀವಿ.

ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್‌ ಪವನ್‌ ದಂಪತಿ ಜಾಯಿನ್‌ ಆಗಿರೋದು ಈ ಶೋ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಿಸಿದ್ದು, ಪವನ್‌ ಹಾಗೂ ಸುಮನ್‌ ದಂಪತಿ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ. ಇಲ್ಲಿ ಇನ್ನೊಂದು ವಿಶೇಷ ಇದೆ. 12 ಜೋಡಿಗಳ ಪೈಕಿ ಎಲ್ಲರಿಗೂ ಒಬ್ಬರೇ ಹೆಂಡ್ತಿ. ಆದ್ರೆ, ಇನ್ನೊಬ್ಬರು ಈ ಶೋಗೆ ಸ್ಪರ್ಧಿಯಾಗಿದ್ದಾರೆ. ಅವ್ರಿಗೆ ಒಬ್ಬರಲ್ಲ ಇಬ್ಬರು ಪತ್ನಿಯರು. ಅವರೇ ನಟ ರಾಜು ತಾಳಿಕೋಟೆ. ಹೀಗೆ ಸಾಕಷ್ಟು ಇಂಟರೆಸ್ಟಿಂಗ್ ಎಲಿಮೆಂಟ್ಸ್‌ನಿಂದ ತುಂಬಿರೋ ಈ ಶೋ ಕುತೂಹಲ ಮೂಡಿಸಿರೋದು ಸುಳ್ಳಲ್ಲ.

The post ರಾಜ ರಾಣಿ ಶೋಗೆ ಸ್ಟ್ಯಾಂಡ್‌ಅಪ್ ಕಾಮಿಡಿಯನ್​ ಎಂಟ್ರಿ appeared first on News First Kannada.

Source: newsfirstlive.com

Source link