ಅಮೆರಿಕಾವನ್ನೇ ಬೆಚ್ಚಿ ಬೀಳಿಸಿದ ವಿಕ್ಷಿಪ್ತ ಸೆಕ್ಸ್ ಕಲ್ಟ್; ಕಾಮುಕ ಸೆಲೆಬ್ರಿಟಿಗಳ ಅಸಲೀ ಕಹಾನಿ ಏನ್​ ಗೊತ್ತಾ?

ಅಮೆರಿಕಾವನ್ನೇ ಬೆಚ್ಚಿ ಬೀಳಿಸಿದ ವಿಕ್ಷಿಪ್ತ ಸೆಕ್ಸ್ ಕಲ್ಟ್; ಕಾಮುಕ ಸೆಲೆಬ್ರಿಟಿಗಳ ಅಸಲೀ ಕಹಾನಿ ಏನ್​ ಗೊತ್ತಾ?

ದೀಪದ ಕೆಳಗೇ ಕತ್ತಲೆ ಅನ್ನೋದು ಮತ್ತೆ ಮತ್ತೆ ನಿರೂಪಿತವಾಗುತ್ತಲೇ ಇರುತ್ತೆ.. ಜಗತ್ತಿಗೇ ಮಾನವ ಹಕ್ಕುಗಳ, ಮಹಿಳಾ ಸಶಕ್ತಿಕರಣದ ಪಾಠ ಮಾಡೋ ಅಮೆರಿಕಾದಲ್ಲೇ ನಡೆಯಬಾರದ್ದೆಲ್ಲ ರಾಜಾರೋಶವಾಗಿಯೇ ನಡೆಯೋದು ಸುಳ್ಳಲ್ಲ.. ಸದ್ಯ ಅಂಥದ್ದೇ ಒಂದು ಪ್ರಕರಣ ಈಗ ಹೊರ ಬಂದಿದ್ದು.. ಇಡೀ ಜಗತ್ತೇ ಬೆಚ್ಚಿ ಬೀಳುವಂತಾಗಿದೆ..!

ರಿಲ್ಯಾಕ್ಸ್… ಫೀಲ್ ಪ್ರೌಡ್ ಎಬೌಟ್ ಯೂ.. ಯಾವುದೇ ಕಾರಣಕ್ಕು ನಿಮ್ಮನ್ನು ನೀವು ಸಂತ್ರಸ್ತರಂತೆ ಕಾಣಬೇಡಿ.. ನಿಮ್ಮ ನಗುವೇ ನಿಮ್ಮ ಆತ್ಮ ವಿಶ್ವಾಸದ ಸಂಕೇತ.. ನೀವು ಏನೇ ಮಾಡಿ ಕಾನ್ಫಿಡೆಂಟ್ ಆಗಿ ಮಾಡಿ.. ನಗ್ತಿರಿ.. ನಗುತ್ತಲೇ ಇರಿ.. ನಗು ನಗುತ್ತಲೇ ಹೊಸ ಸ್ನೇಹಿತರನ್ನು ಸಂಪಾದಿಸಿ.. ಯಾವುದೇ ಕೆಲಸ ಮಾಡಿ ಆತ್ಮವಿಶ್ವಾಸದಿಂದ ಮಾಡಿ.. ಆತ್ಮ ವಿಶ್ವಾಸ ಪಡೆದುಕೊಳ್ಳೋಕೆ ಪ್ರಯತ್ನ ಪಡಿ.. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬಹುದು.. ನಮ್ಮ ಉದ್ದೇಶ ಜನರು ತಮ್ಮ ನಿಜ ಸಾಮಾರ್ಥ್ಯವನ್ನು ಕಾಣ ಬೇಕು ಅನ್ನೋದು.. ಜೀವನದ ನಿಜವಾದ ಸಂತೋಶವನ್ನು ಎಲ್ಲರೂ ಅನುಭವಿಸಬೇಕು.. ಸಾಂಪ್ರದಾಯಿಕ ಯೋಚನೆಗಳು ಸೋತಾಗ.. ಕೆಲವೊಮ್ಮೆ ಅಸಂಪ್ರದಾಯಿಕ ಯೋಜನೆಗಳು ಗೆಲುವನ್ನು ತಂದುಕೊಡಲು ಬೇಕಾಗುತ್ತವೆ.. ನಿಮ್ಮ ಅಧಿಕಾರವನ್ನು ನೀವೇ ಗಳಿಸಿಕೊಳ್ಳಬೇಕಾಗುತ್ತದೆ.. ನಿಮ್ಮ ಬದ್ಧತೆಯೇ ನಿಮ್ಮ ಶಕ್ತಿಯಾಗಿರುತ್ತದೆ.. ನಿಮ್ಮ ನಿಜವಾದ ಶಕ್ತಿ ಅರಿತರೆ ಗೆಲುವು ಸಾಧ್ಯವಾಗುತ್ತದೆ.. ಇಂಥ ಶಕ್ತಿ ಅರಿಯಲು ನಾವು ಸಹಾಯ ಮಾಡ್ತೀವಿ..

