ಪ್ರಜ್ವಲ್​ ಹೆಸರು ಹೇಳಿ ನಮ್ಮ ಕುಟುಂಬ ಒಡೆಯಲು ಮುಂದಾಗಿದ್ದೀರಾ? ಸುಮಲತಾಗೆ ಹೆಚ್​ಡಿಕೆ ಪ್ರಶ್ನೆ

ಪ್ರಜ್ವಲ್​ ಹೆಸರು ಹೇಳಿ ನಮ್ಮ ಕುಟುಂಬ ಒಡೆಯಲು ಮುಂದಾಗಿದ್ದೀರಾ? ಸುಮಲತಾಗೆ ಹೆಚ್​ಡಿಕೆ ಪ್ರಶ್ನೆ

ಬೆಂಗಳೂರು: ನಮ್ಮ ಕುಟುಂಬ ಒಡೆಯಲು ಪ್ರಜ್ವಲ್ ರೇವಣ್ಣ ಹೆಸರು ಬಳಸಿದ್ದಾರೆ. ಮಂಡ್ಯದಲ್ಲಿ ಇವರು ಏನು ಕೆಲಸ ಮಾಡಿದ್ದಾರೆ. ಇವರು ಜನ ಸತ್ತಾಗ ಹೋಗಲಿಲ್ಲ. ಈಗ ಕಲ್ಲು ಗಣಿಗಾರಿಕೆ ವೀಕ್ಷಿಸಲು ಹೋಗಿದ್ದಾರೆ ಎಂದು ಸಂಸದೆ ಸುಮಲತಾ ವಿರುದ್ಧ ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್​​ಡಿಕೆ, ಮಂಡ್ಯದಲ್ಲಿ ಅವರು ಏನು ಕೆಲಸ ಮಾಡುತ್ತಿದ್ದಾರೆ? ಜನರು ಸತ್ತಗಾ ಹೋಗದೆ… ಕಲ್ಲು ಗಣಿಗಾರಿಕೆ ವೀಕ್ಷಣೆ ಮಾಡಲು ಹೋಗುತ್ತಿದ್ದಾರೆ. ನನಗೆ ಸಂಸ್ಕೃತಿ ಪಾಠ ಅವರು ಹೇಳಿ ಕೊಡುತ್ತಾರಾ? ಇವರಿಂದ ಪಾಠ ಕಲಿಯಬೇಕಾ ಎಂದು ಪ್ರಶ್ನೆ ಮಾಡಿದರು.

blank

ಅಂಬರೀಶ್ ಬದುಕಿದ್ದಾಗ ಹೇಗೆ ನೋಡಿಕೊಂಡ್ರು ಗೊತ್ತಿಲ್ವಾ? ಸ್ನೇಹಿತ ಅಂಬರೀಶ್​ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದರು. ಮಂಡ್ಯಕ್ಕೆ ದೇಹ ತೆಗೆದುಕೊಂಡು ಹೋಗಬಾರದು ಅಂದ್ರು… ಯಾವುದೇ ಕಾರಣಕ್ಕೂ ಮಂಡ್ಯಕ್ಕೆ ಬೇಡ ಅಂದಿದ್ದರು. ವಿಕ್ರಮ್‌ ಆಸ್ಪತ್ರೆಯಲ್ಲಿ ಹೇಗೆ ನಡೆದುಕೊಂಡ್ರು ಗೊತ್ತಿದೆ. ಮಂಡ್ಯಕ್ಕೆ ಮೃತದೇಹ ತೆಗೆದುಕೊಂಡು ಹೋಗಿದ್ದು ನಾನು. ಡಿಫೆನ್ಸ್ ಮಿನಿಸ್ಟರ್ ಬಳಿ ಎಲ್ಲಾ ಮಾತಾಡಿ ಓಡಾಡಿದೆ. ಈಗ ಮಂಡ್ಯ ಜಿಲ್ಲೆ, ಅಂಬರೀಶ್ ಬಗ್ಗೆ ಚರ್ಚೆ ಮಾಡ್ತೀರಾ? ಪಾರ್ಥಿವ ಶರೀರದ ಮುಂದೆ ಮಂಡ್ಯದ ಮಣ್ಣು ಮುಖಕ್ಕೆಲ್ಲಾ ಬಳಿದುಕೊಂಡರು ಏನೆಲ್ಲಾ ನಡೆದುಕೊಂಡಿದ್ದು ನೋಡಿದೆ.. ಈಗ ಅಂಬರೀಶ್ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆಯಾ ? ಸಿನಿಮಾದಲ್ಲಿ ನಟಿಸಿದಂತೆ ಇಲ್ಲೂ ಅಂದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಹೆಚ್​​ಡಿಕೆ ಆಡಿಯೋ ಅಸ್ತ್ರ; ಇವ್ರು ಟೆರರಿಸಂ ನಡೆಸುತ್ತಿದ್ದಾರಾ… ಸುಮಲತಾ ತೀಕ್ಷ್ಣ ಮಾತು

