ಟೋಕಿಯೋ ಒಲಿಂಪಿಕ್ಸ್‌ಗೆ ರೈಲ್ವೇ ಕಲೆಕ್ಟರ್ ಆಯ್ಕೆ

ಚೆನ್ನೈ: ಟೋಕಿಯೋ ಒಲಿಂಪಿಕ್ಸ್‌ಗೆ ದಕ್ಷಿಣ ರೈಲ್ವೇ ಟಿಕೆಟ್ ಕಲೆಕ್ಟರ್ ರೇವತಿ ಆಯ್ಕೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್‌ಗೆ ತಮಿಳುನಾಡಿನ ಮಧುರೈ ಮೂಲದ ರೇವತಿ ವೀರಮಣೆ ಆಯ್ಕೆಯಾಗಿದ್ದಾರೆ. ಸದ್ಯ ರೇವತಿ ದಕ್ಷಿಣ ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಲಿಂಪಿಕ್ಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದನ್ನೂ ಓದಿ:  ಅಂದು ಬೆಸ್ಟ್ ಫ್ರೆಂಡ್ ಹೆಂಡ್ತಿಯಾದ್ರು, ಇಂದು ಪತ್ನಿಯೇ ಬೆಸ್ಟ್ ಫ್ರೆಂಡ್: ರಮೇಶ್

ಇದಕ್ಕೂ ಮೊದಲು 1988 ರಲ್ಲಿ ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಮಧುರೈ ಅಥ್ಲೀಟ್ ತಿರುಗ್ನಾನದುರೈ 4100 ಮೀಟರ್ ಪುರುಷರ ವಿಭಾಗದಲ್ಲಿ ಭಾಗವಹಿಸಿದ್ದರು. ರೇವತಿ ವೀರಮಣಿ ರಿಲೇಯಲ್ಲಿ ಭಾಗವಹಿಸಿದ್ದಾರೆ ಎಂದು ದಕ್ಷಿಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ರೇವತಿಗೆ ಸುಮಾರು ಆರು ವರ್ಷ ವಯಸ್ಸಾಗಿದ್ದಾಗ, ಆಕೆಯ ತಂದೆ ಅನಾರೋಗ್ಯದಿಂದ ನಿಧನರಾದರು ಮತ್ತು ಅವರ ತಾಯಿ ಎಂಟು ತಿಂಗಳ ನಂತರ ನಿಧನರಾದರು. ನಂತರ ರೇವತಿ ಮತ್ತು ಆಕೆಯ ತಂದೆ ರೇಖಾ ಅಜ್ಜಿಯ ಜೊತೆಗೆ ಸಕ್ಕಿಮಂಗಲಂನಲ್ಲಿ ವಾಸವಾಗಿದ್ದಾರೆ.

ರೇವತಿ ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್ ಬಗ್ಗೆ ಆಸಕ್ತಿ ವಹಿಸಿದಳು ಮತ್ತು ತನ್ನ ಹಾಸ್ಟೆಲ್ ವಾರ್ಡನ್‍ಗಳ ಪ್ರೇರಣೆಯಿಂದ ರೇಸ್ ಕೋರ್ಸ್ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದಳು. 2015 ರಲ್ಲಿ ಪಿಯುಸಿಯಲ್ಲಿದ್ದಾಗ ರೇವತಿ ಪ್ರತಿಭೆಯನ್ನು ಗುರುತಿಸಿದೆ. ನಾನು ಒಬ್ಬ ಕ್ರೀಡಾಪಟುವನ್ನು ದೇಶವನ್ನು ಪ್ರತಿನಿಧಿಸಲು ಒಲಿಂಪಿಕ್ಸ್‌ಗೆ ಕಳುಹಿಸುವ ಗುರಿಯನ್ನು ಹೊಂದಿದ್ದೇನೆ ಎಂದು ರೇವತಿಯ ಕೋಚ್ ಕೆ ಕಣ್ಣನ್ ಅವರು ಹೇಳಿದ್ದಾರೆ.

ರೇವತಿ ಅವರನ್ನು ದೂರವಾಣಿ ಮೂಲಕ ಅಭಿನಂದಿಸಿದ ವಾಣಿಜ್ಯ ತೆರಿಗೆ ಮತ್ತು ಮಧುರೈ ಪೂರ್ವ ಶಾಸಕ ಪಿ ಮೂರ್ತಿ ಅವರು ಆಕೆಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಹೇಳಿದರು. ಹಣಕಾಸು ಸಚಿವ ಮತ್ತು ಮಧುರೈ ಕೇಂದ್ರ ಶಾಸಕ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಮತ್ತು ಮಧುರೈ ಸಂಸದ ಎಸ್.ವೆಂಕಟೇಶನ್ ಟ್ವೀಟ್ ಮಾಡಿ ಕ್ರೀಡಾಪಟುವಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ:  ಜು.12 ರಂದು ಯಾರೂ ಮನೆಯ ಬಳಿ ಬರಬೇಡಿ: ಶಿವಣ್ಣ ಮನವಿ

ಈ ನಡುವೆ ಮತ್ತೊಬ್ಬ ಸ್ಟಾರ್ ಆಟಗಾರ್ತಿ ಅಥ್ಲಿಟ್ ಹಿಮಾದಾಸ್ ಒಲಿಂಪಿಕ್ಸ್‌ ನಿಂದ ಹೊರಗುಳಿದಿದ್ದಾರೆ. ಕಳೆದ ತಿಂಗಳು ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 100 ಮೀಟರ್ ಓಟದ ವೇಳೆ ಹಿಮಾ ದಾಸ್ ಮಂಡಿ ನೋವಿನಿಂದ ಬಳಲಿದ್ದರು. ಈಗ ಗಾಯದ ಸಮಸ್ಯೆಯಿಂದಲೇ ಅವರು ಒಲಿಂಪಿಕ್ಸ್ ಕ್ರೀಡಾಕೂಡದಿಂದ ಹೊರಗೆ ಉಳಿದಿದ್ದಾರೆ.

The post ಟೋಕಿಯೋ ಒಲಿಂಪಿಕ್ಸ್‌ಗೆ ರೈಲ್ವೇ ಕಲೆಕ್ಟರ್ ಆಯ್ಕೆ appeared first on Public TV.

Source: publictv.in

Source link