ಕಮ್​​ಬ್ಯಾಕ್​ಗೆ ಪಾಂಡೆ ಸಜ್ಜು -ವಿಶ್ವಕಪ್​​ಗೆ ಸ್ಥಾನ ಭದ್ರಪಡಿಸಿಕೊಳ್ತಾರಾ ಮನೀಷ್​​?

ಕಮ್​​ಬ್ಯಾಕ್​ಗೆ ಪಾಂಡೆ ಸಜ್ಜು -ವಿಶ್ವಕಪ್​​ಗೆ ಸ್ಥಾನ ಭದ್ರಪಡಿಸಿಕೊಳ್ತಾರಾ ಮನೀಷ್​​?

ಟೀಮ್ ಇಂಡಿಯಾದಲ್ಲಿ ಯುವ​ ಕ್ರಿಕೆಟಿಗರ​ ಎಂಟ್ರಿಯಿಂದಾಗಿ ಕೆಲ ಪ್ರಮುಖ ಆಟಗಾರರ ಸ್ಥಾನ ಅತಂತ್ರಕ್ಕೆ ಸಿಲುಕಿಸಿದೆ. ಇದೇ ಸ್ಥಿತಿ ಕನ್ನಡಿಗನೋರ್ವನ ವೃತ್ತಿ ಜೀವನಕ್ಕೆ ಕುತ್ತು ತಂದಿದೆ. ಯಾಕಂದ್ರೆ ಆತನ ಕಳಪೆ ಫಾರ್ಮ್​​ನ ದೋಣಿ​​, ಆತನನ್ನೇ ಮುಳುಗಿಸುವಂತಿದೆ. ಹಾಗಾದರೆ ಸದ್ಯ ಕಲ್ಲು ಮುಳ್ಳಿನ ಹಾದಿಯಲ್ಲಿ ಸಾಗ್ತಿರುವ ಕನ್ನಡಿಗ ಯಾರು.?

ಲಂಕಾ ದಹನಕ್ಕೂ ಮುನ್ನ ಶಸ್ತ್ರಾಭ್ಯಾಸ ನಡೆಸಿರುವ ಟೀಮ್​ ಇಂಡಿಯಾ, ಟೂರ್ನಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ತಿದೆ. ಈಗಾಗಲೇ ಮೊದಲ ಇನ್​​​​ಟ್ರಾ ಸ್ವ್ಕಾಡ್​ ಪಂದ್ಯ ಕೂಡ ಮುಗಿಸಿದೆ. ಭುವನೇಶ್ವರ್ ಕುಮಾರ್ ತಂಡದ ವಿರುದ್ಧ ಶಿಖರ್​ ಧವನ್​ ಪಡೆ ಸೋತರೂ, ಆಕರ್ಷಿಸಿದ್ದು ಮಾತ್ರ ಕನ್ನಡಿಗ ಮನೀಷ್​​ ಪಾಂಡೆ ಬ್ಯಾಟಿಂಗ್​​. 43 ಎಸೆತಗಳಲ್ಲಿ ಮನೀಷ್​, 63 ರನ್​ ಸಿಡಿಸಿ ಸರಣಿಗೂ ಮುನ್ನ ಭರವಸೆ ಮೂಡಿಸಿದ್ದಾರೆ. ಆದರೆ ಕನ್ನಡಿಗ ಮನೀಷ್​ ಪಾಂಡೆಗೆ, ಶ್ರೀಲಂಕಾ ಸರಣಿ ಡು ಆರ್​ ಡೈ ಸರಣಿ.

ಯೆಸ್, ಶ್ರೀಲಂಕಾ ಸರಣಿಯೇ ಮಾಡು ಇಲ್ಲವೇ ಮಡಿ ಆಗೋದಕ್ಕೆ, ಪಾಂಡೆಯ ಸತತ ವೈಫಲ್ಯವೇ ಕಾರಣ. ಆ ಮೂಲಕ ಪಾಂಡೆ, ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಇಂಜುರಿ ಕಾರಣ ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಿಂದ ಮನೀಷ್ ಹೊರಗುಳಿದಿದ್ರು. ಅತ್ತ ಐಪಿಎಲ್​​ನಲ್ಲೂ​ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಹೀಗಾಗಿ ತಂಡಕ್ಕೆ ಕಮ್​​ಬ್ಯಾಕ್​ ಮಾಡೋಕೆ ಇರುವ ಒಂದೇ ಒಂದು ಮಾರ್ಗ, ಲಂಕಾ ಸರಣಿ. ಇಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದಿಂದಲೇ ಗೇಟ್​ಪಾಸ್​​​ ಆಗೋ ಮುನ್ಸೂಚನೆ ಅಳಿಸಿಹಾಕಬೇಕಿದೆ.

