ಸೂರ್ಯನ ಒಡಲಿನಲ್ಲಿ ಹಿಂದೆಂದು ಕಂಡರಿಯದ ಸ್ಫೋಟ! ಮುಂದೇನಾಗಬಹುದು?

ಸೂರ್ಯನ ಒಡಲಿನಲ್ಲಿ ಹಿಂದೆಂದು ಕಂಡರಿಯದ ಸ್ಫೋಟ! ಮುಂದೇನಾಗಬಹುದು?

ಸ್ವಲ್ಪ ಬಿಸಿಲು ಹೆಚ್ಚಾದರೆ ಸಾಕು ಅಯ್ಯೋ ಸಾಕಪ್ಪಾ ಸಾಕು ಅನ್ನುವಷ್ಟು ಸುಸ್ತಾಗಿ ಬಿಡುತ್ತೆ. ಇನ್ನು 40 ಡಿಗ್ರಿ ಹತ್ತಿರ ಬಂದು ಬಿಟ್ರೆ ಬಿಸಿಲ ಝಳ ತಡೆಯೋಕೇ ಆಗಲ್ಲ. ಇನ್ನು ಸೂರ್ಯನ ಹತ್ತಿರ ಸುಳಿಯೋದನ್ನು ಊಹಿಸೋಕೂ ಆಗಲ್ಲ. ಅವನು ಉರಿಯುವ ಕೆಂಡ. ಈ ಉರಿಯುವ ಚೆಂಡಿನಲ್ಲಿ ಭಯಂಕರ ಸ್ಫೋಟವೊಂದು ಸಂಭವಿಸಿದೆ.

ದಿನಕ್ಕೊಂದು ಅಚ್ಚರಿ ವಿಸ್ಮಯಗಳು ವಿಜ್ಞಾನಿಗಳ ಕಣ್ಣಿಗೆ ಸಿಕ್ತಾ ಇರುತ್ತೆ. ಕೆಲವೊಮ್ಮೆ ಆ ವಿಸ್ಮಯ ಅಚ್ಚರಿಯಾಗಿ ಕಂಡರೆ, ಇನ್ನು ಕೆಲುವೊಮ್ಮೆ ಭಯಾನಕವಾಗಿ ಏನಾದರೂ ಅನಾಹುತವಾಗಿ ಸಂಭವಿಸಿ ಬಿಡಬಹುದು ಎನ್ನುವ ರೀತಿ ಗಾಬರಿ ಹುಟ್ಟಿಸಿ ಬಿಡುತ್ತೆ. ಅದೇ ರೀತಿ ಈಗ ಸೂರ್ಯನ ಒಡಲಾಳದಲ್ಲಿ ಭಯಂಕರ ಸ್ಫೋಟಗಳು ಆಗಿದ್ದಲ್ಲದೆ, ಭೀಕರ ಜ್ವಾಲೆಗಳು ಏಳುವುದು ಹೆಚ್ಚಾಗಿರೋದು ಆತಂಕ ತರಿಸಿದೆ.

ಸ್ಪೇಸ್ ವೆದರ್ ಪ್ರಿಡಿಕ್ಷನ್ ಸೆಂಟರ್ ನಿಂದ ಅತಿ ಎತ್ತರದ ಹಾಗೂ ಅತಿ ಪ್ರಖರವಾದ ಸೌರ ಜ್ವಾಲೆಗಳು ಕಾಣಿಸಿಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ಹೊರ ಹಾಕಿದ್ದಾರೆ. ಸೂರ್ಯನಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಹಲವು ದಿನಗಳಿಂದ ಗಮನಿಸುತ್ತಿರುವ ವಿಜ್ಞಾನಿಗಳ ಕಣ್ಣಿಗೆ ಜುಲೈ 3 ರಂದು ಅತಿ ಪ್ರಖರವಾದ ಹಾಗೂ ಬೆಳೆಯುತ್ತಿರುವ ಸೌರ ಜ್ವಾಲೆಯೊಂದು ಕಾಣಿಸಿಕೊಂಡಿದೆ. ಇದರ ಪ್ರಖರತೆಯನ್ನು ಎಕ್ಸ್ 1.5 ಸಿಡಿತ ಎಂದು ಘೋಷಿಸಿರುವ ತಜ್ಞರು, ಈ ಸಿಡಿತದಿಂದ ಸೌರ ಪಥದ ಮಾರ್ಗವೇ ಬದಲಾಗ ಬಹುದು, ಹಾಗೂ ಇದು ಹೊಸ ಸೌರ ಪಥದ ಆರಂಭದ ಮುನ್ಸೂಚನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದು ಅದ್ಯಾವ ಬದಲಾವಣೆಯ ಮುನ್ಸೂಚನೆಯೋ ಈಗಲೇ ಹೇಳೋದು ಕಷ್ಟ.

