‘ಎಚ್ಚರಿಕೆಯಿಂದಿರಬೇಕಾದ ಸಮಯ ಇನ್ನೂ ಮುಗಿದಿಲ್ಲ’ -ಈ ವರ್ಷ ಬರ್ತ್​​ಡೇ ಆಚರಣೆ ಇಲ್ಲವೆಂದ ಶಿವರಾಜ್​ಕುಮಾರ್​

‘ಎಚ್ಚರಿಕೆಯಿಂದಿರಬೇಕಾದ ಸಮಯ ಇನ್ನೂ ಮುಗಿದಿಲ್ಲ’ -ಈ ವರ್ಷ ಬರ್ತ್​​ಡೇ ಆಚರಣೆ ಇಲ್ಲವೆಂದ ಶಿವರಾಜ್​ಕುಮಾರ್​

ಬೆಂಗಳೂರು: ದೇವರ ದಯೆಯಿಂದ ಕೊರೊನಾ ಕಮ್ಮಿಯಾಗಿದೆ. ನನ್ನ ಹುಟ್ಟುಹಬ್ಬಕ್ಕಿಂತ ಸುರಕ್ಷತೆಯೇ ಮುಖ್ಯ. ಆದ್ದರಿಂದ ಈ ವರ್ಷದ ಹುಟ್ಟು ಹಬ್ಬದ ಆಚರಣೆ ಇಲ್ಲ ಎಂದು ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಹೇಳಿದ್ದಾರೆ.

ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಶಿವರಾಜ್​ಕುಮಾರ್ ಅವರು, ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡಲ್ಲ. ಯಾರೂ ಮನೆ ಬಳಿ ಬರಬೇಡಿ. ಜುಲೈ 12ಕ್ಕೆ ಹುಟ್ಟು ಹಬ್ಬವಿದ್ದು, ಕೊರೊನಾ ಕಾರಣ ಬರ್ತ್​​ ಡೇ ಆಚರಿಸದಿರಲು ನಿರ್ಧಾರ ಮಾಡಿದ್ದೀನಿ. ನನ್ನ ಹುಟ್ಟು ಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಕಾರಣಾಂತರದಿಂದ ನಾನು ಹುಟ್ಟುಹಬ್ಬದಂದು ಊರಲ್ಲಿ ಇರುವುದಿಲ್ಲ. ನೀವು ಇರುವಲ್ಲೇ ಸೋಷಿಯಲ್ ಮೀಡಿಯಾ ಮೂಲಕ ನನಗೆ ಶುಭಕೋರಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಇದೇ ವೇಳೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ, ಕೊರೊನಾ ಲಸಿಕೆ ಪಡೆದುಕೊಳ್ಳಿ. ಆದಷ್ಟು ಬೇಗ ಕೊರೊನಾ ದೂರವಾಗಿ ಎಲ್ಲರೂ ಒಟ್ಟಾಗಿ ಸೇರುವ ದಿನ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ. ಸಾಮಾಜಿಕ ಅಂತರ ಪಾಲನೆ ಮಾಡಿ ಮಾಸ್ಕ್ ಹಾಕಿಕೊಳ್ಳುವುದನ್ನು ಮರೆಯಬೇಡಿ ಎಂದು ಕೋರಿದ್ದಾರೆ.

ಇದನ್ನೂ ಓದಿ: ‘ನೋ ಸೆಲೆಬ್ರೇಷನ್.. ಓನ್ಲಿ ವರ್ಕಿಂಗ್​’ ಎಂದ ನಟರು

The post ‘ಎಚ್ಚರಿಕೆಯಿಂದಿರಬೇಕಾದ ಸಮಯ ಇನ್ನೂ ಮುಗಿದಿಲ್ಲ’ -ಈ ವರ್ಷ ಬರ್ತ್​​ಡೇ ಆಚರಣೆ ಇಲ್ಲವೆಂದ ಶಿವರಾಜ್​ಕುಮಾರ್​ appeared first on News First Kannada.

Source: newsfirstlive.com

Source link