ಕೇಂದ್ರದ ಮಾಜಿ ಸಚಿವರ ಪತ್ನಿಯ ಬರ್ಬರ ಹತ್ಯೆ

ನವದೆಹಲಿ: ಕೇಂದ್ರ ಮಾಜಿ ಸಚಿವ ಆರ್ ಆರ್ ಕುಮಾರಮಂಗಲಂ ಅವರ ಪತ್ನಿಯನ್ನು ದೆಹಲಿಯಲ್ಲಿರುವ ಅವರ ನಿವಾಸದಲ್ಲಿಯೇ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕಿಟ್ಟಿ ಕುಮಾರಮಂಗಲಂ(67) ಅವರು ದಕ್ಷಿಣ ದೆಹಲಿಯ ವಸಂತ ವಿಹಾರ್ ನಲ್ಲರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ದಿಂಬಿನ ಮೂಲಕ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕಿಟ್ಟಿ ತಮ್ಮ ಮನೆಯಲ್ಲಿ ಮನೆಗೆಲಸದವನ ಜೊತೆ ಒಬ್ಬರೇ ಇದ್ದರು. ಈ ವೇಳೆ ಏಕಾಏಕಿ ಎರಡಕ್ಕಿಂತ ಹೆಚ್ಚು ಮಂದಿ ನುಗ್ಗಿ ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೆ ಮನೆಗೆಲಸದವನನ್ನು ಕೋಣೆಯೊಳಗೆ ಕೂಡಿ ಹಾಕಿ, ಇತ್ತ ಕಿಟ್ಟಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್ ದಿಗ್ಗಜ ದಿಲೀಪ್ ಕುಮಾರ್ ಇನ್ನಿಲ್ಲ

ಇತ್ತ ರಾತ್ರಿ 11 ಗಮಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ತಿಳಿದಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಕಿಟ್ಟಿ ಕುಮಾರಮಂಗಲಂ ಅವರು ಸುಪ್ರೀಂ ಕೋರ್ಟ್ ವಕೀಲೆಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಪತಿ 1984 ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. 1991 ಮತ್ತು 92 ರ ನಡುವೆ ಕೇಂದ್ರ ರಾಜ್ಯ, ಸಂಸದೀಯ ವ್ಯವಹಾರ ಮತ್ತು ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವರಾಗಿ, 1992 ಮತ್ತು 93 ರ ನಡುವೆ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.

The post ಕೇಂದ್ರದ ಮಾಜಿ ಸಚಿವರ ಪತ್ನಿಯ ಬರ್ಬರ ಹತ್ಯೆ appeared first on Public TV.

Source: publictv.in

Source link