ಕೋವಿಡ್​ ಕ್ಯೂರ್​​ ಆದವರಿಗೆ ಕಾಣಿಸಿಕೊಳ್ಳುತ್ತಿದೆ ಮತ್ತೊಂದು ಸಮಸ್ಯೆ -ಏನಿದು ಬೋನ್​​ ಡೆತ್?​​

ಕೋವಿಡ್​ ಕ್ಯೂರ್​​ ಆದವರಿಗೆ ಕಾಣಿಸಿಕೊಳ್ಳುತ್ತಿದೆ ಮತ್ತೊಂದು ಸಮಸ್ಯೆ -ಏನಿದು ಬೋನ್​​ ಡೆತ್?​​

ನವದೆಹಲಿ: ಮಾರಕ ಕೊರೊನಾ ವೈರಸ್​ನಿಂದ ಗುಣಮುಖರಾದವರಿಗೆ ಇತ್ತೀಚೆಗೆ ವಿಚಿತ್ರ ರೋಗಗಳು ಕಾಣಿಸಿಕೊಳ್ಳುತ್ತಿವೆ. ಬ್ಲಾಕ್‌ ಫಂಗಸ್‌, ಗುದನಾಳ ರಕ್ತಸ್ರಾವದ ಬೆನ್ನಲ್ಲೇ ಈಗ ಕೋವಿಡ್​​ನಿಂದ ಸಂಪೂರ್ಣ ಕ್ಯೂರ್ ಆದವರಿಗೆ ಮತ್ತೊಂದು ಸಮಸ್ಯೆ ಎದುರಾಗುತ್ತಿದೆ. ಗುಣಮುಖರಲ್ಲಿ ಹಲವರಿಗೆ ಬೋನ್​​ ಡೆತ್​ ಅಂದರೆ ಮೂಳೆಯ ಅಂಗಾಂಶಗಳು ಸತ್ತುಹೋಗುವ ಭೀತಿ ಸೃಷ್ಟಿಯಾಗಿದೆ. ಈಗಾಗಲೇ ಇಂತಹ ಮೂರು ವಿಚಿತ್ರ ಕೇಸ್​​​ಗಳು ಮುಂಬೈನಲ್ಲಿ ಪತ್ತೆವಾಗಿವೆ ಎನ್ನಲಾಗಿದೆ.

ಹೌದು. ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಕೊರೊನಾದಿಂದ ಗುಣಮುಖರಾದ 40 ವರ್ಷ ಮೇಲ್ಪಟ್ಟ ಮೂವರಿಗೆ ಬೋನ್​​ ಡೆತ್​​ ಸಮಸ್ಯೆ ಕಾಣಿಸಿಕೊಂಡಿದೆ. ಕೋವಿಡ್​ನಿಂದ ಕ್ಯೂರ್​​ ಆದ ಎರಡು ತಿಂಗಳ ಬಳಿಕ ಈ ಮೂವರಿಗೆ ಇಂತಹ ರೋಗ ಎದುರಾಗಿದೆ.ಈ ಬೋನ್​​ ಡೆತ್​​ ರೋಗದಿಂದ ಮೊದಲಿಗೆ ತೊಡೆಯ ಮೂಳೆಯ ಅಂಗಾಂಶ ಸತ್ತು ಹೋಗುತ್ತದೆ. ಈ ಸಮಸ್ಯೆಯನ್ನು ಅರಿತು ಆರಂಭಿಕ ಹಂತದಲ್ಲೇ ಮೂಳೆ ಸಮಸ್ಯೆಗೆ ಚಿಕಿತ್ಸೆ ಪಡೆದರೆ ಉತ್ತಮ.

ಕೋವಿಡ್​ನಿಂದ ಕ್ಯೂರ್​ ಆದವರಿಗೆ ಮಾತ್ರ ಈ ರೋಗ ಬರುತ್ತದೆ. ಮೂಳೆ ನೋವು ಕಾಣಿಸಿಕೊಂಡ ನಂತರ ಇದರ ಅಂಗಾಂಶಗಳು ಸತ್ತು ಹೋಗುತ್ತವೆ. ಈ ಬೋನ್​​ ಡೆತ್​ನಿಂದ​​ ದೇಹದ ಕೆಲವು ಮಹತ್ವದ ಭಾಗಗಳ ಮೂಳೆಗಳು ಸತ್ವವನ್ನು ಕೊಂದು ಬಿಡುತ್ತದೆ. ಹೀಗೆ ಮೂಳೆಗಳ ಸತ್ವ ಕಳೆದುಕೊಂಡವರು ಶಾಶ್ವತ ಅಂಗವೈಕಲ್ಯರಾಗಬಹುದು ಎನ್ನಲಾಗುತ್ತಿದೆ.

ಸ್ಟಿರಾಯ್ಡ್‌ ಕಾರಣ: ಕೋವಿಡ್‌ ಸೋಂಕಿತರು ಸ್ಟಿರಾಯ್ಡ್‌ ಔಷಧ ತೆಗೆದುಕೊಳ್ಳುತ್ತಾರೆ. ಇವರು ತೆಗೆದುಕೊಂಡ ಸ್ಟಿರಾಯ್ಡ್‌ನಿಂದಲೇ ಮೂಳೆಯ ಅಂಗಾಂಶದ ಸಾವು ಸಂಭವಿಸುತ್ತದೆ. ಕೊರೋನಾದಿಂದ ಗುಣಮುಖರಾದ ಎರಡು ತಿಂಗಳಲ್ಲಿ ಇಂಥ ಸಮಸ್ಯೆ ಆಗಬಹುದು. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಕೇಸ್​​ ಪತ್ತೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ಪರಿಹಾರವೇನು?: ನಿಮಗೆ ಈ ಸಮಸ್ಯೆ ಕಾಣಿಸಿಕೊಂಡಲ್ಲಿ ಮೂಳೆಗೆ ರಕ್ತ ಪೂರೈಕೆ ನಿಲ್ಲುತ್ತಿದ್ದಂತೆಯೇ ಇದರ ಅಂಗಾಂಶ ಸಾಯುತ್ತದೆ. ಬಳಿಕ ಸಾಮಾನ್ಯವಾಗಿ ಸೊಂಟ ಮತ್ತು ತೊಡೆ ನೋವು ಕಾಣಿದಲಿದೆ. ಕೂಡಲೇ ಎಂಆರ್‌ಐ ಸ್ಕಾನ್‌ ಮಾಡಿಸಿ ಚಿಕಿತ್ಸೆ ಪಡೆಯಬೇಕಾಗುತ್ತದೆ.

The post ಕೋವಿಡ್​ ಕ್ಯೂರ್​​ ಆದವರಿಗೆ ಕಾಣಿಸಿಕೊಳ್ಳುತ್ತಿದೆ ಮತ್ತೊಂದು ಸಮಸ್ಯೆ -ಏನಿದು ಬೋನ್​​ ಡೆತ್?​​ appeared first on News First Kannada.

Source: newsfirstlive.com

Source link