ಸಂಭಾವ್ಯ ಸಚಿವರ ಪಟ್ಟಿ ನ್ಯೂಸ್​​ಫಸ್ಟ್​ ಲಭ್ಯ; ಯಾರೆಲ್ಲ ಆಗ್ತಾರೆ ಮೋದಿ ಮಿನಿಸ್ಟರ್ಸ್?

ಸಂಭಾವ್ಯ ಸಚಿವರ ಪಟ್ಟಿ ನ್ಯೂಸ್​​ಫಸ್ಟ್​ ಲಭ್ಯ; ಯಾರೆಲ್ಲ ಆಗ್ತಾರೆ ಮೋದಿ ಮಿನಿಸ್ಟರ್ಸ್?

ನವದೆಹಲಿ: ಭಾರೀ ನಿರೀಕ್ಷೆ ಮೂಡಿಸಿದ್ದ ಕೇಂದ್ರ ಸಚಿವ ಸಂಪುಟ ವಿಸ್ತರಣೆ/ಪುನಾರಚನೆಗೆ ಇಂದು ನಡೆಯುವ ಸಾಧ್ಯತೆ ಇದ್ದು, ಸಂಪುಟ ವಿಸ್ತರಣೆ ವಿಚಾರವಾಗಿ ಈಗಾಗಲೇ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ. ನೂತನ ಸಚಿವ ಘೋಷಣೆಗೂ ಮುನ್ನ ಮೋದಿ ಅವರನ್ನು ನಾಯಕರು ಭೇಟಿ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾಗಿರುವ ಮೋದಿ, ಹಲವು ಯುವ ಮುಖಗಳಿಗೆ ತಮ್ಮ ಸಂಪುಟದಲ್ಲಿ ಸ್ಥಾನ ನೀಡಿರುವ ಸಾಧ್ಯತೆ ಇದೆ. ಯಾರಿಗೆಲ್ಲಾ ಈ ಬಾರಿ ಸಚಿವ ಸ್ಥಾನ ಲಭ್ಯವಾಗಬಹುದು ಎಂಬ ಸಂಭಾವ್ಯ ಪಟ್ಟಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ. ಈಗಾಗಲೇ ಮೋದಿ ಸಂಪುಟದಲ್ಲಿದ್ದ ಶಿಕ್ಷಣ ರಮೇಶ್​ ಪೋಖ್ರಿಯಾಲ್​​ ಹಾಗೂ ಕಾರ್ಮಿಕ ಇಲಾಖೆ ಸಚಿವ ಸಚಿವ ಸಂತೋಷ್ ಗಂಗ್ವಾರ್​ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ.

ಸಂಭಾವ್ಯ ಸಚಿವರ ಪಟ್ಟಿ ಇಂತಿದೆ…
1. ಜ್ಯೋತಿರಾಧಿತ್ಯ ಸಿಂಧಿಯಾ
2. ಸರ್ವಾನಂದ ಸೋನಾವಾಲ್
3. ಪಶುಪತಿನಾಥ್‌ ಪಾರಸ್
4. ನಾರಾಯಣ್‌ ರಾಣೆ
5. ಭೂಪೇಂದ್ರ ಯಾದವ್
6. ಅನುಪ್ರಿಯ ಪಟೇಲ್
7. ಕಪಿಲ್ ಪಾಟೀಲ್
8. ಮೀನಾಕ್ಷಿ ಲೇಖಿ
9. ರಾಹುಲ್‌ ಕಸಾವಾ
10. ಅಶ್ವಿನಿ ವೈಷ್ಣವ್
11. ಶಾಂತನು ಠಾಕೂರ್
12. ವಿನೋದ್ ಸೋನಕರ್
13. ಪಂಕಜ ಚೌಧರಿ
14. ಆರ್.ಸಿ.ಪಿ. ಸಿಂಹ (ಜೆಡಿಯು)
15. ದಿಲೇಶ್ವರ್ ಕಾಮತ್ (ಜೆಡಿಯು)
16. ಚಂದ್ರೇಶ್ವರ್ ಪ್ರಸಾದ್ ಚಂದ್ರವಂಶಿ (ಜೆಡಿಯು)
17. ರಾಮನಾಥ್‌ ಠಾಕೂರ್ (ಜೆಡಿಯು)
18. ರಾಜ್‌ಕುಮಾರ್‌ ರಂಜನ್
19. ಬಿ.ಎಲ್.ವರ್ಮ
20 ಅಜಯ್ ಮಿಶ್ರಾ
21. ಹಿನಾ ಗಾವಿತ್
22. ಶೋಭಾ ಕರಂದ್ಲಾಜೆ
23. ಅಜಯ್‌ ಭಟ್‌
24. ಪ್ರೀತಮ್ ಮುಂಡೆ

 

 

The post ಸಂಭಾವ್ಯ ಸಚಿವರ ಪಟ್ಟಿ ನ್ಯೂಸ್​​ಫಸ್ಟ್​ ಲಭ್ಯ; ಯಾರೆಲ್ಲ ಆಗ್ತಾರೆ ಮೋದಿ ಮಿನಿಸ್ಟರ್ಸ್? appeared first on News First Kannada.

Source: newsfirstlive.com

Source link