ಕೇಂದ್ರದಲ್ಲಿನ್ನು ಹೊಸ ಸಚಿವಾಲಯ; ಮಿನಿಸ್ಟ್ರಿ ಆಫ್ ಕೋ-ಆಪರೇಷನ್​ನ ವಿಶೇಷತೆಯೇನು?

ಕೇಂದ್ರದಲ್ಲಿನ್ನು ಹೊಸ ಸಚಿವಾಲಯ; ಮಿನಿಸ್ಟ್ರಿ ಆಫ್ ಕೋ-ಆಪರೇಷನ್​ನ ವಿಶೇಷತೆಯೇನು?

ಕೇಂದ್ರ ಸರ್ಕಾರದಲ್ಲಿ ಮತ್ತೊಂದು ಹೊಸ ಮಿನಿಸ್ಟ್ರಿ ಕ್ರಿಯೇಟ್​ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿವಿಧ ಇಲಾಖೆ, ವಿವಿಧ ಕ್ಷೇತ್ರಗಳ ನಡುವೆ ಸಮನ್ವಯತೆ ಸಾಧಿಸುವುದಕ್ಕಾಗಿ ಈ ಮಿನಿಸ್ಟ್ರಿಯನ್ನು ಕ್ರಿಯೇಟ್ ಮಾಡಿದೆ ಅಂತಾ ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಪ್ರಧಾನ ಮಂತ್ರಿ ಸಂಪುಟಕ್ಕೆ ಇಂದು ಹಲವರು ಸೇರ್ಪಡೆಯಾಗುತ್ತಿದ್ದಾರೆ, ಈ ನಡುವೆ ಮಿನಿಸ್ಟ್ರಿ ಆಫ್ ಕೋ-ಆಪರೇಷನ್ ಅನ್ನು ಕೂಡ ಕೇಂದ್ರ ಸರ್ಕಾರ ಪರಿಚಯಿಸಿದೆ.

ಸಹಕಾರದಿಂದ ಸಮೃದ್ಧಿ ಅನ್ನೋ ಮಂತ್ರದೊಂದಿಗೆ ಈ ಮಿನಿಸ್ಟ್ರಿಯನ್ನು ಸ್ಥಾಪನೆ ಮಾಡಲಾಗಿದ್ದು, ಇದು ದೇಶದಲ್ಲಿ ಸಹಕಾರ ಚಳವಳಿ ಗಟ್ಟಿಗೊಳಿಸಲು ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಸಚಿವಾಲಯದ ಪ್ರಮುಖ ಕಾರ್ಯವೇನು?

  1. ದೇಶದಲ್ಲಿ ಸಹಕಾರ ಪ್ರಕ್ರಿಯೆ ಅಭಿವೃದ್ಧಿಗೆ ಸಹಯೋಗ
  2. ಆಡಳಿತಾತ್ಮಕ, ಕಾನೂನಾತ್ಮಕ ಮತ್ತು ನೀಯಮ ರೂಪಿಸಲು ಸಹಕಾರ
  3. ಈಸ್ ಆಫ್ ಡೂಯಿಂಗ್ ಬುಸಿನೆಸ್​ ಅಥವಾ ಉದ್ಯಮ ನಿರ್ವಹಣೆ ಮತ್ತು ಸ್ಥಾಪನೆ ಸರಾವಾಗಿ ಕಾರ್ಯ ನಿರ್ವಹಿಸಲು ಸಹಕಾರ
  4. ವಿವಿಧ ರಾಜ್ಯಗಳ ನಡುವಿನ ಸಹಕಾರಿ-ಸಂಸ್ಥೆಗಳ ನಡುವೆ ಸಮನ್ವಯತೆ
  5. ಈ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡುವುದು ಮತ್ತು ಅಡೆ ತಡೆಗಳು ಬಾರದಂತೆ ಸಮನ್ವಯತೆ ಸಾಧಿಸುವುದು

The post ಕೇಂದ್ರದಲ್ಲಿನ್ನು ಹೊಸ ಸಚಿವಾಲಯ; ಮಿನಿಸ್ಟ್ರಿ ಆಫ್ ಕೋ-ಆಪರೇಷನ್​ನ ವಿಶೇಷತೆಯೇನು? appeared first on News First Kannada.

Source: newsfirstlive.com

Source link