ವಿಶ್ವಕಪ್​​ಗೆ ಸ್ಥಾನ ಭದ್ರಪಡಿಸಿಕೊಳ್ತಾರಾ ಮನೀಷ್​​..?
ಶಿಖರ್​ ಧವನ್​ ನೇತೃತ್ವದ ತಂಡದಲ್ಲಿ ಪ್ರತಿಯೊಂದು ಸ್ಲಾಟ್​​ಗೂ, ಪೈಪೋಟಿ ಹೆಚ್ಚಾಗಿದೆ. ಅತ್ತ ಅನುಭವಿ ಮನೀಷ್​ ಕಣಕ್ಕಿಳಿಯೋದು ಕೂಡ ಕನ್ಫರ್ಮ್​ ಆಗಿದೆ. ಈ ಹಿಂದೆ ಟೀಮ್​​ ಮ್ಯಾನೇಜ್​ಮೆಂಟ್​ ನಂಬಿಕೆ ಉಳಿಸಿಕೊಳ್ಳುವಲ್ಲಿ ಎಡವಿದ್ದ ಮನೀಷ್​​ಗೆ, ಲಂಕಾದಲ್ಲಿ ಹೊಸ ಚಾಲೆಂಜ್​​ ಎದುರಾಗಿದೆ. ಲಂಕಾ ಸರಣಿಯಲ್ಲಿ ಸಿಂಹಳೀಯರನ್ನ ಬೇಟೆಯಾಡೋ ಮೂಲಕ ಮ್ಯಾನೇಜ್​​ಮೆಂಟ್​ ನಂಬಿಕೆಯನ್ನ ಉಳಿಸಿಕೊಳ್ಳೋ ಪ್ರಯತ್ನ ಮಾಡಬೇಕಿದೆ. ಆ ಮೂಲಕ ಟಿ-20 ವಿಶ್ವಕಪ್​ಗೂ ತಮ್ಮ ಸ್ಥಾನವನ್ನ ಜೀವಂತವಾಗಿಸಿಕೊಳ್ಳಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಪೈಪೋಟಿ – ಪಾಂಡೆಗೆ ಹೆಚ್ಚಿದ ಒತ್ತಡ!
ಟೀಮ್​ ಇಂಡಿಯಾ ಅಕ್ಟೋಬರ್​-ನವೆಂಬರ್​​ನಲ್ಲಿ ನಡೆಯಲಿರೋ ಟಿ20 ವಿಶ್ವಕಪ್​​ಗೆ ಸಜ್ಜಾಗ್ತಿದೆ. ಪ್ರತಿ ​​ಸ್ಲಾಟ್​​ಗೂ, ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಕಾಂಪಿಟೇಷನ್​ ಹೆಚ್ಚಾಗಿರೋದ್ರಿಂದ ಮನೀಷ್​​​ಗೆ ಒತ್ತಡ ಹೆಚ್ಚಾಗಿದೆ. ಈಗಾಗಲೇ ಇಂಗ್ಲೆಂಡ್​ ಸರಣಿಯಲ್ಲಿ ಸೂರ್ಯಕುಮಾರ್​​ ಯಾದವ್​ ಮತ್ತು ಇಶಾನ್​ ಕಿಶಾನ್​ ಟಫ್​ ಫೈಟರ್ಸ್​ ಆಗಿದ್ದಾರೆ. ಇದರ ಜೊತೆಗೆ ಸಂಜು ಸ್ಯಾಮ್ಸನ್​ ಕೂಡ ಸಾಲಿನಲ್ಲಿದ್ದಾರೆ. ಹಾಗಾಗಿ ಮನೀಷ್​ ಪಾಂಡೆ ಲಂಕಾ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಬೇಕಿರೋದು, ಅನಿವಾರ್ಯವಾಗಿದೆ.
ಕನ್ನಡಿಗ ಮನೀಷ್ ಪಾಂಡೆ ಸದ್ಯದ ಪರಿಸ್ಥಿತಿ, ಎರಡು ದೋಣಿಗಳ ಮೇಲೆ ಕಾಲಿಟ್ಟಾಂತಾಗಿದೆ. ಪಾಂಡೆ, ಲಂಕಾ ಸರಣಿಯಲ್ಲಿ ಉತ್ತಮ​ ಪರ್ಫಾಮೆನ್ಸ್ ನೀಡಲಿ. ರಾಷ್ಟ್ರೀಯ ತಂಡಕ್ಕೆ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡಲಿ ಅನ್ನೋದೆ, ಕನ್ನಡಿಗರ ಆಶಯವಾಗಿದೆ.

The post ಕಮ್​​ಬ್ಯಾಕ್​ಗೆ ಪಾಂಡೆ ಸಜ್ಜು -ವಿಶ್ವಕಪ್​​ಗೆ ಸ್ಥಾನ ಭದ್ರಪಡಿಸಿಕೊಳ್ತಾರಾ ಮನೀಷ್​​? appeared first on News First Kannada.

Source: newsfirstlive.com

Source link