blank

ವಾವ್​​​​… ವ್ಹಾಟ್ ಎ ನೋಬಲ್ ಥಾಟ್.. ಅದೆಂಥ ಸುಂದರ ಯೋಚನೆ.. ಇಂಥ ಯೋಚನಾ ಲಹರಿ ಬಗ್ಗೆ ಯೋಚಿಸುವುದೇ ಖುಷಿ ತಂದು ಕೊಡುತ್ತೆ.. ಇಂಥ ಯೋಜನಾ ಲಹರಿ ಬಿತ್ತುವ ಯಾರೇ ಇದ್ದರೂ.. ಅದೆಂಥ ಅದ್ಭುತವಾದ ಮನಸ್ಸು ಅವರದ್ದು ಇದ್ದಿರಬಹುದು..? ಅವಕಾಶ ಸಿಕ್ಕರೆ ಖಂಡಿತ ನಾವೂ ಒಂದು ಬಾರಿಗೆ ಅಲ್ಲಿಗೆ ಹೋಗಬೇಕು.. ಮನಸ್ಸಿನಲ್ಲಿಯ ಎಲ್ಲ ಚಿಂತೆಗಳನ್ನು ಕಳೆದುಕೊಂಡು.. ಚೈತನ್ಯದ ಅನುಭವ ಪಡೆಯಬೇಕು.. ಅಂತಾ ಯಾರಿಗೆ ಅನಿಸಲ್ಲ ಹೇಳಿ..

ಹೀಗೆ ಅನಿಸಿಯೇ.. ತುಂಬು ಯವ್ವನದ ಮೈ ಸಿರಿ ಹೊತ್ತ ಸುಂದರ-ಸುಂದರಿಯರು.. ಭವ್ಯ ಭವಿಷ್ಯದ ಕನಸು ಹೊತ್ತ ನಟ-ನಟಿಯರು.. ಕಣ್ಣಗಲ ಕಾಸಿನ ಊರಗಲ ಆಸೆ ಹೊತ್ತ ಕನಸುಗಾರ್ತಿಯರು..ಕನಸುಗಾರರು, ಜಗದಗಲ..ಮುಗಿಲಗಲ ಚಾಚುವ ಕಂಪನಿ ಕಟ್ಟಬೇಕು ಅಂತ ಬಯಸಿದ ಸಿಇಓಗಳು.. ಉದ್ಯೋಗದ ಭರವಸೆ ಅರಿಸುತ್ತಿದ್ದ ಯುವಕ-ಯುವತಿಯರು.. ಬಯಸಿದ ಸಂಗಾತಿ ಸಿಗದೇ ಬಸವಳಿದ ವಿರಹ ವಿಹಗಗಳು.. ಆತ್ಮವಿಶ್ವಾಸದ ಕೊರತೆಯಿಂದಲೇ ಅವಕಾಶ ವಂಚಿತರಾದ ಸಂತ್ರಸ್ತರು.. ನಿರಂತರ ಸೋಲಿನ ಸೋಂಕು ಹತ್ತಿಸಿಕೊಂಡ ಅತೃಪ್ತ ಮನಸ್ಸುಗಳು.. ಆ ಸಂಸ್ಥೆಯನ್ನ ಹುಡುಕಿ ಹುಡುಕಿ ಬಂದರು..ದುಡುಕಿದರು..! ಸಂತಸದ ಕನಸು ಹೊತ್ತು ಅನಾಮಿಕ ದಾರಿಯ ಪಯಣಿಗರಾದರು.. ಅದೂ ಪುಗಸಟ್ಟೆಯಲ್ಲ.. ಕೂಡಿಟ್ಟಿದ್ದನ್ನೆಲ್ಲ ಸುರಿದು.. ಐದೇ ದಿನಕ್ಕೆ ಸುರಿದು.. ಹಣ ಸುರಿದಾಗ ತೆರೆದ ಬಾಗಿಲು ಸ್ವರ್ಗದ್ದೇ ಅಂತಾ ಎಲ್ಲರು ಭಾವಿಸಿಯೇ ಬಂದಿದ್ರು.. ಆದ್ರೆ..!

