ಮೋದಿ ಸಂಪುಟ ವಿಸ್ತರಣೆ: ನನಗೆ ಕರೆ ಬಂದಿಲ್ಲವೆಂದ ಶಿವಕುಮಾರ್ ಉದಾಸಿ

ಮೋದಿ ಸಂಪುಟ ವಿಸ್ತರಣೆ: ನನಗೆ ಕರೆ ಬಂದಿಲ್ಲವೆಂದ ಶಿವಕುಮಾರ್ ಉದಾಸಿ

ಬೆಂಗಳೂರು: ಇಂದು ಸಂಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈ ಹಿನ್ನೆಲೆ ರಾಜ್ಯದಿಂದ ಯಾರಿಗೆಲ್ಲಾ ಮೋದಿ ಸಂಪುಟದಲ್ಲಿ ಸ್ಥಾನ ಸಿಗುತ್ತೆ ಅನ್ನೋ ಕುತೂಹಲ ಹೆಚ್ಚಿದೆ.

ರಾಜ್ಯದಿಂದ ಸಚಿವ ಸ್ಥಾನ ಪಡೆಯಬಹುದಾದ ಸಂಭವನೀಯರ ಪಟ್ಟಿಯಲ್ಲಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಅವರ ಹೆಸರು ಕೇಳಿಬಂದಿತ್ತು. ಆದ್ರೆ ಅವರು ದೆಹಲಿಗೆ ತೆರಳದೇ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ.

ವೀರಶೈವ-ಲಿಂಗಾಯತ ಸಮುದಾಯದ ಉದಾಸಿ ಅವರಿಗೆ ಕೇಂದ್ರ ಸಚಿವ ಸ್ಥಾನ ಒಲಿಯಬಹುದು ಎಂದು ಹೇಳಲಾಗ್ತಿತ್ತು. ಆದ್ರೆ ನ್ಯೂಸ್‌ಫಸ್ಟ್‌‌ಗೆ ದೂರವಾಣಿಯಲ್ಲಿ ಸ್ಪಷ್ಟನೆ ನೀಡಿದ ಶಿವಕುಮಾರ್ ಉದಾಸಿ, ನಾನು ಬೆಂಗಳೂರಿನಲ್ಲೇ ಇದ್ದೇನೆ. ನನಗೆ ಯಾವುದೇ ಕರೆ ಬಂದಿಲ್ಲ. ಹೀಗಾಗಿ, ನಾನು ದೆಹಲಿಯತ್ತ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನ್ಯೂಸ್​ಫಸ್ಟ್​ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಡಾ.ಉಮೇಶ್ ಜಾಧವ್, ರಮೇಶ್ ಜಿಗಜಿಣಗಿ ಹಾಗೂ ಎ‌. ನಾರಾಯಣಸ್ವಾಮಿ ಕೇಂದ್ರದ ನಾಯಕರು ಕರೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ಸಂಸದರು ದೆಹಲಿಗೆ ದೌಡಾಯಿಸಿದ್ದಾರೆ.

The post ಮೋದಿ ಸಂಪುಟ ವಿಸ್ತರಣೆ: ನನಗೆ ಕರೆ ಬಂದಿಲ್ಲವೆಂದ ಶಿವಕುಮಾರ್ ಉದಾಸಿ appeared first on News First Kannada.

Source: newsfirstlive.com

Source link