ರಾಮ್ ಚರಣ್ ಜೊತೆ ಸಿನಿಮಾ: ರಶ್ಮಿಕಾ ಮಂದಣ್ಣ ಚಾನ್ಸ್ ಬಾಲಿವುಡ್​ ನಟಿ ಪಾಲಾಯ್ತು

ರಾಮ್ ಚರಣ್ ಜೊತೆ ಸಿನಿಮಾ: ರಶ್ಮಿಕಾ ಮಂದಣ್ಣ ಚಾನ್ಸ್ ಬಾಲಿವುಡ್​ ನಟಿ ಪಾಲಾಯ್ತು

ಮಡಕೇರಿ ಮಲ್ಲಿಗೆ ಇಂಡಿಯನ್ ಸಿನಿ ರಂಗವನ್ನ ಸುತ್ತುತ್ತಿದ್ದಾರೆ ಮೆಲ್ಲಗೆ. ರಶ್ಮಿಕಾ ಮಂದಣ್ಣ ಹೊದೆಲ್ಲೆಲ್ಲ ಸುದ್ದಿ ಸಮಾಚಾರದ ಹೋಳಿಗೆ. ಸಾಲು ಸಾಲು ಸಿನಿಮಾ ಚಾನ್ಸ್​​ಗಳನ್ನ ತನ್ನ ವ್ಯಾನಿಟಿ ಬ್ಯಾಗ್​​​ಗೆ ಇಳಿಸಿಕೊಳ್ತಿರೋ ರಶ್ಮಿಕಾ ಅವರ ಅವಕಾಶವನ್ನ ಈಗ ಮತ್ತೊಬ್ಬ ಸುಂದರಿ ಪಡೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ.. ಲಕ್ಕಿನೂ ಹೌದು.. ಟ್ಯಾಲೆಂಟೆಡ್ ಬ್ಯೂಟಿನೂ ಹೌದು. ಈ ಕಾರಣಕ್ಕೆ ರಶ್ಮಿಕಾಗೆ ಈಗ ಸ್ಯಾಂಡಲ್​ವುಡ್​ನಿಂದ ಟಾಲಿವುಡ್, ಕಾಲಿವುಡ್, ಬಾಲಿವುಡ್ ತನಕ ಅವಕಾಶಗಳ ಸುರಿ ಮಳೆ ಬರ್ತಿದೆ. ಯಾವುದೇ ಹೊಸ ಬಿಗ್​​​ ಸಿನಿಮಾಗಳು ಟಾಲಿವುಡ್​​ನಲ್ಲಿ​​​​ ಲಾಂಚ್ ಆಗೋ ಸುದ್ದಿಗಳು ಹೊರ ಬಂದ್ರು ಮಡಕೇರಿ ಮಲ್ಲೇಯ ಹೆಸರು ಕಂಗೊಳಿಸುತ್ತಿರುತ್ತೆ. ಇದೇ ರೀತಿ ರೋಬೋ ಶಂಕರ್ ನಿರ್ದೇಶನದ ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ 15ನೇ ಚಿತ್ರದ ಸ್ಟಾರ್ ಕಾಸ್ಟ್​​ನಲ್ಲಿ ರಶ್ಮಿಕಾ ಹೆಸರು ಸಿಲುಕಿ ಸೆಲೆಬ್ರೆಷನ್ ಮಾಡ್ತಿತ್ತು. ಇನ್ನೇನು ಥ್ರಿಬಲ್ ಆರ್ ಸಿನಿಮಾವನ್ನ ಮುಗಿಸಿ ರಾಮ್ ಚರಣ್ ಎಸ್​​.ಶಂಕರ್ ಸಿನಿಮಾ ಸೆಟ್​​ನಲ್ಲಿ ನಿಂತುಬಿಡ್ತಾರೆ , ರಾಮ್ ಚರಣ್ ಜೊತೆ ರಶ್ಮಿಕಾ ನಕ್ಕು ಬಿಡ್ತಾರೆ ಅನ್ನೋಷ್ಟರಲ್ಲಿ ರಶ್ಮಿಕಾ ಬದಲು ಮತ್ತೊಬ್ಬ ಸುಂದ್ರಿ ಬಂದು ನಿಂತಿದ್ದಾರೆ.

