ನೂತನ ಕುಶಾಲನಗರ ತಾಲೂಕು ಉದ್ಘಾಟನೆ.. ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

ನೂತನ ಕುಶಾಲನಗರ ತಾಲೂಕು ಉದ್ಘಾಟನೆ.. ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

ಕೊಡಗು: ಜಿಲ್ಲೆಗೆ ಅಧಿಕೃತವಾಗಿ ಮತ್ತೊಂದು ತಾಲ್ಲೂಕು ಸೇರ್ಪಡೆಯಾಗಿದೆ. ಕೊಡಗಿನ ನೂತನ ತಾಲೂಕಾಗಿ ಕುಶಾಲನಗರ ತಾಲೂಕು ಉದ್ಘಾಟನೆಗೊಂಡಿದ್ದು, ಕಂದಾಯ ಸಚಿವ ಆರ್ .ಆಶೋಕ್ ಲೋಕಾರ್ಪಣೆ ಮಾಡಿದರು.

blankಕುಶಾಲನಗರ ತಾಲ್ಲೂಕು ಸೇರ್ಪಡೆಯಿಂದ ಕೊಡಗು ಜಿಲ್ಲೆಯಲ್ಲಿ ಒಟ್ಟು ಐದು ತಾಲೂಕುಗಳಾಗಿವೆ. ಒಂದೆಡೆ ಹಲವು ವರ್ಷಗಳಿಂದ ಬೇಡಿಕೆಯಿದ್ದ ಕುಶಾಲನಗರ ತಾಲೂಕು ಉದ್ಘಾಟನೆಯಿಂದ ಅಲ್ಲಿನ ನಿವಾಸಿಗಳು ಸಂತಸಗೊಂಡಿದ್ದರೆ, ಮತ್ತೊಂದೆಡೆ ಕುಶಾಲನಗರ ತಾಲೂಕನ್ನು ನೂತನವಾಗಿ ಉದ್ಘಾಟನೆ ಮಾಡುವ ಸಂದರ್ಭ ಗಲಭೆ ಉಂಟಾಗಿದೆ. ಕಾರ್ಯಕ್ರಮದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆದಿದ್ದು ಪೊಲೀಸರ ಸಮ್ಮುಖದಲ್ಲೇ ಮಾತಿನ ಚಕಮಕಿ ನಡೆದಿದೆ.

blankಕುಶಾಲನಗರ ತಾಲೂಕು ರಚನೆಗೆ ಹೋರಾಟ ಮಾಡಿದ ಪ್ರಮುಖ ಮುಖಂಡರನ್ನ ಆಹ್ವಾನಿಸಿಲ್ಲವೆಂದು ಹೋರಾಟ ಸಮಿತಿಯ ಸದಸ್ಯರು ಅಸಮಧಾನಗೊಂಡು ಗದ್ದಲ ಸೃಷ್ಟಿಸಿದರು. ಸ್ಥಳೀಯ ಶಾಸಕರ ವಿರುದ್ದ ಪರ-ವಿರೋಧ ಘೋಷಣೆ ಕೂಗಿದ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ದ ಧಿಕ್ಕಾರ ಘೊಷಣೆಗಳನ್ನ ಕೂಗಿದ್ರು.

ಸ್ಥಳದಲ್ಲಿಯೇ ಇದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಣಗೊಳಿಸಿದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಸಮಾರಂಭದಿಂದ ಹೊರನಡೆದರು.

The post ನೂತನ ಕುಶಾಲನಗರ ತಾಲೂಕು ಉದ್ಘಾಟನೆ.. ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ appeared first on News First Kannada.

Source: newsfirstlive.com

Source link