ಬೈಕ್, ಟ್ಯಾಂಕರ್ ಡಿಕ್ಕಿಯಾಗಿ ನಿರ್ದೇಶಕನ ಪುತ್ರ ದುರ್ಮರಣ

ಬೆಂಗಳೂರು: ರಸ್ತೆ ಅಪಘಾತದಲ್ಲಿ ನಿರ್ದೇಶಕರೊಬ್ಬರ ಪುತ್ರ ಸಾವನ್ನಪ್ಪಿರೋ ಘಟನೆ ಬೆಂಗಳೂರಿನ ಹೊರ ವಲಯದ ನ್ಯೂ ಲಿಂಕ್ ರಸ್ತೆಯಲ್ಲಿ ನಡೆದಿದೆ.

ಮಯೂರ್(20) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಯುವಕ. ನಟ ನಿರ್ದೇಶಕ ಸೂರ್ಯೋದಯ ಪುತ್ರ ಮಯೂರ್ ಕೆಟಿಎಂ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಟ್ಯಾಂಕರ್ ರೂಪದಲ್ಲಿ ಬಂದ ಜವರಾಯ ಡ್ಯೂಕ್ ಬೈಕ್ ಮೇಲೆ ಎರಗಿದೆ. ಪರಿಣಾಮ ಬೈಕ್ ನಲ್ಲಿದ್ದ ಮಯೂರ್ ಗಂಭೀರ ಗಾಯಗಳಾಗಿದೆ.

ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಾಳು ಮಯೂರ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಯೂರ್ ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಟ್ಯಾಂಕರ್ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ನಟ ನಿರ್ದೇಶಕ ಸೂರ್ಯೋದಯ ಪೆರಂಪಲ್ಲಿ ಸಾಲ್ಟ್ ಎಂಬ ಕನ್ನಡ ಚಿತ್ರ ಹಾಗೂ ದೇಯಿ ಬೈದೆತಿ ಎಂಬ ತುಳು ಚಿತ್ರದಲ್ಲಿ ನಟಿಸಿದ್ದರು. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್, ನೆಟ್ವರ್ಕ್‍ಗಾಗಿ ಗುಡ್ಡ ಹತ್ತುತ್ತಿದ ಮಲೆನಾಡ ಮಕ್ಕಳು

The post ಬೈಕ್, ಟ್ಯಾಂಕರ್ ಡಿಕ್ಕಿಯಾಗಿ ನಿರ್ದೇಶಕನ ಪುತ್ರ ದುರ್ಮರಣ appeared first on Public TV.

Source: publictv.in

Source link