ರಶ್ಮಿಕಾ ಮಂದಣ್ಣ ಹೆಸರು ರಾಮ್ ಚರಣ್ ಅವರ 15ನೇ ಸಿನಿಮಾದಲ್ಲಿ ತಳುಕು ಹಾಕಿಕೊಂಡಿತ್ತು. ಆದ್ರೆ ಎಲ್ಲಿಯೂ ಅಧಿಕೃತವಾಗಿರಲಿಲ್ಲ. ಸದ್ಯ ರಶ್ಮಿಕಾ ಬಾಲಿವುಡ್​​ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ಹಾಗೂ ಸಿದ್ಧಾರ್ಥ್ ಮೆಲ್ಹೋತ್ರ ಜೊತೆಗೆ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಆದ ನಂತರ ರಶ್ಮಿಕಾ ರಾಮ್ ಚರಣ್-ಶಂಕರ್ ಕಾಂಬಿನೇಷನ್ ಚಿತ್ರದಲ್ಲಿ ಕಾಣಿಸಿಕೊಳ್ತಾರೆ ಎನ್ನಲಾಗಿತ್ತು. ಆದ್ರೆ ಕಳೆದ ದಿನ ಚೆನ್ನೈನಲ್ಲಿ ರಾಮ್ ಚರಣ್ -ಶಂಕರ್ ಹಾಗೂ ದಿಲ್ ರಾಜು ಭೇಟಿ ಮಾಡಿ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ ಶೂಟಿಂಗ್​​​ಗೆ ತೆರಳಲು ಸಜ್ಜಾಗಿದ್ದಾರೆ. ಆದ್ರೆ ರಶ್ಮಿಕಾ ಜಾಗಕ್ಕೆ ನಟಿ ಕಿಯಾರಾ ಅಡ್ವಾಣಿ ಬಂದು ನಿಂತಿದ್ದಾರೆ.

ಒಂದು ಮಾಹಿತಿಯ ಪ್ರಕಾರ ಕಿಯಾರಾ ಅಡ್ವಾಣಿ ನಿರ್ದೇಶಕ ಶಂಕರ್ ಅವರ ಒಟ್ಟು ಮೂರು ಚಿತ್ರಗಳಿಗೆ ಹೀರೋಯಿನ್ ಆಗಿ ಪಾತ್ರ ಮಾಡಲು ಫಿಕ್ಸ್ ಆಗಿದ್ದಾರಂತೆ. ಈ ಹಿಂದೆ ರಾಮ್ ಚರಣ್ ಜೊತೆ ವಿನಯ ವಿಧಯ ರಾಮ ಚಿತ್ರದಲ್ಲಿ ಕಿಯಾರ ನಳ ನಳಿಸಿದ್ದರು. ಎರಡನೇ ಬಾರಿಗೆ ಮೆಗಾ ಪವರ್ ಸ್ಟಾರ್ ಜೊತೆಗೆ ಬಾಂಬೆ ಬ್ಯೂಟಿ ನಟಿಸಿ ನರ್ತಿಸಲಿದ್ದಾರೆ. ಈ ಸುದ್ದಿ ತಿಳಿದ ರಶ್ಮಿಕಾ ಫ್ಯಾನ್ಸ್ ನಮ್ಮ ರಶ್ಮಿಕಾ ಅವಕಾಶ ಕಿಯಾರಾ ಪಾಲಾಯ್ತು ಅಂತ ಬೇಸರ ಮಾಡಿಕೊಳ್ತಿದ್ದಾರೆ.

The post ರಾಮ್ ಚರಣ್ ಜೊತೆ ಸಿನಿಮಾ: ರಶ್ಮಿಕಾ ಮಂದಣ್ಣ ಚಾನ್ಸ್ ಬಾಲಿವುಡ್​ ನಟಿ ಪಾಲಾಯ್ತು appeared first on News First Kannada.

Source: newsfirstlive.com

Source link