ದೂರದಿಂದಲೇ ಕಾಣುವ ಬೆಟ್ಟ ಎಷ್ಟು ನುಣ್ಣಗೆ ಅಲ್ವಾ.. ಹಿಮ ಸುರಿದ ತಪ್ಪಲುಗಳೇ ಸ್ವರ್ಗವಲ್ಲವಾ..? ಇಂಥ ಕಲ್ಪನೆಯಂತೆಯೇ ವಾಸ್ತವ ಇದ್ರೆ.. ಎಷ್ಟು ಚೆಂದ?! ಆಳುದ್ದದ ಕನ್ನಡಿ ಮೇಲೆ ಬಿದ್ದ ಧೂಳಿನಲ್ಲಿ ಎಷ್ಟೇ ಸುದ್ದರ ಚಿತ್ತಾರ ಬಿಡಿಸಿದ್ರೂ.. ವಾಸ್ತವದ ನೀರು.. ಒಂದು ತುಂಡು ಬಟ್ಟೆ ಅದನ್ನೆಲ್ಲ ಕ್ಲೀನ್​​ ಮಾಡಿ ಬಿಸಾಕಿ.. ಪ್ರತಿಬಿಂಬಕ್ಕೆ ದಾರಿ ಮಾಡಿ ಕೊಟ್ಟುಬಿಡುತ್ತವೆ.. ಸತ್ಯವೂ ಹಾಗೆಯೇ.. ಅದು ಬೆಳಕಿಗೆ ಬರಲು ಸಮಯ ಹಿಡಿಯಬಹುದು.. ಆದ್ರೆ ಅಳಿಸಿ ಹೋಗಲ್ಲ.. ಇಲ್ಲಿ ಆಗಿದ್ದು ಅದೆಯೇ.. ಕಲ್ಪನೆಯಲ್ಲಿ ಕಟ್ಟಿದ್ದ ಸುಂದರ ಅರಮನೆ.. ಕಣ್ಣು ಬಿಡುತ್ತಲೇ ಹುಡಿ ಮಣ್ಣಾಗಿ ಬಿಟ್ಟಿದೆ..

ಕನಸಿನಲ್ಲಿ ಕಂಡಿದ್ದ ಕೆಂಪು ಬಣ್ಣ..ಬಣ್ಣವಲ್ಲ ಬದಲಿಗೆ ರಕ್ತ.. ದೇವರೆಂದು ನಂಬಿದಾತ ದೇವರಲ್ಲ ದಾನವ.. ಎಲ್ಲರ ಮುಖದಲ್ಲಿದ್ದ ಮಂದಹಾಸ.. ಅದು ಮಂದಹಾಸವಲ್ಲ ಬದಲಿಗೆ ಗಹಗಹಿಸುವ ರಾಕ್ಷಸ ನಗು.. ನಕ್ಕು ನಕ್ಕು ಕಣ್ಣಲ್ಲಿ ನೀರು ಬಂದಿರಬೇಕು ಅಂತಾ ಭಾವಿಸಿದ್ದ..ಭಾವನೆಯೇ ಸುಳ್ಳು.. ಅದು ಕಣ್ಣಂಚಲ್ಲಿ ಬಂದ ನಗುವಿನ ನೀರಲ್ಲ.. ಬದಲಿಗೆ.. ಅತ್ತೂ ಅತ್ತೂ ಕಣ್ಣೀರೇ ಬತ್ತಿ ಅಳಿದುಳಿದ ಕಣ್ಣ ಹನಿ ಅಷ್ಟೇ ಅಂತ..

ಅಷ್ಟಕ್ಕೂ ಏನಿದು..? ಈ ಸ್ಟೋರಿ ಆದ್ರೂ ಏನು? ಭಾವನೆಗಳೊಂದಿಗೆ ಆಡುವ ಪೀಠಿಕೆಯೇ ಹೀಗಿದೆಯಲ್ಲ..? ಅನ್ನೋ ಕುತೂಹಲ ಇಂಥ ವೇಳೆ ಮೂಡೋದು ಸಹಜ.. ಎದೆ ಗಟ್ಟಿಮಾಡಿಕೊಂಡು ಕೇಳಿ.. ಇದು ಯಾವುದೋ ಫೀಲ್​ಗುಡ್ ಸ್ಟೋರಿಯಲ್ಲ.. ಬದಲಿಗೆ ಅಮೆರಿಕಾದಲ್ಲಿ ಕಳಚಿದ ಕಾಮ ಪಿಪಾಸುಗಳ..ಮುಖವಾಡದ ಅಸಲೀ ಕಹಾನಿ..!

blank

ಹಾಗಿದ್ರೆ ಈ ಸ್ಟೋರಿಯಾದ್ರೂ ಏನು ಅಂತ ನೋಡೋದಾದ್ರೆ.. ಮೊನ್ನೆ ತಾನೆ ಅಮೆರಿಕಾದ ಕೋರ್ಟ್​ ಹಾಲಿವುಡ್​ನ ಖ್ಯಾತ ನಟಿ ಆ್ಯಲಿಸನ್ ಮ್ಯಾಕ್​ ಅನ್ನೋರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.. ಅಷ್ಟೇ ಅಲ್ಲ.. ಕೀತ್​ ರೇನಿಯರ್ ಎಂಬ 60 ವರ್ಷದ ಮಹಾಪಾಪಿಯೊಬ್ಬನಿಗೆ ಬರೋಬ್ಬರಿ 120 ವರ್ಷಗಳ ಕಠಿಣ ಶಿಕ್ಷೆಯನ್ನ ಅಲ್ಲಿನ ಕೋರ್ಟ್​ ವಿಧಿಸಿದೆ.. ಅಷ್ಟಕ್ಕೂ ಅವರು ಮಾಡಿದ ಅಪರಾಧವಾದ್ರೂ ಏನು ಅಂದ್ರಾ? ಇಲ್ಲೆ ತೆರೆದುಕೊಳ್ಳುತ್ತೆ ಕರಾಳ ಮಾಂಸ ದಂಧೆಯ ಎದೆ ಝಲ್ ಎನಿಸುವಂಥ ಕಥಾಹಂದರ..

