ಹೆಚ್​​ಡಿಕೆ ಆಡಿಯೋ ಅಸ್ತ್ರ; ಇವ್ರು ಟೆರರಿಸಂ ನಡೆಸುತ್ತಿದ್ದಾರಾ… ಸುಮಲತಾ ತೀಕ್ಷ್ಣ ಮಾತು

ಹೆಚ್​​ಡಿಕೆ ಆಡಿಯೋ ಅಸ್ತ್ರ; ಇವ್ರು ಟೆರರಿಸಂ ನಡೆಸುತ್ತಿದ್ದಾರಾ… ಸುಮಲತಾ ತೀಕ್ಷ್ಣ ಮಾತು

ಬೆಂಗಳೂರು: ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಕೆಲವರು ಹುಚ್ಚುಚ್ಚರಾಗಿ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಅಕ್ರಮದ ವಿರುದ್ಧ ಹೋರಾಟ ಮಾಡಿದರೆ ನನ್ನನ್ನು ವಿರೋಧ ಮಾಡುತ್ತಿದ್ದಾರೆ ಎಂದು ಸುಮಲತಾ ಅವರು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ ಮತ್ತೆ ಗುಡುಗಿದ್ದಾರೆ.

ಜೆ.ಪಿ ನಗರದ ತಮ್ಮ ನಿವಾಸದ ಬಳಿ ನ್ಯೂಸ್​​ಫಸ್ಟ್​ನೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಅಕ್ರಮ ವಿರುದ್ಧ ಹೋರಾಟ ಮಾಡಿದರೆ ಹುಚ್ಚುಚ್ಚರಾಗಿ ಹೇಳಿಕೆಗಳನ್ನ ಕೊಡುತ್ತಿದ್ದಾರೆ, ನನ್ನ ವಿರೋಧ ಮಾಡುತ್ತಿದ್ದಾರೆ ಎಂದರು.

ಅಂಬರೀಶ್ ಎಲ್ಲೂ ಹೋಗಿಲ್ಲ. ಮಂಡ್ಯ ಜಿಲ್ಲೆಯ ಜನ ನನ್ನ ಜೊತೆ ಇದ್ದಾರೆ. ಡ್ಯಾಂ ಬಿರುಕು ವಿಚಾರವನ್ನ ಹೇಳಿದ್ದೇನೆ. ನನಗಿರುವ ಮಾಹಿತಿತ ಆಧಾರದಲ್ಲಿ ಹೇಳಿದ್ದೇನೆ. ಇದು ನನ್ನ ಅಭಿಪ್ರಾಯ. ಬೇರೆಯವರು ಏನು ಹೇಳಿದ್ದಾರೋ ಗೊತ್ತಿಲ್ಲ. ಜನರಿಗೆ ಒಳ್ಳೆಯದಾಗಬೇಕೆಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇನೆ. ಇದರಿಂದ ಏನು ಪ್ರತಿಫಲವನ್ನೂ ಬಯಸದೆ ಹೋರಾಟ ಮಾಡುತ್ತೇನೆ.

blank

ರೈತರಿಗೆ ವಾಗ್ದಾನ ಕೊಟ್ಟಿದ್ದೇನೆ. ಅದರಂತೆ ಹೋರಾಟ ನಡೆಸುತ್ತಿದ್ದೇನೆ. ಮಂಡ್ಯ ಜಿಲ್ಲೆಯ ಶಾಸಕರು ಅವರ ಕೆಲಸವನ್ನ ಸರಿಯಾಗಿ ಮಾಡುತ್ತಿಲ್ಲ. ಅದರ ಬದಲಿಗೆ ಎಂಪಿ ಕೆಲಸ ಮಾಡುತ್ತಿಲ್ಲ ಎಂದು ತಿರುಚುವುದು ಯಾಕೆ? ಎಂಪಿ ಕೆಲಸ ಯಾವುದು, ಎಂಎಲ್‌ಎ ಕೆಲಸ ಯಾವುದು ಅಂತಾ ಇವರಿಗೆ ಗೊತ್ತಿಲ್ಲವಾ?

ಇದೇ ವೇಳೆ ಆಡಿಯೋ ಬಿಡುಗಡೆ ಮಾಡುವ ಕುಮಾರಸ್ವಾಮಿ ಅವರು ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಆಡಿಯೋ ಇದ್ದಾವೇ, ಅಸ್ತ್ರಗಳು, ಮಿಸೈಲ್​, ಬಾಂಬ್ ಇದೇ ಅಂತಾರೇ.. ಬಾಂಬ್, ಮಿಸೈಲ್ ಇದೇ ಎಂದರೇ ಏನು ಅರ್ಥ. ಇದನ್ನು ನೋಡಿದರೆ ಪಾರ್ಟಿ ನಡೆಸುತ್ತಿದ್ದಾರಾ, ಇಲ್ಲವೇ ಟೆರರಿಸಂ ನಡೆಸುತ್ತಿದ್ದಾರಾ ಎಂಬ ಅನುಮಾನ ಬರುತ್ತಿದೆ. ಅವರು ಯಾವುದೇ ಮಿಸೈಲ್ ಬಿಡಲಿ ಬಿಡಿ, ಎದುರಿಸುತ್ತೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ. ಈ ಹೋರಾಟದಲ್ಲಿ ನಾನು ಏಕಾಂಗಿ ಅಲ್ಲ, ಜನ ನನ್ನೊಂದಿಗೆ ಇದ್ದಾರೆ ಎಂದರು.

ಜಲಾಶಯ, ನದಿಗಳು ರಾಷ್ಟ್ರೀಯ ಸಂಪತ್ತು. ಅದನ್ನ ರಕ್ಷಿಸುವ ಜವಾಬ್ದಾರಿ ನನ್ನದೂ ಕೂಡ ಆಗಿರುತ್ತೆ. ನನ್ನದು ಏಕಾಂಗಿ ಹೋರಾಟವಲ್ಲ. ಜನರು ನನ್ನ ಜೊತೆ ಇದ್ದಾರೆ. ಜಿಲ್ಲೆಯ ಶಾಸಕರು ನನ್ನ ಪರವಾಗಿ ಎಂದೂ ಇಲ್ಲ. ನನಗೆ ಅವರು ಬೇಕಾಗಿಯೂ ಇಲ್ಲ. ಅವರು ನನ್ನ ಜೊತೆ ಬಂದರೆ ಒಳ್ಳೆಯದು ಸ್ವಾಗತಿಸುತ್ತೇನೆ. ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ನಡೆಯುತ್ತಿದೆ. ಆದರೆ, ಅದರ ಪರ ಇರುವವರ ಉದ್ದೇಶ ಏನು ಅನ್ನೋದು ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕುಮಾರಸ್ವಾಮಿ-ಸುಮಲತಾ ವಾಕ್ಸಮರ -ಹೆಚ್​ಡಿಕೆ ಗರಂ ಆಗ್ತಿರೋದು ಯಾಕೆ?

The post ಹೆಚ್​​ಡಿಕೆ ಆಡಿಯೋ ಅಸ್ತ್ರ; ಇವ್ರು ಟೆರರಿಸಂ ನಡೆಸುತ್ತಿದ್ದಾರಾ… ಸುಮಲತಾ ತೀಕ್ಷ್ಣ ಮಾತು appeared first on News First Kannada.

Source: newsfirstlive.com

Source link