ರಾಜ್ಯದಲ್ಲಿ ಮುಗ್ಧರನ್ನ ಟಾರ್ಗೆಟ್​ ಮಾಡಿ ಮತಾಂತರ.. ಕಾಯ್ದೆ ಜಾರಿಗೆ ಒತ್ತಾಯಿಸಿದ ವಕೀಲರ ತಂಡ

ರಾಜ್ಯದಲ್ಲಿ ಮುಗ್ಧರನ್ನ ಟಾರ್ಗೆಟ್​ ಮಾಡಿ ಮತಾಂತರ.. ಕಾಯ್ದೆ ಜಾರಿಗೆ ಒತ್ತಾಯಿಸಿದ ವಕೀಲರ ತಂಡ

ಬೆಂಗಳೂರು: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವಂತೆ ರಾಜ್ಯ ಯುವ ವಕೀಲರ ತಂಡ ಸರ್ಕಾರಕ್ಕೆ ಒತ್ತಾಯಿಸಿದೆ. ವಕೀಲ ಶ್ರೀನಿಧಿ ಲಿಂಗಪ್ಪ ಅವರ ಟೀಂ‌ ಇಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದ್ದಾರೆ.

ರಾಜ್ಯದ ಅನೇಕ ರಾಜ್ಯಗಳು ಮತಾಂತರ ನಿಷೇಧ ಕಾಯ್ದೆ ಅನುಷ್ಠಾನ ಮಾಡಿವೆ. ಅದರಂತೆ ನಮ್ಮ ರಾಜ್ಯದಲ್ಲೂ ಅನುಷ್ಠಾನ ಮಾಡಿ ಎಂದು ವಕೀಲರು ಕೇಳಿದ್ದಾರೆ. ರಾಜ್ಯದಲ್ಲಿ ಮತಾಂತರ ಕೇಸ್​​ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಈ ಬಗ್ಗೆ ಸರ್ವೆ ನಡೆಸಿದ ಟೀಂ‌ನಿಂದ ಮನವಿ ಸಲ್ಲಿಕೆಯಾಗಿದೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಅರ್ಜಿಯಲ್ಲಿನ ಪ್ರಮುಖ ಅಂಶಗಳು:

  • ರಾಜ್ಯದಲ್ಲಿ ಮುಗ್ಧ ಎಸ್​ಸಿ & ಎಸ್​​ಟಿ ಸಮುದಾಯವನ್ನ ಟಾರ್ಗೆಟ್ ಮಾಡಲಾಗ್ತಿದೆ ಮಾನಸಿಕವಾಗಿ ದುರ್ಬಲರಿರುವವರನ್ನ ಒಂದು ಟೀಂ ಟಾರ್ಗೆಟ್ ಮಾಡ್ತಿದೆ ಎಂದು ಹೇಳಲಾಗಿದೆ.
  • ಹಣದ ಆಮಿಷ ನೀಡಿ, ಸುಳ್ಳು ಭರವಸೆ ಕೊಟ್ಟು ಮತಾಂತರ ಮಾಡಲಾಗ್ತಿದೆ. ಕೊಡಗು, ಚಾಮರಾಜನಗರ ಹಾಗೂ ಮೈಸೂರು ಗ್ರಾಮೀಣ ಭಾಗದಲ್ಲಿ ಇದು ಹೆಚ್ಚಾಗಿದ್ದು, ಪ್ರತಿ ಭಾನುವಾರ ಮುಗ್ಧರನ್ನ ಟಾರ್ಗೆಟ್​​ ಮಾಡಲಾಗ್ತಿದೆ.
  • ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡಿ, ಸರ್ಕಾರದ SC-ST ಸವಲತ್ತು ಪಡೆಯಿರಿ.. ಆದರೆ ಗುರುತಿನ ಚೀಟಿಯಲ್ಲಿ ಕ್ರಿಶ್ಚಿಯನ್ ಅಂತಾ ಹಾಕದಂತೆ ಸೂಚನೆ ನೀಡ್ತಾರೆ ಎನ್ನಲಾಗಿದೆ.
  • ಪ್ರತಿ ಬಾರಿಯೂ ಈ ಬಗ್ಗೆ ಕೆಲ ಪಾದ್ರಿಗಳು ಭೋದನೆ ಮಾಡ್ತಿದ್ದಾರೆಂದು ಆರೋಪಿಸಲಾಗಿದೆ
  • ಕೊಡಗಿನ ಕಾಡು ಕುರುಬರು, ಯರಕರನ್ನ ಹೆಚ್ಚು ಟಾರ್ಗೆಟ್​ ಮಾಡಲಾಗುತ್ತಿದೆ.

ಆದರೆ ಇಂತಹ ಮತಾಂತರಿಗಳ ವಿರುದ್ದ ಕ್ರಮಕ್ಕೆ ಕಠಿಣ ಕಾನೂನು ಇಲ್ಲ. ಬುಡಕಟ್ಟು ಜನರ ಮುಗ್ಧತೆ ದುರ್ಬಳಕೆಗೆ ಈಶಾನ್ಯ ರಾಜ್ಯಗಳೇ ಉದಾಹರಣೆ.  ಇದು ಪರೋಕ್ಷವಾಗಿ ದೇಶವನ್ನ ದುರ್ಬಲಗೊಳಿಸುವ ಹುನ್ನಾರ. ಹೊರ ದೇಶದವರು ಈ ರೀತಿ ಮತಾಂತರದ ಮೂಲಕ ಷಡ್ಯಂತ್ರ ಮಾಡ್ತಿದ್ದಾರೆ. ಮುಂದೆ ಇದು ದೇಶಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಅಮಾಯಕರನ್ನ ರಕ್ಷಣೆ ಮಾಡಬೇಕು. ಹೀಗಾಗಿ ಬೇರೆ ರಾಜ್ಯಗಳಂತೆ ತಕ್ಷಣವೇ ಮತಾಂತರ ನಿಷೇಧ ಕಾಯ್ದೆಯನ್ನ ರಾಜ್ಯದಲ್ಲೂ ಅನುಷ್ಠಾನ ಮಾಡಬೇಕು ಎಂದು  ಮನವಿ ಮಾಡಿದ್ದಾರೆ.

 

The post ರಾಜ್ಯದಲ್ಲಿ ಮುಗ್ಧರನ್ನ ಟಾರ್ಗೆಟ್​ ಮಾಡಿ ಮತಾಂತರ.. ಕಾಯ್ದೆ ಜಾರಿಗೆ ಒತ್ತಾಯಿಸಿದ ವಕೀಲರ ತಂಡ appeared first on News First Kannada.

Source: newsfirstlive.com

Source link