ಆಕೆ ಬಹುದೊಡ್ಡ ರಾಕ್ಷಸಿ.. ಸಮಾಜ ಘಾತುಕಿ.. ಆಕೆ ನನಗೆ ಸಾಕಷ್ಟು ಹಾನಿಯನ್ನ ಉಂಟು ಮಾಡಿದ್ದಾಳೆ.. ನನಗೆ ಅಷ್ಟೇ ಅಲ್ಲ ಆಕೆಯ ಸಂತ್ರಸ್ತರು ಮತ್ತು ಸಂಬಂಧಪಟ್ಟ ಸಾಕಷ್ಟು ಜನರಿಗೆ.. ಒಂದಿನ ಆಕೆ ತನ್ನ ಸುಳ್ಳನ್ನ ಒಪ್ಪಿಕೊಳ್ಳುತ್ತಾಳೆ ಅಂತ ನಾನು ಪ್ರಾರ್ಥಿಸುತ್ತಿದ್ದೆ..ಆ ದಿನ ಇಂದು ಬಂದಿದೆ.. -ಜೆಸ್ಸಿಕಾ ಜೊಆನ್, ಕರ್ಮಕಾಂಡ ಬಯಲಿಗೆ ಎಳೆದ ಯುವತಿ  

ಯೆಸ್ ಈ ಯುವತಿಯ ಈ ಮಾತುಗಳನ್ನು ಕೇಳಿದಾಗ ನಿಮಗೆ ಒಂದಂತೂ ಸ್ಪಷ್ಟವಾಗಿರುತ್ತೆ.. ಸುಂದರವಾಗಿ ಕಾಣುವ.. ಜನಪ್ರಿಯ ನಟಿಯೂ ಆಗಿರೋ ಆ್ಯಲಿಸನ್ ಮ್ಯಾಕ್ ಅನ್ನೋವಾಕೆ.. ಅದೆಷ್ಟು ಘನಘೋರ ಅಪರಾಧ ಕೃತ್ಯಗಳನ್ನು ಎಸಗಿರಬಹುದು ಅಂತಾ..
ಅಷ್ಟಕ್ಕೂ ಈ ಘಟನೆಯಾದ್ರೂ ಏನು ಅಂತಾ ನೋಡೋದಾದ್ರೆ..  38 ವರ್ಷದ ಆ್ಯಲಿಸನ್ ಮ್ಯಾಕ್, ಸ್ಮಾಲ್​​ವಿಲ್ ಎಂಬ ಸೀರೀಸ್​ ಮೂಲಕ ಫೇಮಸ್​ ಆಗಿದ್ದ ನಟಿ. ಈಕೆ ಹಲವು ಹಾಲಿವುಡ್ ಚಿತ್ರಗಳಲ್ಲಿ ನಟಿಸುವುದರ ಮೂಲಕವೂ ದೊಡ್ಡ ಹೆಸರು ಮಾಡಿದ್ಲು..

ಅದು 2006 ರ ಶನಿವಾರ..ಬೆಳಗಿನ ಜಾವ.. ಬ್ರಿಟಿಷ್ ಕೊಲಂಬಿಯಾದ ವಾನ್ಕೋವರ್​ನಲ್ಲಿನ ಐಶಾರಾಮಿ ಹೋಟೆಲ್​​ವೊಂದರಲ್ಲಿ Jness ಹೆಸರಿನ ಕಾರ್ಯಕ್ರಮವೊಂದು ಆಯೋಜಿತವಾಗಿತ್ತು.. ಉತ್ತಮವಾದ ಕ್ಲಾಸ್​​ರೂಂನಿಂತಿದ್ದ ಆ ಹಾಲ್​ನಲ್ಲಿ.. ನೆಕ್ಸೀಯಮ್ (Nxivm) ನ ಮಹಿಳಾ ಅಂಗ ಈ ಕಾರ್ಯಕ್ರಮ ಆಯೋಜಿಸಿತ್ತು.. ಅದ್ರಲ್ಲಿ ಗಂಡು ಹೆಚ್ಚಾಗಿ ಹೆಚ್ಚು ಸಂಬಂಧ ವಹಿಸಲು ಬಯಸುತ್ತಾನೆ. ಯಾಕಂದ್ರೆ ಮೂಲತಃ ಆತನ ಆಂತರ್ಯದಲ್ಲಿ ತನ್ನ ವಂಶವನ್ನು ಹರಡುವ ಉದ್ದೇಶ ಇರುತ್ತೆ ಅಂತಾ ಹೇಳಲಾಗುತ್ತೆ.. ಜೊತೆಗೆ, ಸೇಮ್ ಸೆಕ್ಸ್ ಮ್ಯಾರಿಯೇಜ್, ಓಪನ್ ಸೆಕ್ಸ್ ಹೀಗೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತೆ.. ಅಲ್ಲಿಗೆ ಅದಾಗ ತಾನೆ ಸ್ಮಾಲ್ ವಿಲ್ಲೆ ಅನ್ನೋ ಸೀರಿಯಲ್ ಮೂಲಕ ದೊಡ್ಡ ಹೆಸರು ಮಾಡಿದ್ದ 23 ವರ್ಷದ ಯುವತಿ ಆ್ಯಲಿಸನ್ ಮ್ಯಾಕ್ ಕೂಡ ಬಂದಿರ್ತಾಳೆ. ಆಕೆಯನ್ನು ನೆಕ್ಸೀಯಮ್ ಅದಾಗೆ ತಾನೆ ಸೇರಿದ್ದ ಸಹ ನಟ ಕ್ರಿಸ್ಟಿನ್ ಕ್ರೆಕ್ ಕರೆ ತಂದಿರ್ತಾನೆ.

