100 ಕೆಜಿ ಮೀನು ಖರೀದಿಸಿದ ನಲಪಾಡ್; ಕರಾವಳಿಯಲ್ಲಿ ​ಯುವ ನಾಯಕನಿಗೆ ಮುಜುಗರ

100 ಕೆಜಿ ಮೀನು ಖರೀದಿಸಿದ ನಲಪಾಡ್; ಕರಾವಳಿಯಲ್ಲಿ ​ಯುವ ನಾಯಕನಿಗೆ ಮುಜುಗರ

ಉಡುಪಿ: ಯೂತ್​ ಕಾಂಗ್ರೇಸ್​ನ ಮುಂದಿನ ಪಟ್ಟಾಭಿಷೇಕ ಖಾತ್ರಿ ಆಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಸೇರಿ ಉಡುಪಿಯ ಮಲ್ಪೆ ಬಂದರಿಗೆ ಭೇಟಿ ನೀಡಿದ್ದಾರೆ ಮಹಮ್ಮದ ನಲಪಾಡ್​. ಮಲ್ಪೆ ಬಂದರನ್ನು ಜೊತೆಯಾಗಿ ಸುತ್ತಾಡಿ, ಪಕ್ಕದಲ್ಲಿನ ಮೀನು ಮಾರುಕಟ್ಟೆಗೂ ಭೇಟಿ ನೀಡಿ ಮೀನು ಮಾರಾಟಗಾರರ ಜೊತೆ ಮಾತಿಗಿಳಿದಿದ್ದಾರೆ.

ಕೊರೊನಾ ಮಹಾಮಾರಿಯಿಂದಾಗಿ ಮೀನಿನ ವ್ಯಾಪಾರ ತುಂಬ ಡಲ್​ ಆಗಿದ್ದು, ಯಾವುದೇ ಲಾಭ ಆಗುತ್ತಿಲ್ಲ ಎಂದು ಮೀನು ವ್ಯಾಪಾರಸ್ಥರು ನಲಪಾಡ್​ ಬಳಿ ನೋವು ತೊಡಿಕೊಂಡ ಬೆನ್ನಲ್ಲೆ ಜೇಬಿನಿಂದ ಕಂತೆ ಕಂತೆ ಹಣ ತೆಗೆದು ಎರಡು ಸಾವಿರಕ್ಕೆ ಕೆಜಿಯಂತೆ ಬರೋಬ್ಬರಿ 100 ಕೆಜಿ ಮೀನುಗಳನ್ನ ಖರೀದಿಸಿದ್ದಾರೆ.

ಇನ್ನು ಮೀನುಗಾರ ಮಹಿಳೆಯರು ಎಲ್ಲ ಪಕ್ಷದವರೂ ಒಂದೇ ಆಗಿದ್ದು, ಯಾವ ರಾಜಕೀಯ ಪಕ್ಷದಿಂದಲೂ ಮೀನುಗಾರರಿಗೆ ಪ್ರಯೋಜನೆ ಆಗಿಲ್ಲ ಎಂದಾಗ ನಲಪಾಡ್​ ಮುಜುಗರಕ್ಕೊಳಗಾಗಿ ಸಮಜಾಯಿಷಿ ಕೊಡುತ್ತಲೇ ಅಲ್ಲಿಂದ ನಡೆದಿದ್ದಾರೆ.

The post 100 ಕೆಜಿ ಮೀನು ಖರೀದಿಸಿದ ನಲಪಾಡ್; ಕರಾವಳಿಯಲ್ಲಿ ​ಯುವ ನಾಯಕನಿಗೆ ಮುಜುಗರ appeared first on News First Kannada.

Source: newsfirstlive.com

Source link