ಪೊಲೀಸ್ ಮನೆಗೆ ಕನ್ನ ಹಾಕಿ, Sorry Friend.. ಅಂತ ಪತ್ರ ಬರೆದಿಟ್ಟು ಹೋದ ಕಳ್ಳ

ಪೊಲೀಸ್ ಮನೆಗೆ ಕನ್ನ ಹಾಕಿ, Sorry Friend.. ಅಂತ ಪತ್ರ ಬರೆದಿಟ್ಟು ಹೋದ ಕಳ್ಳ

ಭೋಪಾಲ್: ಪೊಲೀಸ್ ಅಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳನೊಬ್ಬ ಕಳವು ಮಾಡಿದ್ದಲ್ಲದೇ ಕ್ಷಮಾಪಣಾ ಪತ್ರ ಬರೆದಿಟ್ಟ ಘಟನೆ ಮಧ್ಯಪ್ರದೇಶದ ಬಿಂದ್​​ನಲ್ಲಿ ನಡೆದಿದೆ.

ಕೊಟ್ಟಾಲಿ ಪೊಲೀಸ್ ಠಾಣೆಯ ಎಎಸ್‌ಐ ಕಮಲೇಶ್ ಕಟಾರೆ ಮನೆಯಲ್ಲಿ ಕಳ್ಳತನವಾಗಿತ್ತು. ಪರಿಶೀಲನೆ ವೇಳೆ ಕಳ್ಳ ಬರೆದಿಟ್ಟು ಹೋದ ಕ್ಷಮಾಪಣಾ ಪತ್ರ ಸಿಕ್ಕಿದೆ. ಪತ್ರದಲ್ಲಿ ಸ್ಸಾರಿ ಫ್ರೆಂಡ್​.. ಪರಿಸ್ಥಿತಿಗೆ ಸಿಲುಕಿ ಈ ಕೆಲಸ ಮಾಡುತ್ತಿದ್ದೇನೆ. ಇದನ್ನ ಮಾಡದಿದ್ದರೆ ನನ್ನ ಸ್ನೇಹಿತ ಪ್ರಾಣ ಕಳೆದುಕೊಂಡಿರುತ್ತಿದ್ದ. ಚಿಂತಸಬೇಡಿ.. ಹಣ ಸಿಕ್ಕ ಕೂಡಲೇ ಹಿಂತಿರುಗಿಸುತ್ತೇನೆ ಅಂತ ಬರೆದಿದ್ದಾನೆ.

ಕಳ್ಳ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನ ಕದ್ದಿದ್ದಾನೆ . ಚಿನ್ನಾಭರಣವನ್ನೆಲ್ಲ ಕಳೆದುಕೊಂಡಿರುವ ಪೊಲೀಸ್ ಅಧಿಕಾರಿ, ಕಳ್ಳನ ಪತ್ರ ನೋಡಿ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ. ಕುಟುಂಬಕ್ಕೆ ಪರಿಚಯವಿದ್ದವರಲ್ಲೇ ಯಾರೋ ಒಬ್ಬರು ಈ ಕೃತ್ಯದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ ಅಂತ ವರದಿಯಾಗಿದೆ.

The post ಪೊಲೀಸ್ ಮನೆಗೆ ಕನ್ನ ಹಾಕಿ, Sorry Friend.. ಅಂತ ಪತ್ರ ಬರೆದಿಟ್ಟು ಹೋದ ಕಳ್ಳ appeared first on News First Kannada.

Source: newsfirstlive.com

Source link