‘ಮುಂದಿನ ಸಿಎಂ’ ಹೇಳಿಕೆ ಬೆಂಕಿ ತಣ್ಣಗಾಗೋ ಮೊದಲೇ ತುಪ್ಪ ಸುರಿದ ನಲಪಾಡ್

‘ಮುಂದಿನ ಸಿಎಂ’ ಹೇಳಿಕೆ ಬೆಂಕಿ ತಣ್ಣಗಾಗೋ ಮೊದಲೇ ತುಪ್ಪ ಸುರಿದ ನಲಪಾಡ್

ಬೆಂಗಳೂರು: ಮುಂದೆ ಕಾಂಗ್ರೆಸ್ ಸರ್ಕಾರ ಬಂದಾಗ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ  ಅಂತ ಯೂತ್ ಕಾಂಗ್ರೆಸ್​ ಮುಖಂಡ ಮೊಹಮ್ಮದ್​ ನಲಪಾಡ್ ಹೇಳಿದ್ದಾರೆ. ಈ ಮೂಲಕ ‘ಮುಂದಿನ ಸಿಎಂ’ ಹೇಳಿಕೆಯ ಬೆಂಕಿ ತಣ್ಣಗಾಗೋ ಮೊದಲೇ ನಲಪಾಡ್ ಅದಕ್ಕೆ ತುಪ್ಪ ಸುರಿದಿದ್ದಾರೆ.

ಕಾಂಗ್ರೆಸ್​ನಲ್ಲಿ ಹಲವರು ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೇಳಿಕೆ ನೀಡಿದ್ರೆ, ಇನ್ನೂ ಕೆಲವರು ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಹಲವು ಕಾರ್ಯಕ್ರಮಗಳಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಇದು ಹಲವು ಚರ್ಚೆಗಳಿಗೂ ಗ್ರಾಸವಾಗಿತ್ತು. ಇನ್ನೇನು ಈ ಚರ್ಚೆ ತಣ್ಣಗಾಗಿತ್ತು ಎನ್ನುವಾಗಲೇ ನಲಪಾಡ್​ ಡಿ.ಕೆ ಶಿವಕುಮಾರ್ ಪರ ಬಹುಪರಾಕ್ ಹಾಕಿದ್ದಾರೆ.

ನಲಪಾಡ್​ ಮಂಗಳೂರಿನ ಕರಾವಳಿ ಭಾಗದಲ್ಲಿನ ಮೀನುಗಾರರ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಮುಂದಿನ ಎಲೆಕ್ಷನ್​​ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ. ಅಂದ್ಹಾಗೆ 2022ರ ಫೆಬ್ರವರಿಯಿಂದ ಕೆಪಿವೈಸಿ(ಯೂತ್​ ಕಾಂಗ್ರೆಸ್​​) ಅಧ್ಯಕ್ಷರಾಗಿ ನಲಪಾಡ್​ ಹೆಸರು ಘೋಷಣೆಯಾಗಿದೆ. ಅದರ ಬೆನ್ನಲ್ಲೇ ನಲಪಾಡ್​​ ಈ ಹೇಳಿಕೆ ಕೊಟ್ಟಿದ್ದಾರೆ.

The post ‘ಮುಂದಿನ ಸಿಎಂ’ ಹೇಳಿಕೆ ಬೆಂಕಿ ತಣ್ಣಗಾಗೋ ಮೊದಲೇ ತುಪ್ಪ ಸುರಿದ ನಲಪಾಡ್ appeared first on News First Kannada.

Source: newsfirstlive.com

Source link