ಬೆಳಗಾವಿಗೆ ಆಗಮಿಸಿದ ಹುತಾತ್ಮ ಯೋಧನ ಪಾರ್ಥಿವ ಶರೀರ; ನಾಳೆ ಬೆಳಗ್ಗೆ ಸ್ವಗ್ರಾಮಕ್ಕೆ

ಬೆಳಗಾವಿಗೆ ಆಗಮಿಸಿದ ಹುತಾತ್ಮ ಯೋಧನ ಪಾರ್ಥಿವ ಶರೀರ; ನಾಳೆ ಬೆಳಗ್ಗೆ ಸ್ವಗ್ರಾಮಕ್ಕೆ

ಬೆಳಗಾವಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಿನ್ನೆ ಹುತಾತ್ಮರಾದ ವೀರಯೋಧ ಕಾಶಿರಾಯ್ ಶಂಕ್ರಪ್ಪ ಬೊಮ್ಮನಹಳ್ಳಿ ಅವರ ಪಾರ್ಥಿವ ಶರೀರ ಬೆಳಗಾವಿಗೆ ಆಗಮಿಸಿದೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ರಾತ್ರಿ 10 ಗಂಟೆ ಸುಮಾರಿಗೆ ಪಾರ್ಥಿವ ಶರೀರ ಬಂದಿದೆ. ವಿಮಾನ ನಿಲ್ದಾಣದಲ್ಲಿ ಕಾಶಿರಾಯ್ ಅವರಿಗೆ  ಬೆಳಗಾವಿ ಜಿಲ್ಲಾಡಳಿತ, ಸೇನೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು.

blank

ನಂತರ ಸೇನಾಧಿಕಾರಿಗಳು ಪಾರ್ಥಿವ ಶರೀರವನ್ನ ವಿಶೇಷ ವಾಹನದ ಮೂಲದ ಬೆಳಗಾವಿಯ ಸೇನಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ರಾತ್ರಿಯಾದ ಹಿನ್ನೆಲೆಯಲ್ಲಿ ಪಾರ್ಥಿವ ಶರೀರವನ್ನ ಆಸ್ಪತ್ರೆಯಲ್ಲಿಟ್ಟು ನಾಳೆ ಸ್ವಗ್ರಾಮ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಉಕ್ಕಲಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನಸುಕಿನ ಜಾವ 4ಗಂಟೆಗೆ ಬೆಳಗಾವಿಯಿಂದ ಸ್ವಗ್ರಾಮಕ್ಕೆ ಪ್ರಾರ್ಥಿವ ಶರೀರ ತಲುಪಲಿದ್ದು, ನಾಳೆ ಮಧ್ಯಾಹ್ನ 1 ವೇಳೆಗೆ ಗಂಟೆಗೆ ಸ್ವಗ್ರಾಮ ಉಕ್ಕಲಿಯಲ್ಲಿ ಅಂತ್ಯಕ್ರಿಯೆ ನಡೆಯಲ್ಲಿದೆ.

The post ಬೆಳಗಾವಿಗೆ ಆಗಮಿಸಿದ ಹುತಾತ್ಮ ಯೋಧನ ಪಾರ್ಥಿವ ಶರೀರ; ನಾಳೆ ಬೆಳಗ್ಗೆ ಸ್ವಗ್ರಾಮಕ್ಕೆ appeared first on News First Kannada.

Source: newsfirstlive.com

Source link