ನಿನ್ನೆ ಸುರಿದ ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ದಂಪತಿ- ಪತಿ ಶವ ಪತ್ತೆ

ನಿನ್ನೆ ಸುರಿದ ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ದಂಪತಿ- ಪತಿ ಶವ ಪತ್ತೆ

ವಿಜಯನಗರ: ನಿನ್ನೆ ಸುರಿದ ಭಾರೀ ಮಳೆಗೆ ಗಂಡ ಹೆಂಡತಿಯಿಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಹೂವಿನಹಡಗಲಿಯಲ್ಲಿ ನಡೆದಿದೆ.

ಹಗರಿ ಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಮೊತ್ಕೂರು ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ (55) ಹಾಗೂ ಅವರ ಪತ್ನಿ ಗದಗ ಜಿಲ್ಲೆಯಿಂದ ವಾಪಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೂವಿನಹಡಗಲಿ ತಾಲೂಕಿನ ಪೂರ್ವ ಮತ್ತು ಪಶ್ಚಿಮ ಕಾಲ್ವಿ ಗ್ರಾಮಗಳ ಬಳಿ ಇರುವ ಹಳ್ಳದಲ್ಲಿ ನಿನ್ನೆ ದಂಪತಿ ಕೊಚ್ಚಿಹೋಗಿದ್ದು, ಮಲ್ಲಿಕಾರ್ಜುನ ಇಂದು ಶವವಾಗಿ ಪತ್ತೆಯಾಗಿದ್ದಾರೆ.

ಹಳ್ಳದ ದಡದಲ್ಲಿ ಬೈಕ್​ ಪತ್ತೆಯಾದ ವೇಳೆ ದಂಪತಿ ನೀರಿನಲ್ಲಿ ಕೊಚ್ಚಿ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಇಂದು ಮಲ್ಲಿಕಾರ್ಜುನ ಅವರ ಮೃತ ದೇಹ ಪತ್ತೆಯಾಗಿದ್ದು, ಪತ್ನಿಗಾಗಿ ಹುಡುಕಾಟ ಮುಂದುವರಿದಿದೆ.

The post ನಿನ್ನೆ ಸುರಿದ ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ದಂಪತಿ- ಪತಿ ಶವ ಪತ್ತೆ appeared first on News First Kannada.

Source: newsfirstlive.com

Source link