ಶಿವಣ್ಣನ ಈ ಸಿನಿಮಾ ಟೈಟಲ್ ಬದಲಾಯಿಸಲು ಚಿತ್ರತಂಡ ಹೊರಟಿರೋದ್ಯಾಕೆ?

ಶಿವಣ್ಣನ ಈ ಸಿನಿಮಾ ಟೈಟಲ್ ಬದಲಾಯಿಸಲು ಚಿತ್ರತಂಡ ಹೊರಟಿರೋದ್ಯಾಕೆ?

ಎರಡು ತಿಂಗಳಿಂದ ಮನೆಯಲ್ಲಿ ಲಾಕ್​ ಆಗಿದ್ದ ಸ್ಟಾರ್​ ನಟರು ಮೈ ಕೊಡವಿ ಎದ್ದು  ಕ್ಯಾಮರಾ ಮುಂದೆ ನಿಂತಿದ್ದಾರೆ. ಇದೇ ಗ್ಯಾಪ್​ನಲ್ಲಿ ಟಗರು ಶಿವನ ಹುಡುಗರ ಅಡ್ಡದಲ್ಲಿ ಟೈಗರ್ ಶಿವ ಫೋಟೋ ಸಖತ್ ಸೌಂಡ್​ ಮಾಡ್ತಿದ್ದೆ. ಅಷ್ಟಕ್ಕೂ ಹುಲಿ ಲುಕ್​ನಲ್ಲಿರೋ ಶಿವಣ್ಣನ ಆ ಫೋಟೋ ಈ ಚಿತ್ರದ್ದು.

ಯಾವುದೇ ಪಾತ್ರವಾದ್ರು ಲೀಲಾಜಾಲವಾಗಿ ಮಾಡೋ ಶಿವಣ್ಣ, ಸದ್ಯ ಹುಲಿಯ ನೋಟದಲ್ಲಿ ಅಭಿಮಾನಿಗಳ ನಿದ್ದೆ ಕೆಡಿಸಿದ್ದಾರೆ. ಇದಕ್ಕೆ ಕಾರಣ ಕಣ್​ ಅಲ್ಲೆ ಬೆಂಕಿ ಉಗುಳೋ ಶಿವಣ್ಣ ನೋಟದ ಫೋಟೋ. ಸದ್ಯ ಅಂತರ್​​ಜಾಲದಲ್ಲಿ ಟೈಗರ್ ಶಿವ ಈ ಪೋಟೋ ಈಜಾಡ್ತಿದೆ.

blank

ಶಿವಣ್ಣನ ಈ ಪೋಟೋ ವಿಜಯ್ ಮಿಲ್ಟನ್​ ನಿರ್ದೇಶನದ ಚಿತ್ರದ್ದು. ಈ ಚಿತ್ರಕ್ಕೆ ಹಿಂದೆ ಶಿವಪ್ಪ ಅಂತ ಟೈಟಲ್​​ ಫಿಕ್ಸ್​ ಆಗಿತ್ತು. ಆದರೆ, ಚಿತ್ರದ ಕತೆಗೆ ಶಿವಪ್ಪ ಟೈಟಲ್​ ಹೊಂದಲ್ಲ ಅನ್ನೋ ಕಾರಣಕ್ಕೆ ಹೊಸ ಟೈಟಲ್​ ಇಡಲು ಚಿತ್ರತಂಡ ನಿರ್ಧರಿಸಿದೆ. ಇದೇ ತಿಂಗಳ 12ನೇ ತಾರೀಖು ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​ ಹುಟ್ಟಿದ ಹಬ್ಬದಂದು ಶಿವಣ್ಣನ 123ನೇ ಚಿತ್ರದ  ಹೊಸ ಟೈಟಲ್​ ಅನ್ನು ರಿವೀಲ್​ ಮಾಡಲಿದ್ದಾರೆ.

blank

ಲಾಕ್‌ಡೌನ್‌ ಕಾರಣದಿಂದ ಶೂಟಿಂಗ್​ ನಿಲ್ಲಿಸಿದ್ದ ವಿಜಯ್ ಮಿಲ್ಟನ್ ಅಂಡ್ ಟೀ ಮತ್ತೆ ಜುಲೈ 5ರಿಂದ ಶೂಟಿಂಗ್ ಅಖಾಡಕ್ಕಿಳಿದಿದ್ದಾರೆ.  ಬಾಕಿ ಇರುವ ಕೆಲವು ಆಕ್ಷನ್ ದೃಶ್ಯಗಳು ಹಾಗೂ 20 ನಿಮಿಷದ ಕ್ಲೈಮ್ಯಾಕ್ಸ್‌ ದೃಶ್ಯಗಳನ್ನು ಚಿತ್ರೀಕರಣ ಮಾಡಲು ವಿಜಯ್ ಪ್ಲಾನ್​ ಮಾಡಿದ್ದು, ಕೊನೆಯ ಹಂತದ ಶೆಡ್ಯೂಲ್​​ನಲ್ಲಿ ಟಗರು ಶಿವ ಮತ್ತು ಡಾಲಿ ಧನಂಜಯ್ ಭಾಗಿಯಾಗಿದ್ದಾರೆ.

The post ಶಿವಣ್ಣನ ಈ ಸಿನಿಮಾ ಟೈಟಲ್ ಬದಲಾಯಿಸಲು ಚಿತ್ರತಂಡ ಹೊರಟಿರೋದ್ಯಾಕೆ? appeared first on News First Kannada.

Source: newsfirstlive.com

Source link