ಸಂಪುಟ ವಿಸ್ತರಣೆಗೆ ಕ್ಷಣಗಣನೆ; ಯುವ ಸಂಸದರಿಗೆ ಮೋದಿ ಮಣೆ

ಸಂಪುಟ ವಿಸ್ತರಣೆಗೆ ಕ್ಷಣಗಣನೆ; ಯುವ ಸಂಸದರಿಗೆ ಮೋದಿ ಮಣೆ

ನವದೆಹಲಿ: ಇಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗ್ತಿದ್ದು, ಮೋದಿ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸಂಸದರ ಹೆಸರು ಫೈನಲ್ ಆಗಿದೆ.

43 ನೂತನ ಸಚಿವರು ಮೋದಿ ಸಂಪುಟ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗ್ತಿದೆ. ಅದ್ರಲ್ಲೂ ಈ ಬಾರಿ ಯುವ ಸಂಸದರಿಗೆ ಮೋದಿ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ. 50 ವರ್ಷಕ್ಕೂ ಕಡಿಮೆ ವಯಸ್ಸಿನ 14 ಸಚಿವರು ಇಂದು ಮೋದಿ ಕ್ಯಾಬಿನೆಟ್​​ಗೆ ಸೇರ್ಪಡೆಯಾಗಲಿದ್ದಾರೆ ಅಂತ ತಿಳಿದುಬಂದಿದೆ.

ಇನ್ನು ಮಹಿಳಾ ಸಂಸದರಿಗೂ ಕ್ಯಾಬಿನೆಟ್​​​ನಲ್ಲಿ ಮನ್ನಣೆ ನೀಡಲಾಗಿದ್ದು, ಇಬ್ಬರಿದ್ದ ಮಹಿಳಾ ಸಚಿವರ ಸಂಖ್ಯೆ ಈ ಬಾರಿ 11ಕ್ಕೆ ಏರಿಕೆಯಾಗ್ತಿದೆ. 27 ಒಬಿಸಿ, 8 ಎಸ್​ಟಿ ,12 ಎಸ್​ಸಿ ಸಚಿವರಿಗೆ ಅವಕಾಶ ನೀಡಲಾಗಿದೆಯಂತೆ. ಹಾಗೇ 13 ವಕೀಲರು, 6 ವೈದ್ಯರು, 5 ಎಂಜಿನಿಯರ್ಸ್, ನಾಗರೀಕ ಸೇವೆಯಲ್ಲಿದ್ದ 7 ಸಚಿವರನ್ನ ಸೇರಿಸಿಕೊಳ್ಳಲಾಗ್ತಿದೆ. ಅಲ್ಪಸಂಖ್ಯಾತ ಸಮುದಾಯದ 5 ಸಚಿವರು ಸಂಪುಟದಲ್ಲಿದ್ದಾರೆ. ನೂತನ ಸಂಪುಟದಲ್ಲಿ ನಾಲ್ವರು ಮಾಜಿ ಸಿಎಂಗಳು ಇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

The post ಸಂಪುಟ ವಿಸ್ತರಣೆಗೆ ಕ್ಷಣಗಣನೆ; ಯುವ ಸಂಸದರಿಗೆ ಮೋದಿ ಮಣೆ appeared first on News First Kannada.

Source: newsfirstlive.com

Source link