ಅಲ್ಲಿಗೆ ಹಾಗೆ ಪ್ರೇಕ್ಷಕಳಾಗಿ ಬಂದಿದ್ದ ಆ್ಯಲಿಸನ್​ ಮ್ಯಾಕ್​ಗೆ ಆ ಕರಾಳ ಗ್ಯಾಂಗ್​ನ ಭಾಗ ತಾನಾಗ್ತೀನಿ ಅಂತ ಗೊತ್ತೇ ಇರಲಿಲ್ಲ ಎನಿಸುತ್ತೆ.. ಪ್ರಾರಂಭದಲ್ಲಿ ಮುಗ್ಧ ಯುವತಿಯಾಗಿ.. ಯೌವ್ವನದ ರಸೋನ್ನಕ್ತಳಾಗಿ ಬಂದಿದ್ದ ಆ್ಯಲಿಸನ್​.. ನೆಕ್ಸೀಯಮ್ ಗೆ ಮಾರು ಹೋಗ್ತಾಳೆ.. ದಿನಗಳೆದಂತೆ ಯುವತಿಯರನ್ನ ಕಾಮ ಕಾರ್ಖಾನೆಯ ಐಹಿಕ ಭೋಗಿಕ ವಸ್ತುವನ್ನಾಗಿ ಬಳಸುವಂಥ ಹೀನ ಮಟ್ಟಕ್ಕೂ ಇಳಿದು ಬಿಡ್ತಾಳೆ..
ಅಷ್ಟಕ್ಕೂ ನೆಕ್ಸೀಯಮ್ ಅಂದ್ರೇನು? ಇದನ್ನು ಸ್ಥಾಪಿಸಿದ್ದು ಯಾರು? ಮತ್ತು ಯಾವಾಗ ಇದು ಸ್ಥಾಪನೆಯಾಯ್ತು? ಅಂತಾ ನೋಡೋದಾದ್ರೆ..

blank

1998 ರಲ್ಲಿ ಅಮೆರಿಕಾದ ನ್ಯೂಯಾರ್ಕ್​​ನ ಕ್ಲಿಫ್ಟನ್ ಪಾರ್ಕ್ ಅನ್ನೋವಲ್ಲಿ ನೆಕ್ಸೀಯಮ್ ಅನ್ನ ಕೀತ್​ ರೇನಿಯರ್ ಎನ್ನೋವಾತ ಸ್ಥಾಪನೆ ಮಾಡಿದ್ದ.. ಪ್ರಾರಂಭದಲ್ಲಿ ಈ ಸಂಸ್ಥೆಯನ್ನ ರೇನಿಯಲ್ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಮತ್ತು ಪರ್ಸನಲ್ ಡೆವಲಪ್​ಮೆಂಟ್ ಸಂಸ್ಥೆ ಅಂತಾ ಕರೆದುಕೊಂಡಿದ್ದ.. ಇದೇ ಸಂಸ್ಥೆಯಲ್ಲಿ ಈಗ ಜೈಲು ಪಾಲಾಗಿರೋ ನಟಿ ಆ್ಯಲಿಸನ್ ಮ್ಯಾಕ್ ರಿಕ್ರ್ಯೂಟರ್ ಮತ್ತು ನಾಯಕಿಯಾಗಿ ಸೇರಿಕೊಂಡಿದ್ದಳು..