ಮಹಿಳೆಯರ ಬಗ್ಗೆ ಯಾವಾತ್ತು ಅಕ್ಷೇಪಾರ್ಹ ಹೇಳಿಕೆ ಕೊಟ್ಟಿಲ್ಲ.. ನಾನು ಯಾಕೆ ಕ್ಷಮೆ ಕೇಳಬೇಕು. ನನಗೂ ಸಂಸ್ಕ್ರತಿ ಗೊತ್ತಿದೆ. ಕ್ಷಮೆ ಕೇಳುವಂತಹ ಯಾವ ಪದವನ್ನೂ ಬಳಸಿಲ್ಲ. ಗಣಿಗಾರಿಕೆ ಎಷ್ಟು ವರ್ಷದಿಂದ ನಡೆಯುತ್ತಿದೆ. ಈ ಹೆಣ್ಣು ಮಗಳು ಬಂದ ಮೇಲೆ ನಡೆಯುತ್ತಿರೋದಾ? ಇದನ್ನ ಸಿಬಿಐ ತನಿಖೆಗೆ ಕೊಡಲಿ. ರಾಜ್ಯದ ಸಂಪತ್ತನ್ನು ಲೂಟಿ ಮಾಡಲು ಅವಕಾಶ ನೀಡಿಲ್ಲ. ನನ್ನ ತೇಜೋವಧೆ ನಡೆಯುತ್ತಿದೆ. ಮಾಧ್ಯಮಗಳು ಏನು ಮಾಡುತ್ತಿದ್ದಾರೆ ಅನ್ನೋದು ಗೊತ್ತಿದೆ. ಪ್ರತಿನಿತ್ಯ ತೇಜೋವಧೆ ನಡೆಯುತ್ತಿದೆ. ದೇವೇಗೌಡರ ವಿರುದ್ಧ ಏನೆಲ್ಲಾ ಷಡ್ಯಂತ್ರ ನಡೆಯಿತು ಅಂತಾ ಗೊತ್ತಿದೆ. ಆದರೆ ದೇವೇಗೌಡರು ಪ್ರಧಾನಿ ಆಗೋದನ್ನ ತಪ್ಪಿಸಲು ಆಯ್ತಾ..?

ಮಂಡ್ಯದಲ್ಲೇ ಸುಮಲತಾರನ್ನ ಸೋಲಿಸುವ ಶಪಥ…
ನಮ್ಮ ಕುಟುಂಬವನ್ನು ಸೋಲಿಸಿದ್ದು ಮಂಡ್ಯದಲ್ಲೇ ಅಲ್ವಾ..? ಮುಂದಿನ ರಾಜಕಾರಣವನ್ನು ಮಂಡ್ಯದಲ್ಲೇ ತೋರಿಸುತ್ತೇನೆ. ಮಂಡ್ಯದಿಂದಲೇ ಪ್ರಾರಂಭ ಮಾಡುತ್ತೇನೆ. ಸಹೋದರ ಅಂಬರೀಶ್ ಮೃತಪಟ್ಟಾಗ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ ಅಂತ ಜನತೆಗೆ ಗೊತ್ತಿದೆ. ಇವತ್ತು ಮಂಡ್ಯ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಹೆಚ್​​ಡಿಕೆ ಆಡಿಯೋ ಅಸ್ತ್ರ; ಇವ್ರು ಟೆರರಿಸಂ ನಡೆಸುತ್ತಿದ್ದಾರಾ… ಸುಮಲತಾ ತೀಕ್ಷ್ಣ ಮಾತು

The post ಪ್ರಜ್ವಲ್​ ಹೆಸರು ಹೇಳಿ ನಮ್ಮ ಕುಟುಂಬ ಒಡೆಯಲು ಮುಂದಾಗಿದ್ದೀರಾ? ಸುಮಲತಾಗೆ ಹೆಚ್​ಡಿಕೆ ಪ್ರಶ್ನೆ appeared first on News First Kannada.

Source: newsfirstlive.com

Source link