ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ

ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಒಂದೊಂದು ಭಾಗಗಲ್ಲಿ ವಿಶೇಷ ಆಹಾರದ ರುಚಿಯನ್ನು ಒಮ್ಮೆಯಾರದೂ ಸೇವಿಸಬೇಕು ಎಂದು ಪ್ರತಿಯೊಬ್ಬರು ಅಂದುಕೊಂಡಿರುತ್ತಾರೆ. ಹೀಗಿರುವಾಗ ನಾವು ಇಂದು ಕೊಡಗಿನ ಶೈಲಿಲ್ಲಿ ಮಾಡುವ ಹಂದಿ ಕರಿಯನ್ನು ಮಾಡಿ ನೋಡಿ…


ಬೇಕಾಗುವ ಸಾಮಗ್ರಿಗಳು:
* ಪೋರ್ಕ್ (ಹಂದಿ ಮಾಂಸ) 1 ಕೆಜಿ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
* ಅರಿಶಿಣ ಪುಡಿ- 1 ಟೀ ಸ್ಪೂನ್
* ಖಾರದ ಪುಡಿ-2 ಟೀ ಸ್ಪೂನ್
* ಕೊತ್ತಂಬರಿ ಪುಡಿ 1 ಟೀ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಕರಿಬೇವು ಸ್ವಲ್ಪ
* ಕೊತ್ತಂಬರಿ ಸೊಪ್ಪು
* ಬೆಳ್ಳುಳ್ಳಿ-2
* ಜೀರಿಗೆ ಪುಡಿ – 1ಟೀ ಸ್ಪೂನ್
* ಮೆಂತೆ ಪುಡಿ- 1ಟೀ ಸ್ಪೂನ್
* ಈರುಳ್ಳಿ – 2
* ಶುಂಠಿ
* ಹಸಿ ಮೆಣಸು 1ರಿಂದ2
* ಕಾಳು ಮೆಣಸಿನ ಪುಡಿ 1 ಟೀ ಸ್ಪೂನ್
* ನಿಂಬೆ ರಸ- 2 ಟೀ ಸ್ಪೂನ್
* ಅಡುಗೆ ಎಣ್ಣೆ- 1 ಕಪ್

ಮಾಡುವ ವಿಧಾನ:

* ಕೊತ್ತಂಬರಿ ಪುಡಿ ಹಾಗೂ ಖಾರದ ಪುಡಿ ಸ್ವಲ್ಪ ಕಾಫಿ ಹುಡಿ ಬಣ್ಣಕ್ಕೆ ಬರುವಷ್ಟು ಹೊತ್ತು ಕಡಿಮೆ ಉರಿಯಲ್ಲಿ ಹುರಿಯಿರಿ.

* ಈಗ ಒಂದು ಪಾತ್ರೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಕರಿಬೇವನ್ನು ಹಾಕಬೇಕು. ನಂತರ ಇದೇ ಪಾತ್ರೆಗೆ ಹಂದಿ ಮಾಂಸವನ್ನು ತೊಳೆದು ಹಾಕಿ ಅರಿಶಿಣ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಬೇಕು.

blank

* ಜೀರಿಗೆ ಪುಡಿ, ಮೆಂತೆ ಪುಡಿ, ಈರುಳ್ಳಿ, ಶುಂಠಿ, ಕಾಳು ಮೆಣಸಿನ ಪುಡಿ, ಹಸಿ ಮೆಣಸು, ನಿಂಬೆರಸ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ ಸ್ಪಲ್ಪ ಹೊತ್ತು ಬೇಯಿಸಬೇಕು.

* ನಂತರ ಹುರಿದ ಮಸಾಲೆಯನ್ನು ಸೇರಿಸಿ ಚೆನ್ನಾಗಿ 45-50 ನಿಮಿಷ ಬೇಯಿಸಬೇಕು.

blank

* ನಂತರ 1 ಚಮಚ ನಿಂಬೆರಸ ಸೇರಿಸಿ, ಕೊತ್ತಂಬರಿಯನ್ನು ಹಾಕಿದರೆ ಹಂದಿ ಕರಿ ಕಡಬು ಅಥವಾ ಇಡ್ಲಿ ಜೊತೆ ಸವಿಯಲು ಸಿದ್ಧವಾಗುತ್ತದೆ.

The post ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ appeared first on Public TV.

Source: publictv.in

Source link