ರಾಜ್ಯದ ವೀರ ಯೋಧ ಹುತಾತ್ಮ.. ಪುಲ್ವಾಮಾದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ಹೇಗಿತ್ತು?

ರಾಜ್ಯದ ವೀರ ಯೋಧ ಹುತಾತ್ಮ.. ಪುಲ್ವಾಮಾದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ಹೇಗಿತ್ತು?

ನವದೆಹಲಿ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್ಪೊರಾ ಪ್ರದೇಶದ ಹಂಜಿನ್ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಯ ಶಂಕ್ರಪ್ಪ ಬಮ್ಮನಳ್ಳಿ (36) ಹುತಾತ್ಮರಾಗಿದ್ದಾರೆ. ಹುತಾತ್ಮ ವೀರ ಯೋಧನ ಪಾರ್ಥಿವ ಶರೀರ ನಾಳೆ ಸ್ವಗ್ರಾಮಕ್ಕೆ ಬರಲಿದ್ದು, ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಾರ್ಯಾಚರಣೆ ಹೇಗಿತ್ತು?
ಪುಲ್ವಾಮಾ ಜಿಲ್ಲೆಯ ರಾಜ್ಪೊರಾ ಬಳಿಯ ಹಂಜನ್ ಗ್ರಾಮದಲ್ಲಿ ಲಷ್ಕರ್​ ಉಗ್ರರು ಇರುವ ಬಗ್ಗೆ ಗುರುವಾರ ಖಚಿತ ಮಾಹಿತಿ ಸಿಗುತ್ತೆ. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ.. ಉಗ್ರರ ವಿರುದ್ಧ ಕಾರ್ಯಾಚರಣೆಗೆ ಮುಂದಾದರು. ಸೆಕ್ಯೂರಿಟಿ ಫೋರ್ಸ್​, 44 ರಾಷ್ಟ್ರೀಯ ರೈಫಲ್ಸ್​ ಮತ್ತು 182/183 ಬಿಎನ್​ ಸಿಆರ್​ಪಿಎಫ್​ ಮತ್ತು ಜಮ್ಮು-ಕಾಶ್ಮೀರದ ಪೊಲೀಸರ ನೇತೃತ್ವದಲ್ಲಿ ಕೂಂಬಿಂಗ್ ಶುರುವಾಗುತ್ತದೆ.

blank

ಕಾರ್ಯಾಚರಣೆಗೂ ಮುನ್ನ ಅಲ್ಲಿದ್ದ ಸ್ಥಳೀಯರನ್ನ ಸುರಕ್ಷಿತವಾಗಿ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತದೆ. ನಂತರ ಕಾರ್ಯಾಚರಣೆಗೆ ಇಳಿದ ಸೇನೆ, ಮೊದಲು ಉಗ್ರರಿಗೆ ಶರಣಾಗುವಂತೆ ಸೂಚನೆ ನೀಡಿತು. ಆದರೆ ಉಗ್ರರು ಯೋಧರ ಮೇಲೆ ಪ್ರತಿದಾಳಿ ನಡೆಸಲು ಮುಂದಾಗುತ್ತಾರೆ. ಇದಕ್ಕೆ ವೀರ ಯೋಧರು ದಿಟ್ಟ ಉತ್ತರವನ್ನ ನೀಡುತ್ತಾರೆ. ಆದರೆ ರಾತ್ರಿಯಾಗಿದ್ದರಿಂದ ಸೇನೆಯ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ.

ಮತ್ತೆ ಕೂಂಬಿಂಗ್
ಹೀಗಾಗಿ ಯೋಧರು ತಮ್ಮ ಕಾರ್ಯಾಚರಣೆಯನ್ನ ಅಲ್ಲಿಗೆ ಸ್ಟಾಪ್​ ಮಾಡಿ, ಮಾರನೇ ದಿನ ಬೆಳಗ್ಗೆ ಮತ್ತೆ ಕೂಂಬಿಂಗ್ ಶುರು ಮಾಡ್ತಾರೆ. ಅಡಗಿದ್ದ ಉಗ್ರರ ವಿರುದ್ಧ ಶೋಧಕಾರ್ಯಕ್ಕೆ ಇಳಿದ ಸೈನಿಕರು ಕೊನೆಗೂ ಉಗ್ರರನ್ನ ಹುಡುಕಿ ಫೈರಿಂಗ್ ಮಾಡ್ತಾರೆ. ಈ ವೇಳೆ ಯೋಧರನ್ನ ಗುರಿಯಾಗಿಸಿಕೊಂಡು ಉಗ್ರರು ಪ್ರತಿದಾಳಿ ಮಾಡ್ತಾರೆ. ಆಗ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯುತ್ತೆ.

