40ನೇ ವರ್ಷಕ್ಕೆ ಕಾಲಿಟ್ಟ ಧೋನಿ ಮುಂದಿನ ಆಯ್ಕೆ ಏನು? CSK ಕೋಚ್ ಅಥವಾ ಸಲಹೆಗಾರನಾಗ್ತಾರಾ?

40ನೇ ವರ್ಷಕ್ಕೆ ಕಾಲಿಟ್ಟ ಧೋನಿ ಮುಂದಿನ ಆಯ್ಕೆ ಏನು? CSK ಕೋಚ್ ಅಥವಾ ಸಲಹೆಗಾರನಾಗ್ತಾರಾ?

ವಿಶ್ವ ಕ್ರಿಕೆಟ್​​ ಲೋಕದ ಒನ್​ ಆಫ್​ ದ ಗ್ರೇಟೆಸ್ಟ್​ ಫಿನಿಷರ್​​, ಟೀಮ್​ ಇಂಡಿಯಾ ಕಂಡ ಸಕ್ಸಸ್​ಫುಲ್​ ಕ್ಯಾಪ್ಟನ್​, ಸಿಎಸ್​​​ಕೆ ಅಭಿಮಾನಿಗಳ ಪಾಲಿನ ಥಲಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಧೋನಿ ಕಾಲಿಟ್ಟ ಬೆನ್ನಲ್ಲೇ ವಾಟ್​​ ನೆಕ್ಸ್ಟ್​​ ಫಾರ್​​ ಧೋನಿ ಎಂಬ ಪ್ರಶ್ನೆಯೂ ಎದ್ದಿದೆ. ಹಾಗಾದ್ರೆ ಧೋನಿ ಮುಂದೇನು ಮಾಡ್ತಾರೆ..? ಇಲ್ಲಿದೆ ನೋಡಿ ಡಿಟೇಲ್ಸ್​​.

ಟೀಮ್​ ಇಂಡಿಯಾ ಮಾಜಿ ನಾಯಕ ಎಮ್​.ಎಸ್​​ ಧೋನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ನೆಚ್ಚಿನ ಮಿಸ್ಟರ್​ ಕೂಲ್​ ಇಂದು  40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​ ಬೈ ಹೇಳಿರುವ ಧೋನಿ ಸದ್ಯ ಸಕ್ರಿಯವಾಗಿರೋದು ಐಪಿಎಲ್​ನಲ್ಲಿ ಮಾತ್ರ. ಐಪಿಎಲ್​​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ತಂಡ 2ನೇ ಸಕ್ಸಸ್​ಫುಲ್​ ತಂಡವಾಗಿ ಗುರುತಿಸಿಕೊಂಡಿದೆ ಅಂದ್ರೆ ಅದು ಧೋನಿಯ ಸಮರ್ಥ ನಾಯಕತ್ವದ ಬಲದಿಂದ. 8 ಬಾರಿ ಫೈನಲ್​ ಪ್ರವೇಶ, ಅದರಲ್ಲಿ 3 ಬಾರಿ ಚಾಂಪಿಯನ್​ ಪಟ್ಟ. ಧೋನಿ ಸಾಧನೆಗೆ ಇದೇ ಕನ್ನಡಿ.

ಈ ಕಾರಣದಿಂದಲೇ ಅಭಿಮಾನಿಗಳ ನೆಚ್ಚಿನ ಥಲಾ ಆಗಿ ಗುರುತಿಸಿಕೊಂಡಿರುವ ಧೋನಿ, ಇದೀಗ 40ನೇ ವಸಂತಕ್ಕೆ ಕಾಲಿಟ್ಟಿರೋದು ಸಂಭ್ರಮದೊಂದಿಗೆ ಅಭಿಮಾನಿಗಳಲ್ಲಿ ಆತಂಕವನ್ನೂ ಮೂಡಿಸಿದೆ.

blank2022ರಲ್ಲಿ ಯಶಸ್ವಿ ನಾಯಕನನ್ನ ರಿಟೈನ್​ ಮಾಡಿಕೊಳ್ಳುತ್ತಾ CSK..?
14ನೇ ಆವೃತ್ತಿಯ ಉಳಿದ ಪಂದ್ಯಗಳ ಆಯೋಜನೆಯೊಂದಿಗೆ 15ನೇ ಆವೃತ್ತಿಯ ಟೂರ್ನಿಗೂ ಬಿಸಿಸಿಐ ಭರ್ಜರಿ ಸಿದ್ಧತೆ ನಡೆಸಿದೆ. ಮೆಗಾ ಆಕ್ಷನ್​ಗೂ ಬ್ಲೂ ಪ್ರಿಂಟ್​ ರೆಡಿ ಆಗಿದೆ. ಹೀಗಾಗಿ ಯಾವೆಲ್ಲಾ ಆಟಗಾರನನ್ನ ಫ್ರಾಂಚೈಸಿಗಳು ರಿಟೈನ್​ ಮಾಡಿಕೊಳ್ಳಲಿವೆ ಅನ್ನೋದು ಹೆಚ್ಚು ಚರ್ಚೆಯಾಗ್ತಿದೆ. ಅದರಲ್ಲೂ 40 ವರ್ಷದ ಧೋನಿಗೆ ಸಿಎಸ್​ಕೆ ಫ್ರಾಂಚೈಸಿ ಮತ್ತೆ ಮಣೆ ಹಾಕುತ್ತಾ ಅನ್ನೋದು ಹಾಟ್​ ಟಾಪಿಕ್​ ಆಗಿದೆ.