Nxivm ಕಲ್ಟ್​​/ಪಂಥದ ಸಂಸ್ಥಾಪಕ 60 ವರ್ಷದ ಕೀತ್​ ರೇನಿಯರ್ ಅದೆಷ್ಟರ ಮಟ್ಟಿಗೆ ಖ್ಯಾತಿ ಪಡೆದಿದ್ದನೆಂದರೆ, ಈ ಹಿಂದೆ ದಲೈ ಲಾಮಾ ಕೂಡ ಈತನ ಸಮಾಜಸೇವೆ ಕಾರ್ಯಗಳನ್ನ ಶ್ಲಾಘಿಸಿದ್ದರು. ಆತನಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ರು.. 1980ರಲ್ಲಿಯೇ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಆರಂಭಿಸಿದ್ದ ಈತ, 1998ರಲ್ಲಿ ನೆಕ್ಸೀಯಮ್ ಪಂಥ ಆರಂಭಿಸಿದ್ದ ಆತ..ಬಳಿಕ 23 ವರ್ಷಗಳ ಕಾಲ ಅಮೆರಿಕಾದ ಕಾನೂನಿನ ಮೂಗಿನ ಕೆಳಗೇ ಕರಾಳ ದಂಧೆ ನಡೆಸಿದ್ದ.. ಸಾಕಷ್ಟು ಸೆಲೆಬ್ರಿಟಿಗಳು, ಮೆಕ್ಸಿಕೋದ ರಾಜಕಾರಣಿಗಳ ಮಕ್ಕಳು, ನಟ-ನಟಿಯರು ಈತನ ಗ್ರಾಹಕರಾಗಿದ್ರು.. ನೆಕ್ಸೀಯಮ್​ನಲ್ಲಿಯೇ DOS ಅಂತಾ ಮತ್ತೊಂದು ಸೂಪರ್​ ಸೀಕ್ರೆಟ್ ಗುಂಪು ಕಟ್ಟಿದ್ದ ಈತ.. ಈ ಮೂಲಕವೇ ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದ..

2019ರಲ್ಲಿ ಕೀತ್ ವಿರುದ್ಧ ಮಹಿಳೆಯರ ಕಳ್ಳಸಾಗಣೆ, ಚೈಲ್ಡ್​ ಪೊರ್ನೋಗ್ರಫಿ ಮತ್ತು ದರೋಡೆ ಆರೋಪ ಸಾಬೀತಾಗಿತ್ತು.  ಕೀತ್, ಸ್ವ-ಸಹಾಯ ಗುಂಪಿನ ಹೆಸರಲ್ಲಿ ಸದಸ್ಯರನ್ನು ನೇಮಕ ಮಾಡಿಕೊಂಡು ಬಳಿಕ ಸೆಕ್ಸ್​​ ಪಂಥಕ್ಕೆ ದೂಡುತ್ತಿದ್ದ.. ಈತನ ವಿರುದ್ಧದ ಹಲವು ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಈತನಿಗೆ ಅಮೆರಿಕಾದ ಕೋರ್ಟ್ ಅಕ್ಟೋಬರ್ 27, 2020ರಂದು​ ಬರೋಬ್ಬರಿ 120 ವರ್ಷಗಳ ಶಿಕ್ಷೆಯನ್ನೂ ವಿಧಿಸಿತು.. ಈ ನಡುವೆ ಈ ಪಂಥಕ್ಕೆ ಯುವತಿಯರನ್ನು ಸೆಳೆದು.. ಅವರನ್ನು ಮಾಂಸ ದಂಧೆಗೆ ಹಚ್ಚುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆ್ಯಲಿಸನ್ ಮ್ಯಾಕ್ ಕೂಡ ಜೈಲು ಸೇರಿದ್ದಾಳೆ..

ಇನ್ನು ವಿಚಾರಣೆಯ ಸಮಯದಲ್ಲಿ 15 ಸಂತ್ರಸ್ತೆಯರು ತಾವು ಅನುಭವಿಸಿದ ಭೀಕರ ಹಿಂಸೆಯನ್ನ ನ್ಯಾಯಾಧೀಶರ ಮುಂದೆ ವಿವರಿಸಿದ್ದರು. ಆದ್ರೆ ಈತ ಮಾತ್ರ ಮಹಿಳೆಯರು ಒಮ್ಮತದಿಂದಲೇ ನನ್ನೊಂದಿಗೆ ಹಾಗೂ ಇತರರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು ಎಂದು ವಾದಿಸಿದ್ದ.

ಈ ಪಂಥಕ್ಕೆ ಹೇಗೆ ಸೇರುತ್ತಿದ್ರು ಜನ?
ಇಲ್ಲಿ ಅಸಲಿಗೆ ನಡೆಯುತ್ತಿದ್ದ ದಂಧೆ ಬಯಲಾಗಿದ್ದು ಹೇಗೆ?

ಜೀವನದಲ್ಲಿ ಯಶಸ್ಸು ಕಾಣಲು, ಕೋಪ-ಆತಂಕಗಳನ್ನ ದೂರ ಮಾಡಲು ಕೋರ್ಸ್​ಗೆ ಸೇರುವಂತೆ ಮಾರ್ಕೆಟಿಂಗ್ ಮಾಡಲಾಗುತ್ತಿತ್ತು. ಈ ಕೋರ್ಸ್​ನ ಬೆಲೆ ಕೂಡ ದುಬಾರಿ. ಕೇವಲ 5 ದಿನಗಳ ಕೋರ್ಸ್​ಗೆ ಬರೋಬ್ಬರಿ 5 ಸಾವಿರ ಡಾಲರ್ಸ್ ಅಂದ್ರೆ ಸುಮಾರು 3.7 ಲಕ್ಷ ರೂಪಾಯಿ ಕೊಟ್ಟು ಸೇರಬೇಕಿತ್ತು. ಪ್ರಾರಂಭದಲ್ಲಿ ಎಲ್ಲವೂ ಸರಿಯೇ ಎನಿಸುತ್ತಿತ್ತು.. ಆದ್ರೆ, ಈ ಕೋರ್ಸ್​ ಸೇರಿದ ಕೆಲ ದಿನಗಳ ಬಳಿಕ ಇದನ್ನು ಸೇರಿದ ಸುಂದರ ಯುವತಿಯರನ್ನ ಬೇರೆ ಬೇರೆ ರೀತಿಯಲ್ಲಿ DOS ಗೆ ಸೆಳೆಯಲಾಗುತ್ತಿತ್ತು.. ಅಲ್ಲಿ ಆ ಯುವತಿಯರಿಗೆ ಅಕ್ಷರಶಃ ನರಕದ ದರ್ಶನವಾಗುತ್ತಿತ್ತು..

