ಟೋಕಿಯೋ ಒಲಿಂಪಿಕ್ಸ್​​​ಗೆ ದಕ್ಷಿಣ ರೇಲ್ವೆ ಟಿಕೆಟ್ ಕಲೆಕ್ಟರ್ ರೇವತಿ ಆಯ್ಕೆ

ಟೋಕಿಯೋ ಒಲಿಂಪಿಕ್ಸ್​​​ಗೆ ದಕ್ಷಿಣ ರೇಲ್ವೆ ಟಿಕೆಟ್ ಕಲೆಕ್ಟರ್ ರೇವತಿ ಆಯ್ಕೆ

ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಂಪಿಕ್ಸ್​ಗೆ ತಮಿಳುನಾಡಿನ ಮಧುರೈ ಮೂಲದ  ರೇವತಿ ವೀರಮಣಿ ಆಯ್ಕೆ ಆಗಿದ್ದಾರೆ. ಸದ್ಯ ರೇವತಿ ದಕ್ಷಿಣ ರೇಲ್ವೆ ವಿಭಾಗದಲ್ಲಿ ಟಿಕೆಟ್ ಕಲೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಒಲಂಪಿಕ್ಸ್​​ನಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ.

ರೇವತಿ ವೀರಮಣಿ ರಿಲೇಯಲ್ಲಿ ಭಾಗವಹಿಸಲಿದ್ದಾರೆ ಅಂತ ದಕ್ಷಿಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಮತ್ತೊಬ್ಬ ಸ್ಟಾರ್ ಅಥ್ಲೀಟ್ ಹಿಮಾದಾಸ್ ಒಲಿಪಿಂಕ್ಸ್​ನಿಂದ ಹೊರಗುಳಿದಿದ್ದಾರೆ. ಕಳೆದ ತಿಂಗಳು ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​​​ನಲ್ಲಿ 100 ಮೀಟರ್ ಓಟದ ವೇಳೆ ಹಿಮಾ ದಾಸ್ ಮಂಡಿ ನೋವಿನಿಂದ ಬಳಲಿದ್ದರು. ಈಗ ಗಾಯದ ಸಮಸ್ಯೆಯಿಂದಲೇ ಅವ್ರು ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಗುಳಿಯುವಂತಾಗಿದೆ.

The post ಟೋಕಿಯೋ ಒಲಿಂಪಿಕ್ಸ್​​​ಗೆ ದಕ್ಷಿಣ ರೇಲ್ವೆ ಟಿಕೆಟ್ ಕಲೆಕ್ಟರ್ ರೇವತಿ ಆಯ್ಕೆ appeared first on News First Kannada.

Source: newsfirstlive.com

Source link