ಕಳೆದ ಆವೃತ್ತಿಯಲ್ಲಿ ಧೋನಿ ಪ್ರದರ್ಶನ

  • ಪಂದ್ಯ            7
  • ರನ್              37
  • ಸರಾಸರಿ        12.33
  • ಸ್ಟ್ರೈಕ್​ರೇಟ್   123.33

blank

ಧೋನಿ ತಂಡದಲ್ಲಿರ್ತಾರಾ ಅನ್ನೋ ಪ್ರಶ್ನೆಗೆ ಸಿಎಸ್​​ಕೆ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್ ಅವರ​ ಉತ್ತರ ಹೌದು ಅನ್ನೋದೇ ಆಗಿದೆ. ಆದ್ರೆ ಕಳೆದ ಆವೃತ್ತಿಯಲ್ಲಿ ನೀಡಿದ ಪ್ರದರ್ಶನ, ಧೋನಿ ಔಟ್​ ಆಫ್​ ಫಾರ್ಮ್​ ಆಗಿದ್ದಾರೆ​​ ಅನ್ನೋದನ್ನ ಸಾರಿ ಹೇಳ್ತಿದೆ. ಇದಲ್ಲದೇ ಮ್ಯಾಚ್​​ ಫಿಟ್​ನೆಸ್​​ ವಿಚಾರದಲ್ಲೂ ಧೋನಿ ಹಿಂದುಳಿದಿದ್ದಾರೆ. ಇದೀಗ ಇನ್ನೊಂದು ವರ್ಷವೂ ಉರುಳಿದೆ. ಹೀಗಾಗಿ ಮಾಹಿಗೆ ಮತ್ತೆ ಸಿಎಸ್​ಕೆ ಮಣೆ ಹಾಕುತ್ತಾ ಅನ್ನೋದು ಚರ್ಚೆಯಲ್ಲಿದೆ.

‘ಧೋನಿ ಚೆನ್ನೈ ಸೂಪರ್​ ಕಿಂಗ್ಸ್​​ ತೊರೆಯುವುದಿಲ್ಲ. ಆತ ಆ ಫ್ರಾಂಚೈಸಿಯ ಮಹಾರಾಜ. ಆತ ಕೋಚ್​​ ಆಗಿ ಬದಲಾಗ್ತಾನೆ’’

-ಬ್ರಾಡ್​ ಹಾಗ್​, ಆಸಿಸ್​ ಮಾಜಿ ಕ್ರಿಕೆಟಿಗ

ಧೋನಿ ಭವಿಷ್ಯದ ಬಗೆಗಿನ ಚರ್ಚೆ ಸದ್ಯ ಸೋಷಿಯಲ್​ ಮೀಡಿಯಾಗಳಲ್ಲಿ ವ್ಯಾಪಕ ಚರ್ಚೆಯಾಗ್ತಿದೆ. ಈ ಅಖಾಡಕ್ಕೆ ಧುಮಿಕಿರುವ ಆಸಿಸ್​​ ಮಾಜಿ ಕ್ರಿಕೆಟಿಗ ಬ್ರಾಡ್​ ಹಾಗ್​, ಧೋನಿ ಮುಂದೆ ಕೋಚ್​​ ಆಗ್ತಾರೆ ಅಂತಾ ಪ್ರಿಡಿಕ್ಟ್​ ಮಾಡಿದ್ದಾರೆ. ಧೋನಿ ಚೆನ್ನೈ ಫ್ರಾಂಚೈಸಿಯ ಮಹಾರಾಜ. ಅವರು ಕೋಚ್​​ ಆಗಿ ಬದಲಾಗಲಿದ್ದಾರೆ ಎಂದು ಹಾಗ್​ ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಹಲವರು ಧೋನಿ ಚೆನ್ನೈನ ತಂಡ ಸಲಹೆಗಾರನಾಗಿರಲಿದ್ದಾರೆ ಎಂದು ಹೇಳ್ತಿದ್ದಾರೆ. ಆದ್ರೆ, ಧೋನಿ ಮುಂದಿನ ನಡೆಯನ್ನ ಪ್ರಿಡಿಕ್ಟ್​ ಮಾಡೋದು ಅಷ್ಟು ಸುಲಭದ ವಿಚಾರವಲ್ಲ ಅನ್ನೋದಂತೂ ಸತ್ಯ.

The post 40ನೇ ವರ್ಷಕ್ಕೆ ಕಾಲಿಟ್ಟ ಧೋನಿ ಮುಂದಿನ ಆಯ್ಕೆ ಏನು? CSK ಕೋಚ್ ಅಥವಾ ಸಲಹೆಗಾರನಾಗ್ತಾರಾ? appeared first on News First Kannada.

Source: newsfirstlive.com

Source link