ಸೆಕ್ಸ್​​ ಅನ್ನೋದು ಪುರುಷರಿರಲಿ, ಮಹಿಳೆಯರಿರಲಿ ಅತ್ಯಂತ ಬೇಗ ಅಟ್ರ್ಯಾಕ್ಟ್ ಆಗುವಂಥ ಪದ.. ಪ್ರಾರಂಭದಲ್ಲಿ ಸ್ವರ್ಗವೇ ಭುವಿಗಿಳಿದ ಅನುಭವ.. ಇದಕ್ಕೇ ತನ್ನ ಅಸ್ತ್ರವನ್ನಾಗಿ ಕೀತ್​ ರೇನಿಯರ್ ಅಂಡ್ ಗ್ಯಾಂಗ್​ ಬಳಸುತ್ತಿತ್ತಂತೆ.. ತನ್ನನ್ನು ತಾನು ವ್ಯಾನ್​ಗಾರ್ಡ್​ ಎಂದು ಕರೆದುಕೊಳ್ಳುತ್ತಿದ್ದ ಈ ಸೈಕೋಪಾತ್, ವಿಚಿತ್ರ ರೂಲ್ಸ್​ಗಳನ್ನ ನೆಕ್ಸೀಯಮ್​ನಲ್ಲಿ ರೂಪಿಸಿದ್ದ..

ತುಟಿಗೆ ಮುತ್ತಿಕ್ಕುವುದು ಕಂಪಲ್ಸರಿ

ನೆಕ್ಸೀಯಮ್​ನಲ್ಲಿ ಭಾಗಿಯಾಗುತ್ತಿದ್ದ ಯುವತಿಯರು ಕಂಪಲ್ಸರಿಯಾಗಿ ಕೀತ್​ ರೇನಿಯರ್ ತುಟಿಗೆ ಮುತ್ತಿಕ್ಕಲೇ ಬೇಕಿತ್ತು.. ಜೊತೆಗೆ, ಹೀಗೆ ಟ್ರೇನಿಂಗ್​ಗೆ ಬಂದವರಲ್ಲಿ ಅತ್ಯಂತ ಮಾನಸಿಕ ತೊಳಲಾಟದಲ್ಲಿದ್ದವರನ್ನ ಗುರ್ತಿಸುತ್ತಿದ್ದ ಈ ಗ್ಯಾಂಗ್​, ಅಂಥವರನ್ನ ಮತ್ತೊಂದು ಸೀಕ್ರೆಟಿವ್​ ಗ್ರೂಪ್​ಗೆ ಸೇರಿಸುತ್ತಿತ್ತು..

ದೇಹದ ಮೇಲೆ ಹೆಸರು ಕೆತ್ತಿಸಲಾಗ್ತಿತ್ತು

ಹೀಗೆ ಆ ಸೀಕ್ರೆಟ್​ ಗ್ರೂಪ್​ಗೆ ಯಾರನ್ನು ಸೇರಿಸಲಾಗುತ್ತಿತ್ತೋ ಅಂಥ ಯುವತಿಯರ ದೇಹದ ಮೇಲೆ, ಅವರನ್ನು ಅಲ್ಲಿಗೆ ತಂದವರ ಇನಿಷಿಯಲ್​ ಅನ್ನು ಕೆತ್ತಿಸಲಾಗುತ್ತಿತ್ತು.. ನೆನಪಿರಲಿ ಹಚ್ಚೆ ಹಾಕಿಸುತ್ತಿರಲಿಲ್ಲ.. ಕೆತ್ತಿಸಲಾಗ್ತಿತ್ತು..!