ರೇಡಿಯೋ ಆಕ್ಟೀವ್ ಶಕ್ತಿ ಕಣಗಳಲ್ಲಿ, ಸೂರ್ಯನಿಂದ ಭೂಮಿಗೆ ತಲುಪಬಹುದಾದ ಕ್ಷಕಿರಣ ಎಂದರೆ ಅದು ವಿಸಿಬಲ್ ಲೈಟ್. ಇನ್ನುಳಿದ ಡೆಂಜರ್ಸ್ ಕ್ಷಕಿರಣಗಳಾದ ಎಕ್ಸ್ ರೇ, ಅಲ್ಟ್ರಾ ವೈಲಟ್ ರೇಡಿಯೇಷನ್ಗಳೆಲ್ಲ, ಭೂಮಿಯ ಮೇಲ್ಪದರದವರೆಗೂ ಚಲಿಸುವಷ್ಟು ಪ್ರೀಕ್ವೆನ್ಸಿ ಇರುವುದಿಲ್ಲ. ಅದಕ್ಕಾಗಿ ಇದುವರೆಗೂ ಭೂಮಿ ಮೇಲೆ ಈ ರೇಸ್ ಗಳಿಂದ ಆಪಾಯ ಸಂಭವಿಸಿಲ್ಲ. ಆದರೆ ಎಂದಾದರು ಒಮ್ಮೆ ಈ ಡೆಂಜರ್ಸ್ ರೇಡಿಯೆಷನ್ಗಳು ಸೂರ್ಯನ ಬೆಳಕಿನ ರೀತಿ ಭೂಮಿಯ ಮೇಲ್ಮೈಗೆ ಹರಡಿ ಬಿಟ್ಟರೆ ಈ ಜೀವರಾಶಿಗಳ ಕಥೆಯೇನು.?

ಜಗತ್ತಿಗೆ ತನ್ನ ಕಿರಣಗಳಿಂದ ಹೊಸ ಸ್ಪೂರ್ತಿ ತುಂಬುವ ಸೂರ್ಯನಿಂದ ಒಂದು ದಿನ ಹೀಗೂ ತೊಂದರೆಯಾಗಬಹದು ಎಂದು ಎಷ್ಟೋ ಜನ ಊಹಿಸಿರುವುದಿಲ್ಲ. ಆದರೆ ಸೂರ್ಯನಲ್ಲಿ ಆಗುತ್ತಿರುವ ಪ್ರಾಕೃತಿಕ ಬದಲಾವಣೆಗೆ ಯಾರು ಹೊಣೆ ? ಇದನ್ನು ತಪ್ಪಿಸಲು ಸಹಜ ಮಾನವನಿಂದ ಸಾಧ್ಯನಾ ಎನ್ನುವ ಪ್ರಶ್ನೆಗೆ ಉತ್ತರ ಯಾರಲ್ಲೂ ಇಲ್ಲ.

The post ಸೂರ್ಯನ ಒಡಲಿನಲ್ಲಿ ಹಿಂದೆಂದು ಕಂಡರಿಯದ ಸ್ಫೋಟ! ಮುಂದೇನಾಗಬಹುದು? appeared first on News First Kannada.

Source: newsfirstlive.com

Source link