ಮನೆ ಗೋಡೆ ಕುಸಿದು, 3 ವರ್ಷದ ಬಾಲಕ ದುರ್ಮರಣ

ಮನೆ ಗೋಡೆ ಕುಸಿದು, 3 ವರ್ಷದ ಬಾಲಕ ದುರ್ಮರಣ

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

blank

ಮಳೆಯಿಂದಾಗಿ ಶಿಥಿಲಗೊಂಡ ಗೋಡೆ ನಿನ್ನೆ ಕುಸಿದುಬಿದ್ದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಬಾಲಕ ಲೋಹಿತ್(3) ಸಾವನ್ನಪ್ಪಿದ್ದಾನೆ. ಬಾಲಕ ಪೋಷಕರಾದ ಓಂಕಾರಪ್ಪ ಹಾಗೂ ಸಾವಿತ್ರಮ್ಮ ದಂಪತಿಗೆ ಗಾಯವಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

The post ಮನೆ ಗೋಡೆ ಕುಸಿದು, 3 ವರ್ಷದ ಬಾಲಕ ದುರ್ಮರಣ appeared first on News First Kannada.

Source: newsfirstlive.com

Source link