ಬಿಗ್‍ಬಾಸ್ ಮನೆಯಲ್ಲಿ ಸಂಚಾರಿ ವಿಜಯ್ ಸ್ಮರಣೆ ಮಾಡಿದ ಸ್ಪರ್ಧಿಗಳು

ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಎಲ್ಲರೂ ಸೇರಿ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರನ್ನು ಸ್ಮರಣೆ ಮಾಡಿದ್ದಾರೆ. ಇದನ್ನೂ ಓದಿ:  ನಟಿ ಹರಿಪ್ರಿಯಾಗೆ ಹಾಲಿವುಡ್ ಪ್ರಶಸ್ತಿ

 

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸ್ಯಾಂಡಲ್‍ವುಡ್ ನಟ ಸಂಚಾರಿ ವಿಜಯ್ ರಸ್ತೆ ಅಪಘಾತದಲ್ಲಿ ತೀತ್ರವಾಗಿ ಗೊಯಗೊಂಡು ಕೊನೆಯುಸಿರೆಳೆದಿದ್ದಾರೆ. ಇವರ ನೆನಪಿಗಾಗಿ ಭಾವಚಿತ್ರವಿರುವ ಟಿ ಶರ್ಟ್‍ಅನ್ನು ಚಕ್ರವರ್ತಿ ಚಂದ್ರಚೂಡ್ ಧರಿಸಿದ್ದರು. ಈ ವೇಳೆ ಸ್ಪರ್ಧಿಗಳು ಎಲ್ಲಾ ಸೇರಿ ಅವರನ್ನು ನೆನೆದು ಮೌನಾಚರಣೆ ಮಾಡಿದ್ದಾರೆ.

ಏಳು ಜೀವಗಳಿಗೆ ಜೀವವಾದವನೇ..ಪ್ರೀತಿ ಹುಡುಕಾಟದಲ್ಲಿ ರೀತಿ ಮರೆತವನೇ. ನಿನ್ನ ಗೋರಿ ಇರುವ ಈ ಭೂಮಿ ಬರೀ ಪಾಳುಯಾಕಿಷ್ಟು ಅವಸರವಿತ್ತೋ ನೀನೇ ಹೇಳು.ಸೂಲಗಿತ್ತಿಯೊಬ್ಬಳು ಹೆತ್ತ ಸ್ವರ ಮಗುವೇ. ನಮ್ಮಂಥ ಗೆಳೆಯರ ಎದೆಯಲ್ಲಿ ಎಂದೂ ಆರದ ಗಾಯವೇ. ಗೆಳೆತನದ ಪ್ರೀತಿಗೆ ನೀನು ಕಾರುಣ್ಯ. ನಮ್ಮೆಲ್ಲರ ಅಂಗೈಯೊಳಗೆ ಅರಳಿದ ಅರಣ್ಯ. ನಿನಗಾಗಿ ಬರೆಯುವೆ ನಾನು ಕೋಟಿ ಕೋಟಿ ಸಾಲು. ಇರಲಿ ನನಗೆ ನಿನ್ನಗಲಿಕೆಯ ದುಃಖದ ಪಾಲು ಎಂದು ಚಕ್ರವರ್ತಿ ಸಂಚಾರಿ ವಿಜಯ್ ಬಗ್ಗೆ ತಾವು ಬರೆದ ಸಾಲುಗಳನ್ನು ಹೇಳಿದರು.

blank

ಸಂಚಾರಿ ವಿಜಯ್ ಅಗಲಿದ್ದು ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ಲಾಸ್. ಯಾಕಂದ್ರೆ ನ್ಯಾಷನಲ್ ಅವಾರ್ಡ್, ರಾಜ್ಯ ಪ್ರಶಸ್ತಿ ಸೇರಿದಂತೆ ಸಂಗೀತ, ರಂಗಭೂಮಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವನು ಮಾಸ್ಟರ್. ನನಗೆ ತುಂಬಾ ಆತ್ಮೀಯನಾಗಿದ್ದನು. ಕೊನೆಯಲ್ಲಿ ಅವನ ಅಂಗಾಂಗಗಳನ್ನು ದಾನ ಮಾಡಲಾಯಿತು ಎಂದು ಹೇಳಿದ ಚಕ್ರವರ್ತಿ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಪರ್ಧಿಗಳು ಮೌನಾಚರಣೆ ಮಾಡುವ ಮೂಲಕ ಸಂಚಾರಿ ವಿಜಯ್‍ಗೆ ಗೌರವ ಸಲ್ಲಿಸಿದ್ದಾರೆ.

The post ಬಿಗ್‍ಬಾಸ್ ಮನೆಯಲ್ಲಿ ಸಂಚಾರಿ ವಿಜಯ್ ಸ್ಮರಣೆ ಮಾಡಿದ ಸ್ಪರ್ಧಿಗಳು appeared first on Public TV.

Source: publictv.in

Source link