blank

ಉಂಡೂ ಹೋದ್ರು..ಕೊಂಡೂ ಹೋದ್ರು

ಈ ಸೀಕ್ರೆಟ್​ ಗುಂಪಿಗೆ ಬಂದ ಯುವತಿಯರ ಯೌನದ ಸುಖವುಣ್ಣುತ್ತಿದ್ದ ಮತ್ತು ಉಣಿಸುತ್ತಿದ್ದ ಈ ಖತರ್ನಾಕ್​ ಗ್ಯಾಂಗ್ ಸದಸ್ಯರು.. ಅವರಿಂದ ಹಣವನ್ನೂ ಕಿತ್ತುಕೊಳ್ತಿದ್ರಂತೆ.. ಯಾರು ತಮ್ಮ ಈ ಕಾರ್ಯ ಒಪ್ಪುತ್ತಾರೋ ಅಂಥವರನ್ನ ಬಳಸುತ್ತಾ..ಅವರನ್ನು ಸೆಕ್ಸ್​ ಸ್ಲೇವ್​ ಅಂದ್ರೆ ಕಾಪ ಕೂಪದ ಜೀತದಾಳುಗಳಾಗಿ ಬಳಸಲಾಗ್ತಿತ್ತು.. ಅಷ್ಟೇ ಅಲ್ಲ ಒಂಚೂರು ವಿರೋಧ ತೋರಿದ್ರೂ ಅವರಿಗೆ ಬಗೆ ಬಗೆಯ ಹಿಂಸೆ ಕೂಡ ನೀಡ್ತಿದ್ರಂತೆ.. ಅಂಥ ಯುವತಿರಯನ್ನ ಉಪವಾಸ ಕೆಡುವುದು.. ಹಲ್ಲೆ ನಡೆಸುವುದು.. ದೌರ್ಜನ್ಯ ಮಾಡುವುದು ಇದೆಲ್ಲ ನಡೆಯುತ್ತಿತ್ತಂತೆ..

ತನ್ನನ್ನು ತಾನು ಸೆವಕ ಮತ್ತು ಜೀನಿಯಸ್​ ಎಂದು ಕರೆದುಕೊಳ್ಳುತ್ತಿದ್ದ ಕೀತ್​ ರೇನಿಯರ್, ನಿಜ ಅರ್ಥದಲ್ಲಿ ಕಲ್ಟ್​​ನಂಥ ಸಂಸ್ಥೆ ನಡೆಸುತ್ತಿದ್ದ ದೊಡ್ಡ ಮೋಸಗಾರ, ಮೋಡಿಗಾರ ಮತ್ತು ಕ್ರೈಂ ಬಾಸ್ ಅನ್ನೋದು ತನಿಖೆ ಬಳಿಕ ತಿಳಿದು ಬಂದಿದೆ -ರೀಚರ್ಡ್ ಪಿ ಡಾನ್​ಹಾಗ್, ಯುಎಸ್​ ಅಟಾರ್ನಿ  

ಹೀಗೆ ಪಡಪಾರದ ಕಷ್ಟ ಪಡುತ್ತ.. ಜೀವಂತ ನರಕ ಕಾಣುತ್ತಿದ್ದ ಯುವತಿಯರಲ್ಲಿ ಕೆಲವರು ತಪ್ಪಿಸಿಕೊಂಡು ಹೊರ ಬಂದಿದ್ರು.. ಅವರೇ ಈ ಕೃತ್ಯ ಬಯಲಿಗೆಳದಾಗ ಅಮೆರಿಕಾವೇ ಬೆಚ್ಚಿ ಬೀಳುವಂತಾಗಿತ್ತು..ಕೊನೆಗೆ ತನಿಖೆ ನಡೆದು ಹಲವರಿಗೆ ಶಿಕ್ಷೆ ಕೂಡ ಆಗಿರೋದು ಸದ್ಯ ತಿಳಿದು ಬರ್ತಿದೆ..

ಒಟ್ಟಿನಲ್ಲಿ ಎಲ್ಲಿಯವರೆಗೂ ಮೋಸ ಹೋಗೋ ಜನ ಇರ್ತಾರೋ.. ಅಲ್ಲಿ ತನಕ ಮೋಸ ಮಾಡೋ ಮೋಸಗಾರರು ಇದ್ದೇ ಇರ್ತಾರೆ.. ಅವರಲ್ಲಿ ಕೆಲವು ಸಮಾಜ ಸೇವಕರ ಮುಖವಾಡ ಹೊತ್ತು ಮಾಡಬಾರದ್ದನ್ನೆಲ್ಲ ಮಾಡ್ತಿರ್ತಾರೆ ಅನ್ನೋದು ಇಂಥ ಪ್ರಕರಣಗಳಿಂದ ಮತ್ತೆ ಮತ್ತೆ ಬಯಲಿಗೆ ಬರ್ತಾನೇ ಇರುತ್ತೆ.. ಆದ್ರೂ ಮೋಸ ಹೋಗೋರು ಹೋಗ್ತಾನೆ ಇರ್ತಾರೆ..

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಅಮೆರಿಕಾವನ್ನೇ ಬೆಚ್ಚಿ ಬೀಳಿಸಿದ ವಿಕ್ಷಿಪ್ತ ಸೆಕ್ಸ್ ಕಲ್ಟ್; ಕಾಮುಕ ಸೆಲೆಬ್ರಿಟಿಗಳ ಅಸಲೀ ಕಹಾನಿ ಏನ್​ ಗೊತ್ತಾ? appeared first on News First Kannada.

Source: newsfirstlive.com

Source link