ಕೊನೆಗೂ ಉಗ್ರರನ್ನ ಸದೆಬಡೆಯುವಲ್ಲಿ ಭಾರತೀಯ ಸೇನೆ ಸಫಲವಾಗುತ್ತೆ. ನಿಶಾಜ್ ಹುಸೇನ್ ಲೋನ್​ (ಡಿಸ್ಟ್ರಿಕ್ಟ್​ ಕಮಾಂಡರ್​ ಎಲ್​ಇಟಿ), ಡ್ಯಾನೀಶ್ ಮಂಜೂರ್​ ಶೇಖ್​ , ಅಮೀರ್ ವಾಘೆ, ಮೆಹ್ರನ್ ಮಂಜೂರ್ ಮತ್ತು ಅಬು ರೆಹನ್ ಹೆಸರಿನ ಐವರು ಉಗ್ರರನ್ನ ಹೊಡೆದುರುಳಿಸಲಾಗುತ್ತೆ. ಅದರಲ್ಲಿ ಅಬು ರೆಹಾನ್ ಪಾಕಿಸ್ತಾನದ ಉಗ್ರ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಇನ್ನು ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಸ್ಫೋಟಕಗಳು ಸೇರಿದಂತೆ, ಹಲವು ಮಹತ್ವದ ದಾಖಲೆಗಳು ಹಾಗೂ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನು ತನಿಖೆ ವೇಳೆ 2019, ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ನಡೆಸಿದ ದಾಳಿಯ ಮಾದರಿಯಲ್ಲೇ ಸ್ಕೆಚ್ ಹಾಕಿದ್ದರು ಅಂತಾ ಜಮ್ಮು-ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

blank

ಉಗ್ರರು ನಡೆಸಿದ ದಾಳಿಗೆ ಇಬ್ಬರು ಯೋಧರು ಗಾಯಗೊಳ್ತಾರೆ. ಗಾಯಗೊಂಡಿರುವ ಉಗ್ರರನ್ನ ಕೂಡಲೇ 92ನೇ ಬೇಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ವಿಜಯಪುರದ ಯೋಧ ಕಾಶಿರಾಯ ಶಂಕ್ರಪ್ಪ ಅವರು ಹುತಾತ್ಮರಾಗಿದ್ದಾರೆ. ಹವಾಲ್ದಾರ್ ಕಾಶಿರಾ ಬಮ್ಮನಹಳ್ಳಿ 2006 ರಲ್ಲಿ ಸೇನೆಗೆ ಸೇರಿದ್ದರು. 36 ವರ್ಷದ ಕಾಶಿರಾಯ್ ಪತ್ನಿ ಹಾಗೂ ಓರ್ವ ಪುತ್ರ ಹಾಗೂ ಮಗಳನ್ನ ಅಗಲಿದ್ದಾರೆ.

ಇದನ್ನೂ ಓದಿ: ಭಯೋತ್ಪಾದಕರ ಗುಂಡಿನ ದಾಳಿಗೆ ವಿಜಯಪುರದ ಯೋಧ ಹುತಾತ್ಮ.. ಕುಟುಂಬದಲ್ಲಿ ಮಡುಗಟ್ಟಿದ ಮೌನ

ಇದನ್ನೂ ಓದಿ: ಪುಲ್ವಾಮಾದಲ್ಲಿ 5 ಲಷ್ಕರ್ ಉಗ್ರರು ಉಡೀಸ್.. ಓರ್ವ ಯೋಧ ಹುತಾತ್ಮ

The post ರಾಜ್ಯದ ವೀರ ಯೋಧ ಹುತಾತ್ಮ.. ಪುಲ್ವಾಮಾದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ಹೇಗಿತ್ತು? appeared first on News First Kannada.

Source: newsfirstlive.com

Source link